ನನ್ನ ಬಗ್ಗೆ

/
3 Comments

ಮೂಲತ: ಬೆಂಗಳೂರಿನವನಾದ ನಾನು ಕಳೆದ ೧೧ ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಕನಾಗಿ, ತಂತ್ರಜ್ಞನಾಗಿ, ತಂತ್ರಜ್ಞಾನ ನಿರ್ವಾಹಕನಾಗಿ ಕಾರ್ಯನಿರ್ವಹಿಸಿರುತ್ತೇನೆ. ಸಧ್ಯಕ್ಕೆ ಬೆಂಗಳೂರಿನ ಕಾರ‍್ಮಾಟೆಕ್ ಕಂಪೆನಿಯ ತಂತ್ರಜ್ಞಾನ ಮತ್ತು ತರಬೇತಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಕಳೆದ ೬-೭ ವರ್ಷಗಳಿಂದ ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ (Free and Open Source Software) ಬಗ್ಗೆ ಕನ್ನಡದಲ್ಲಿ ಬ್ಲಾಗ್ ಬರೆಯುವ ಮೂಲಕ ಕನ್ನಡಿಗರೊಂದಿಗೆ ನನ್ನ ಅರಿವನ್ನು ಹಂಚಿಕೊಳ್ಳುತ್ತಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಕನ್ನಡದಲ್ಲಿ ರೂಪಿಸಿದ ಮೊದಲ ಕಾರ್ಯಕ್ರಮ 'ಗ್ನು/ಲಿನಕ್ಸ್ ಹಬ್ಬ'ವನ್ನು ಹುಟ್ಟುಹಾಕಿದವರಲ್ಲಿ ನಾನೂ ಒಬ್ಬ. 

ಲಿನಕ್ಸಾಯಣ.ಕಾಮ್ (http://linuxaayana.net) - ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ - ಪ್ರಾಯೋಗಿಕವಾಗಿ ಮುಕ್ತ ತಂತ್ರಾಂಶವನ್ನು ಕನ್ನಡಿಗರಿಗೆ ತಲುಪಿಸುತ್ತಿರುವ ನನ್ನ ಬ್ಲಾಗ್ ೨೦೦೬ ರಿಂದ ಪ್ರಸ್ತುತಿಯಲ್ಲಿದ್ದು ಈಗಲೂ ಮಾಹಿತಿ ತಂತ್ರಜ್ಞಾನದ ಅನೇಕ ಬೆಳವಣಿಗೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದೆ.

ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಲೇಖನಗಳನ್ನು ಯುವಕರು ಬರೆಯಲು ಪ್ರೇರೇಪಿಸಲು ೨೦೧೧ರ ಸ್ವಾತಂತ್ರೋತ್ಸವ ಸಂದರ್ಭದಲಿ ಸಂಚಯ ತಂಡ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಮೊದಲ ಕನ್ನಡ ಇ-ಪುಸ್ತಕ 'ಅರಿವಿನ ಅಲೆಗಳು' (http://arivu.sanchaya.net) ಅನ್ನು ಹೊರತಂದಿದ್ದು, ನಾನು ಇದರ ಸಂಪಾದಕನಾಗಿದ್ದೇನೆ. ತಾಂತ್ರಿಕ ಪರಿಣಿತಿ ಹೊಂದಿದ ೧೪ ಕನ್ನಡಿಗರ ಲೇಖನಗಳು ಈ ಪುಸ್ತಕದ ಮೂಲಕ ಸಾಮಾನ್ಯರಿಗೆ ತಂತ್ರಜ್ಞಾನ ಪರಿಚಯ ಮಾಡಿಕೊಡುತ್ತವೆ.

ವಿಜ್ಞಾನ, ತಂತ್ರಜ್ಞಾನ, ಕಲೆ ಇತ್ಯಾದಿಗಳನ್ನು ಮಕ್ಕಳ ಇಳಿ ವಯಸ್ಸಿನಿಂದಲೇ ಪ್ರಾಯೋಗಿಕವಾಗಿ ಕಲಿಸಲು ಸಾಧ್ಯ ಮತ್ತು ಅದಕ್ಕೆ ಬೇಕಿರುವ ಅನೇಕ ಸವಲತ್ತುಗಳನ್ನು ಸಮುದಾಯದ ಮೂಲಕ ಕ್ರೂಡೀಕರಿಸಿ ಇಂಟರ್ನೆಟ್ ಮೂಲಕ ತಲುಪಲಾರದ ಪ್ರದೇಶಕ್ಕೂ ತಲುಪಿಸಲು ಬಹುದು. ಈ ಕಾರಣಕ್ಕಾಗಿ ಕಿಂದರಜೋಗಿ.ಕಾಮ್ (kindarajogi.com) ಅನ್ನು ಕಿನ್ನರರಿಗಾಗಿ ಪರಿಚಯಿಸಲಾಗಿದೆ. ಇತ್ತೀಚೆಗೆ ಕಿಂದರಜೋಗಿ.ಕಾಮ್ ಅಂಚೆಇಲಾಖೆ ವಿಷಯಾಧಾರಿತ ಚಿತ್ರಕಲಾ ಸ್ವರ್ಧೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಮಕ್ಕಳು ಅಂಜೆ ಮೂಲಕ ಭಾಗವಹಿಸಿದ್ದರು.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ, ಕನ್ನಡ ವಿಕಿಪೀಡಿಯಾ ಇನ್ನಿತರ ಸಮುದಾಯಾ ಆಧಾರಿತ ಯೋಜನೆಗಳನ್ನು ಪ್ರಚುರ ಪಡಿಸುವುದು, ಫೋಟೋಗ್ರಫಿ, ಸೈಕ್ಲಿಂಗ್, ಟ್ರೆಕಿಂಗ್ ನನ್ನ ಇನ್ನಿತರೆ ಹವ್ಯಾಸಗಳು.
ನನ್‌ಮನ © ೨೦೧೩. Powered by Blogger.