ಹೊರ ದೇಶಕ್ಕೆ ಪ್ರಯಾಣ ಬೆಳಸುತ್ತಿದ್ದೀರಾ? ಅಲ್ಲಿಯ ವಾಹನಗಳನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದು ಅವುಗಳಲ್ಲಿ ಸವಾರಿ ಮಾಡುವ ವಿಚಾರವಿದೆಯೇ? ಆಗಿದ್ದಲ್ಲಿ ನಿಮಗೆ ಬೇಕಾಗಬಹುದು ಅಂತರಾಷ್ಟ್ರೀಯ ಚಾಲನಾ ಪರವಾನಗಿ (International Driving Permit). ನಿಮ್ಮ ಪ್ರಾದೇಶಿಕ ಸಾರಿಗೆ ಸಂಸ್ಥೆ (ಆರ್.ಟಿ.ಒ) ಇದನ್ನು ನಿಮಗೆ ಒಂದೆರಡು ದಿನಗಳಲ್ಲಿಯೇ ನೀಡುತ್ತದೆ. http://rto.kar.nic.in/ ನಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಅರ್ಜಿಗಳು ಮತ್ತು ಮಾಹಿತಿ ಲಭ್ಯವಿದೆ.

ಹೇಗೆ? 

 • http://rto.kar.nic.in/ ಲಭ್ಯವಿರುವ ಅರ್ಜಿ Form CMV 4-A ಮತ್ತು 
 • ಆರೋಗ್ಯ ತಪಾಸಣೆಗೆ CMV 1 & CMV 1A ಅರ್ಜಿಗಳನ್ನು ತುಂಬಿ, ಸರ್ಕಾರಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಅವರಿಂದ ಸಹಿ ಪಡೆಯಿರಿ.
 • ಎಲ್ಲ ಅರ್ಜಿಗಳನ್ನು ಆರ್.ಟಿ.ಒ ದ ಸೂಪರ್ ಇಂಟೆಂಡೆಂಟ್‌ರವರ ಬಳಿ ನಿಮ್ಮ ಡ್ರೈವಿಂಗ್ ಲೈಸೆನ್ಸ್, ವಿ.ಸಾ, ಪಾಸ್‌ಪೋರ್ಟ್, ನಿಮ್ಮ ವಿಮಾನದ ಟಿಕೆಟ್‌ಗಳ ಜೆರಾಕ್ಸ್ ಮತ್ತು ಒರಿಜಿನಲ್ ಕಾಫಿಗಳನ್ನು ತೋರಿಸಿ ಅವರಿಂದ  ಅಂತರಾಷ್ಟ್ರೀಯ ಚಾಲನಾ ಪರವಾನಗಿ ಅರ್ಜಿ ಮೇಲೆ ಸಹಿ ಹಾಕಿಸಿಕೊಳ್ಳಿ.  Original Valid Driving Licence + Passport + Visa + Air Ticket ( with one set xerox copies) 
 • ನಂತರ ಅಂತರಾಷ್ಟ್ರೀಯ ಚಾಲನಾ ಪರವಾನಗಿಗೆ ೫೦೦ ರೂಪಾಯಿಯನ್ನು ಕೌಂಟರ್‌ನಲ್ಲಿ ಪಾವತಿಸಿ ಚಲನ್ ಪಡೆದುಕೊಳ್ಳಿ
 • ಚಲನ್ ಮತ್ತು Form CMV 4-A,CMV 1 ಮತ್ತು CMV 1A, ಇತರೆ ದಾಖಲೆಗಳ ಪ್ರತಿಗಳನ್ನು  ಮತ್ತೆ ಸೂಪರ್ ಇಂಟೆಂಡೆಂಟ್‌ಗೆ ನೀಡಿ, ಅವರು ನಿಮಗೆ ಒಂದೆರಡು ದಿನಗಳಲ್ಲಿ ಪರವಾನಗಿಯನ್ನು ಬಂದು ಕೊಂಡೊಯ್ಯುವಂತೆ ಹೇಳುತ್ತಾರೆ. 
 • ಆರ್.ಟಿ.ಒ‌ಗಳು ಸಾಮಾನ್ಯವಾಗಿ ಪ್ರತಿದಿನ ಮಧ್ಯಾನ್ಹ ೪ರ  ನಂತರ ದಾಖಲೆಗಳನ್ನು ವಿತರಿಸುತ್ತವೆ. ನಿಮಗೆ ತಿಳಿಸಿದ ದಿನದಂದು ಈ ಚಿತ್ರದಲ್ಲಿ ಕಾಣುವಂತಿರುವ ಪರವಾನಗಿಯ ಪತ್ರ ನಿಮ್ಮ ಕೈನಲ್ಲಿರುತ್ತದೆ. International driving permit - India
ಗಮನಿಸಿ:-

 • ಇದನ್ನು ಪಡೆದುಕೊಳ್ಳಲು ಮಧ್ಯವರ್ತಿಗಳ ಅವಶ್ಯಕೆತೆ ಇಲ್ಲ. 
 • ಆರ್.ಟಿ.ಒ ತಾಣದಲ್ಲಿರುವ ಅರ್ಜಿಗಳನ್ನು ಪ್ರಿಂಟ್ ಮಾಡಿಕೊಂಡರಾಯ್ತು.
 • ಸರ್ಕಾರಿ ವೈದ್ಯರು ಸಾಮಾನ್ಯವಾಗಿ ೧೦೦ರೂ ಪಡೆದು ನಿಮಗೆ ವೈದ್ಯಕೀಯ ತಪಾಸಣೆ ನೆಡೆಸಿಕೊಡುತ್ತಾರೆ. 
 • ೧೨೦ಕ್ಕೂ ಹೆಚ್ಚು ದೇಶಗಳಲ್ಲಿ ಈ ಪರವಾನಗಿಯನ್ನು ಬಳಸಬಹುದೆಂದು ಹೇಳುತ್ತಾರೆ, ಆದರೆ ನಮ್ಮ ಆರ್.ಟಿ.ಒ ಗಳು ಯಾವುದೇ ಪರೀಕ್ಷೆ ಇಲ್ಲದೆ ಇದನ್ನು ನೀಡುವುದು ನಮ್ಮನ್ನು ಗೊಂದಲಕ್ಕೀಡು ಮಾಡುವುದು ಸಹಜ. 
 • ಕೆಲವೊಂದು ದೇಶಗಳಲ್ಲಿ ನಮ್ಮ ಸಾಮಾನ್ಯ ಡ್ರೈವಿಂಗ್ ಲೈಸೆನ್ಸ್ ಕೆಲದಿನಗಳ ಮಟ್ಟಿಗೆ ಸಾಕಾಗುತ್ತದೆ. ಅಲ್ಲಿಗೆ ಹೋಗಿ ಬಂದಿರುವವರನ್ನು ಒಮ್ಮೆ ವಿಚಾರಿಸಿ.
 • ಐ.ಡಿ.ಪಿ ನೀವು ಬೇರೊಂದು ದೇಶದಲ್ಲಿ ಸ್ವಲ್ಪ ದಿನಗಳ ಕಾಲ ಇದ್ದು, ಅಲ್ಲಿನ ಡ್ರೈವಿಂಗ್ ಲೈಸೆನ್ಸ್ ಪಡೆದು ಕೊಳ್ಳುವವರೆ ತಾತ್ಕಾಲಿಕವಾಗಿ ಕೆಲಸಕ್ಕೆ ಬರುತ್ತದೆ. 
 • ಇದರ ಕಾಲಮಿತಿ ೧ ವರ್ಷ.