ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲ

ಪ್ರಶ್ನೆ ಮಾಡುವುದ ಕಲಿಯಲೇ ಇಲ್ಲ
ಯಾಕದು? ಯಾಕೆ ಹೀಗೆ?
ಯಾಕಾಗಬಾರದು?
ಕೇಳಲು ಮುಂದಾಗುವುದಕ್ಕೇ ಭಯ!
ಹೊಡೆದಾರು, ಬಡಿದಾರು, ಬೈದಾರು
ಆ ಪುಟ್ಟ ಮನಸಿನ ಎದೆಬಡಿತಕ್ಕೆ

ಪ್ರಶ್ನೆ ಮಾಡುವುದೇ ಇಲ್ಲ
ಧಿಕ್ಕರಸಿಯಾರು, ಗುದ್ದು ಕೊಟ್ಟರೆ?
ನನ್ನ ಅರಿಮೆಯೇ ಕಿರಿದಿದ್ದರೆ?
ನಾಚಿಕೆಯಾದಾತು, ಮಾತು ಬಿಟ್ಟಾರು,
ಮುನಿಸು, ವಾಗ್ವಾದ, ವೈಮನಸ್ಸು
ಛೇ! ಯಾಕಿದೆಲ್ಲ...

ಪಶ್ನೆ ಮಾಡುವುದೇ ಇಲ್ಲವೇನೋ
ಗುರುತು ಹಿಡಿದಾರು, ಪಕ್ಕೆ ಮುರಿದಾರು,
ಕನಸಿನ ನಾಳೆಗಳ ಕತ್ತಲಿಗೆ ಸರಿಸಾರು,
ನನ್ನೊಡನೆ ಜೊತೆಗಿರುವವರಿಗೂ
ಒಡಗೂಡಿ ಒಡನಾಡಿದವರಿಗೂ
ಮರೆತುಬಿಡಿ - ಪ್ರಶ್ನೆ ಇಲ್ಲವೇ ಇಲ್ಲ

ಚಿಕ್ಕಂದಿನಿಂದ ಪ್ರಶ್ನೆ ಕೇಳದೆ ಇರಲು
ಗುಮ್ಮನಿದ್ದಾನೆ ಸುಮ್ಮನಿರಿ -
ಕೇಳಿಸಿಕೊಂಡದ್ದೇ ಬಂತು...
ನೀನು ಹಾಗಾಗಬೇಡ - ಪ್ರಶ್ನಿಸು
ಹುಡುಕು - ಶೋಧಿಸು
ಅನ್ವೇಷಿಸು - ಕಂಡುಕೋ “ಉತ್ತರ”

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ