ಇದು ಜಗದ ನಿಯಮ
ಜಗವೆಲ್ಲ ಸ್ತಬ್ಧ
ಮನಸ್ಸೂ ಪ್ರಕ್ಷುಬ್ಧ
ಏನೂ ಹೇಳದೆ
ಎನೂ ಹೇಳಿಕೊಳ್ಳದೆ
ನಿಶಬ್ಧವಾಗಿ ಹಾಗೇ
ಇದ್ದು ಬಿಡಬೇಕಿನ್ನಿಸುತ್ತದೆ...
ಕೆಲವೊಮ್ಮೆ ಸುಮ್ಮನಿರುವುದೂ
ಗಂಟಲು ಕಟ್ಟಿದಷ್ಟು
ಕಷ್ಟವಾಗಿಬಿಡುತ್ತದೆ ಅಲ್ಲವೇ?...
ನನ್ನ ಕಷ್ಟ ಕಷ್ಟವೇ ಅಲ್ಲ
ಇದ್ದರೂ ಅದನ್ನು ಎದುರಿಸಿ
ಹೆದರಿಸಿದರಾಯ್ತು
ನೆಡೆವುದೆಲ್ಲವೂ ಒಳ್ಳೆಯದಕ್ಕೆ
ಎನ್ನುತ್ತಾರೆ...
ನೆಡೆಸಿದ್ದು ಅದೃಷ್ಟ ಶಕ್ತಿಯೋ
ನಮ್ಮ ಇಚ್ಛಾ ಶಕ್ತಿಯೋ
ಮಾಡಿದ್ದನ್ನು ಅನುಭವಿಸಬೇಕಿರುವುದು
ಮಾತ್ರ ಸತ್ಯ
- ಇದು ಜಗದ ನಿಯಮ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ