ಕನ್ನಡ ಸಂಚಯ ದ ಪುಸ್ತಕಗಳ ಡಿಜಿಟೈಜೇಷನ್ ಕಾರ್ಯವನ್ನು ಕಳೆದ ವರ್ಷ ಪ್ರಾರಂಭಿಸಿದಾಗ, ಅದಕ್ಕೆ ಅವಶ್ಯವಿದ್ದ ಹಣಕಾಸಿನ ವಿಚಾರ ಮೊದಲಿಗೆ ತಲೆಗೇ ಹೊಳೆದಿರಲಿಲ್ಲ. ಸಣ್ಣಮಟ್ಟದಲ್ಲಾದರೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಕ್ಕೆ ನಮ್ಮ ಜೇಬಿನಿಂದಲೇ ಹಣ ಹೂಡಿ ಅಭ್ಯಾಸವಾಗಿದ್ದರಿಂದ ಇರಬಹುದು. ಆದರೆ ಡಿಜಿಟಲೀಕರಣದ ಕೆಲಸ ಅದಕ್ಕಿಂತ ಹೆಚ್ಚಿನದನ್ನು ಬೇಡುತ್ತದೆ. ಪುಸ್ತಕಗಳನ್ನು ಹೊಂದಿಸುವುದು, ಕೆಲವೊಂದು ಪುಸ್ತಕಗಳ ಖರೀದಿ, ಅದೂ ಅವಶ್ಯವಿಲ್ಲದಿದ್ದಾಗ ಅದನ್ನು ಒಂದು ಕಡೆಯಿಂದ ಅಕಾಡೆಮಿಗೆ ಸಾಗಿಸುವುದು, ಸುರಕ್ಷಿತವಾಗಿ ಕಾಪಿಡುವುದು, ಬೈಂಡಿಗ್ ತೆಗೆದ ಪುಸ್ತಕಗಳನ್ನು ಚಾಚೂ ತಪ್ಪದೆ ಅದೇ ಸ್ಥಿತಿಗೆ ಮರಳಿಸಿ ಸುರಕ್ಷಿತವಾಗಿ ಪುಸ್ತಕಗಳ ಒಡೆಯರಿಗೆ ವಾಪಸ್ಸು ಕೊಡುವವರೆಗೆ ಒಂದಿಲ್ಲೊಂದು ಕೆಲಸಗಳು. ಪುಸ್ತಕಗಳು ಸ್ಕ್ಯಾನ್ ಆಗಿ ಹೊರ ಬಂದಾಗ ಅದರ ಗುಣಮಟ್ಟ ಪರಿಶೀಲನೆ, ಮೆಟಾಡೇಟಾ ನಿರ್ವಹಣೆ, ಕಳೆದು ಹೋದ ಪುಸ್ತಕದ ಪುಟಗಳ ಹುಡುಕುವುದು, ಸರಿಯಾಗಿ ಡಿಜಿಟಲೀಕರಣ ಆಗಿಲ್ಲದಿದ್ದಲ್ಲಿ ಅದನ್ನು ಮತ್ತೆ ಸರದಿಗೆ ನಿಲ್ಲಿಸುವುದು ಇತ್ಯಾದಿ. ಇದಕ್ಕೆಲ್ಲ ಮೊಟ್ಟಮೊದಲಿಗೆ ನಮ್ಮನ್ನು ೨೦೧೯ ರಲ್ಲಿ ಕೈಹಿಡಿದಿದ್ದು Thejesh GN ಅವರ ನಾಗರತ್ನ ಸ್ಮಾರಕ ಅನುದಾನ. ಈ ಅನುದಾನ ಮತ್ತೊಮ್ಮೆ ೨೦೨೦ರಲ್ಲಿ ನಮ್ಮ ಯೋಜನೆಯ ಕೈ ಹಿಡಿದಿದೆ ಎಂದು ಹೇಳಲು ಹರ್ಷಿಸುತ್ತೇನೆ. ಸಂಚಯದ ಜೊತೆಗೆ Kollegala Sharma ಅವರ ಜಾಣ ಸುದ್ಧಿ ಹಾಗೂ Srinidhi TG ಅವರ ಇ-