ವಿಷಯಕ್ಕೆ ಹೋಗಿ

‍ಸಂಚಯ‍ ದ ಪುಸ್ತಕಗಳ ಡಿಜಿಟೈಜೇಷನ್ ಯೋಜನೆಗೆ ನಾಗರತ್ನ ಸ್ಮಾರಕ ಅನುದಾನ

ಕನ್ನಡ ಸಂಚಯ‍ ದ ಪುಸ್ತಕಗಳ ಡಿಜಿಟೈಜೇಷನ್ ಕಾರ್ಯವನ್ನು ಕಳೆದ ವರ್ಷ ಪ್ರಾರಂಭಿಸಿದಾಗ, ಅದಕ್ಕೆ ಅವಶ್ಯವಿದ್ದ ಹಣಕಾಸಿನ ವಿಚಾರ ಮೊದಲಿಗೆ ತಲೆಗೇ ಹೊಳೆದಿರಲಿಲ್ಲ. ಸಣ್ಣಮಟ್ಟದಲ್ಲಾದರೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೆಲಸಕ್ಕೆ ನಮ್ಮ ಜೇಬಿನಿಂದಲೇ ಹಣ ಹೂಡಿ ಅಭ್ಯಾಸವಾಗಿದ್ದರಿಂದ ಇರಬಹುದು. ಆದರೆ ಡಿಜಿಟಲೀಕರಣದ ಕೆಲಸ ಅದಕ್ಕಿಂತ ಹೆಚ್ಚಿನದನ್ನು ಬೇಡುತ್ತದೆ. ಪುಸ್ತಕಗಳನ್ನು ‍ಹೊಂದಿಸುವುದು, ಕೆಲವೊಂದು ಪುಸ್ತಕಗಳ ಖರೀದಿ, ಅದೂ ಅವಶ್ಯವಿಲ್ಲದಿದ್ದಾಗ ಅದನ್ನು ಒಂದು ಕಡೆಯಿಂದ ಅಕಾಡೆಮಿಗೆ ಸಾಗಿಸುವುದು, ಸುರಕ್ಷಿತವಾಗಿ ಕಾಪಿಡುವುದು, ಬೈಂಡಿಗ್ ತೆಗೆದ ಪುಸ್ತಕಗಳನ್ನು ಚಾಚೂ ತಪ್ಪದೆ ಅದೇ ಸ್ಥಿತಿಗೆ ಮರಳಿಸಿ ಸುರಕ್ಷಿತವಾಗಿ ಪುಸ್ತಕಗಳ ಒಡೆಯರಿಗೆ ವಾಪಸ್ಸು ಕೊಡುವವರೆಗೆ ಒಂದಿಲ್ಲೊಂದು ಕೆಲಸಗಳು. ಪುಸ್ತಕಗಳು ಸ್ಕ್ಯಾನ್ ಆಗಿ ಹೊರ ಬಂದಾಗ ಅದರ ಗುಣಮಟ್ಟ ಪರಿಶೀಲನೆ, ಮೆಟಾಡೇಟಾ ನಿರ್ವಹಣೆ, ಕಳೆದು ಹೋದ ಪುಸ್ತಕದ ಪುಟಗಳ ಹುಡುಕುವುದು, ಸರಿಯಾಗಿ ಡಿಜಿಟ‍ಲೀಕರಣ ಆಗಿಲ್ಲದಿದ್ದಲ್ಲಿ ಅದನ್ನು ಮತ್ತೆ ಸರದಿಗೆ ನಿಲ್ಲಿಸುವುದು ಇತ್ಯಾದಿ. ಇದಕ್ಕೆಲ್ಲ‍ ಮೊಟ್ಟಮೊದಲಿಗೆ ನಮ್ಮನ್ನು ೨೦೧೯ ರಲ್ಲಿ ಕೈಹಿಡಿದಿದ್ದು Thejesh GN ಅವರ ನಾಗರತ್ನ ಸ್ಮಾರಕ ಅನುದಾನ. ಈ ಅನುದಾನ ಮತ್ತೊಮ್ಮೆ ೨೦೨೦ರಲ್ಲಿ ನಮ್ಮ ಯೋಜನೆಯ ಕೈ ಹಿಡಿದಿದೆ ಎಂದು ಹೇಳಲು ಹರ್ಷಿಸುತ್ತೇನೆ. ಸಂಚಯದ ಜೊತೆಗೆ Kollegala Sharma ಅವರ ಜಾಣ ಸುದ್ಧಿ ಹಾಗೂ Srinidhi TG ಅವರ ‍ಇ-ಜ್ಞಾನ ಟ್ರಸ್ಟ್ ಯೋಜನೆಗೂ ೨೦೨೦ರ ಅನುದಾನ ದೊರೆತಿರುವುದು ಬಹಳ ಖುಷಿಕೊಡುವ ವಿಚಾರವಾಗಿದೆ. ‍ಕನ್ನಡದ ಕೆಲಸಗಳಿಗೆ ಅನುದಾನ‍/ದೇಣಿಗೆ ಕೇಳುವುದು ಬಹಳ ಕಷ್ಟ‍ದ ವಿಚಾರ‍. ಸಮಾನ ಮನಸ್ಕ‍ರಿಂದ ಮಾತ್ರ ಕೆಲವೊಂದು ಯೋಜನೆಗಳು ಕುಂಟುತ್ತಲಾದರೂ ಮುಂದೆ ನೆಡೆಯುತ್ತಲೇ ಇರುತ್ತವೆ. ಸಂಚಯ ಮತ್ತು ಸಂಚಿ ಫೌಂಡೇಷನ್ ಕಾರ್ಯಗಳೂ ಹೀಗೆಯೆ. ದಿನವೂ ನಮ್ಮ ಕೆಲಸಗಳು ಜನರಿಗೆ ಉಪಯುಕ್ತವಾಗುತ್ತಿರುವುದನ್ನು ನೋಡುವುದೇ ನಮ್ಮ ಶ್ರಮದಾನಕ್ಕೆ ಸಿಗುವ ತೃಪ್ತಿ. ತೇಜೇಶ್ ಅವರ ಈ ಅನುದಾನವನ್ನು ೨೦೨೦ರ‍ಲ್ಲಿ ಮತ್ತಷ್ಟು ಸಾರ್ವಜನಿಕ ವ್ಯಾಪ್ತಿಯಲ್ಲಿ ಬರುವ‍ ಕನ್ನಡ ಪುಸ್ತಕಗಳನ್ನು ಡಿಜಿಟಲೀಕರಿಸುವ ಕೆಲಸಕ್ಕೆ ಬ‍ಳಸಿಕೊಳ್ಳಲಿದ್ದೇವೆ. ‍ಹಳೆಯ ಪುಸ್ತಕಗಳನ್ನು ನಮಗೆ ಒದಗಿಸಲು, ಯೋಜನೆಗೆ ಮತ್ತಷ್ಟು ಬಲ ತುಂಬುವ ಮನಸ್ಸುಗಳು ಒಂದಾದರೆ ಸಾಮಾನ್ಯರ ಯೋಜನೆಗಳು ಮುಂದಿನ ಪೀಳಿಗೆಗಳಿಗೆ ಅವಶ್ಯವಿರುವ ಕನ್ನಡ ಸಂಪತ್ತನ್ನು ಒ‍ದಗಿಸಲಿವೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು
--- --
ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ…

ಇಂಟರ್ನೆಟ್ ಆರ್ಕೈವ್‌ನಲ್ಲೀಗ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು

ಸಂಚಯದ ಮೂಲಕ - ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್‌ನಲ್ಲಿರುವ - ಇಂಟರ್ನೆಟ್ ಅರ್ಕೈವ್ ಸ್ಕ್ಯಾನರ್ ಬಳಸಿ ಕನ್ನಡದ - ಕಾಪಿರೈಟ್ (ಕೃತಿಸ್ವಾಮ್ಯ) ಹೊರತಾದ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸುವ ಮೊದಲ ಹೆಜ್ಜೆಯಾಗಿ ಜಿ.ಟಿ ನಾರಾಯಣರಾವ್ ವಿಜ್ಞಾನ ಪುಸ್ತಕಗಳು  ನಿಮ್ಮ ಎದುರಿಗಿವೆ.
ಕೃಷ್ಣವಿವರಗಳುhttps://archive.org/details/Krishnavivaragalu00ರಾಮಾನುಜಂಬಾಳಿದರಿಲ್ಲಿhttps://archive.org/details/Ramanujan_Balidarilly001ಸುಬ್ರಹ್ಮಣ್ಯನ್ಚಂದ್ರಶೇಖರ್https://archive.org/details/Subrahmanyan_Chandrasekhar001ಕೋಪರ್ನಿಕಸ್ಕ್ರಾಂತಿhttps://archive.org/details/Copernicus_kranti001ಭವಿಷ್ಯವಾಚನ‍https://archive.org/details/Bhavishyavaachana001ಆಲ್ಬರ್ಟ್ಐನ್ಸ್‌ಸ್ಟೈನ್‌ನಮಾನವೀಯಮುಖhttps://archive.org/details/Albert_einsteinara_manaveeya_mukha001ಸೂರ್ಯನಸಾಮ್ರಾಜ್ಯ - https://archive.org/details/Suryana_saamraajya001ವಿಜ್ಞಾನಸಪ್ತರ್ಷಿಗಳು - https://archive.org/details/vijnaana_saptarshigalu001ಎನ್.ಸಿ.ಸಿ. ದಿನಗಳು - https://archive.org/details/n_c_c_dinagalu001ಬಾನಬಯಲಾಟ: ಗ್ರಹಣ - https://archive.org/details/baana_bayalaata_grahana001ಕುವೆಂಪುದರ್ಶನಸಂದರ್ಶನ - https://archive.org/details/kuvempu…

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು