ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ. ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು --- -- ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ ಎಂಬ ಉತ್ತರ ನಮ್ಮದು. ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತ
ಚ. ವಾಸುದೇವಯ್ಯನವರ 'ಕನ್ನಡ ಬಾಲಭೋದೆ' - ಅವರ ಮೊಮ್ಮಗನಾದ ಪ್ರೊ. ಚ. ಪ್ರಕಾಶ್ ಅವರು Congress in Washington DC ಲೈಬ್ರರಿಯಿಂದ ದೊರಕಿಸಿಕೊಟ್ಟ ಪುಸ್ತಕ. https://archive.org/details/Kannada-balabodhe-cha-vasudevayya/mode/2up #kannada #digitization ಅವರು ಬರೆದಿದ್ದ ಇನ್ನೆರಡು ಪುಸ್ತಕಗಳನ್ನು ಈಗಾಗಲೇ ಇಲ್ಲಿ ಉಳಿಸಿದ್ದೆವು - https://pustaka.sanchaya.net/?utf8=%E2%9C%93&search=%E0%B2%B5%E0%B2%BE%E0%B2%B8%E0%B3%81%E0%B2%A6%E0%B3%87%E0%B2%B5%E0%B2%AF%E0%B3%8D%E0%B2%AF ಅವರು ಸರ್. ಎಂ. ವಿಶ್ವೇಶ್ವರಯ್ಯನವರಿಗೂ ಮಾರ್ಗದರ್ಶಕರಾಗಿದ್ದನ್ನು, ಡಿ.ವಿ.ಜಿ ಅವರ ಬಗ್ಗೆ ಬರೆದದ್ದನ್ನೂ ಹಂಚಿಕೊಂಡರು. https://www.prekshaa.in/cha-vasudevaiah-part1 https://www.prekshaa.in/article/c-vasudevaiah-part-2
ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು ನಿಮ್ಮ ಎದುರಿಗಿವೆ. ಕೃಷ್ಣವಿವರಗಳು https://archive.org/details/Krishnavivaragalu00 ರಾಮಾನುಜಂ ಬಾಳಿದರಿಲ್ಲಿ https://archive.org/details/Ramanujan_Balidarilly001 ಸುಬ್ರಹ್ಮಣ್ಯನ್ ಚಂದ್ರಶೇಖರ್ https://archive.org/details/Subrahmanyan_Chandrasekhar001 ಕೋಪರ್ನಿಕಸ್ ಕ್ರಾಂತಿ https://archive.org/details/Copernicus_kranti001 ಭವಿಷ್ಯವಾಚನ https://archive.org/details/Bhavishyavaachana001 ಆಲ್ಬರ್ಟ್ ಐನ್ಸ್ಸ್ಟೈನ್ನ ಮಾನವೀಯ ಮುಖ https://archive.org/details/Albert_einsteinara_manaveeya_mukha001 ಸೂರ್ಯನ ಸಾಮ್ರಾಜ್ಯ - https://archive.org/details/Suryana_saamraajya001 ವಿಜ್ಞಾನ ಸಪ್ತರ್ಷಿಗಳು - https://archive.org/details/vijnaana_saptarshigalu001 ಎನ್ . ಸಿ . ಸಿ . ದಿನಗಳು - https://archive.org/details/n_c_c_dinagalu001 ಬಾನ ಬಯಲಾಟ : ಗ್ರಹಣ - https://arc
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ