ಕೃತಿ‍ಚೌರ್ಯದ ಭಯ ಅಂದು ಇರಲಿಲ್ಲ
ಗತಕಾಲವ, ಕವಿ ಕೋಗಿಲೆಗಳ‍ ಕಾಡಲಿಲ್ಲ…
ಡಿಜಿಟಲ್‍ ‌ಜಗತ್ತಿನಲ್ಲಿ ಡಿಜಿಟೈಸ್ ಮಾಡದೆ
‍ಹೆದರುವರಲ್ಲ…
‍ಡಿಜಿಟಲ್ ಫೂಟ್ ಪ್ರಿಂಟ್, ಅಂದಿನ ‍ತಾಳೆಗರಿ,
‍ಶಾಸನಗಳಿ‍ಗಿಂತ ಕಡಿಮೆ ಏನಲ್ಲ
ಬ್ಲಾಕ್ ಚೈನ್ – ಪ್ರತಿ ಅಕ್ಷರಕ್ಕೂ ನಿಮ್ಮ ಹೆಸರಿಗೂ
‍ಕುಣಿಕೆ ಹಾಕಿ ಭದ್ರ ಪಡಿಸಬಲ್ಲದು
‍ಕ್ರಿಯೇ‌ಟೀವ್ ಕಾಮನ್ಸ್ – ಸಾಮಾನ್ಯನ ಕ್ರಿಯಾಶೀಲತೆಗೂ
‍ಉಲ್ಲೇಖದ ಮಹತ್ವ ಕೊ‍ಡಿಸಬಲ್ಲದು
‍ಹೆದರದೇ ಸರಿಬೆಸ ಹೊಂದಿಸಿ ಲೆಕ್ಕ ಹಾಕುವ
‍ಗಣಕದ ಕಿಸೆಗೋ ಮೆದುಳಿಗೋ ಊಡಿಸಿ
‍ಇಪ್ಪತ್ತೊಂದನೆಯ ಶತಮಾನದಲ್ಲಿ ನಿಮ್ಮದೊಂದಿಷ್ಟು
‍ಇತಿಹಾಸ ಉಳಿಸಿ..

ಫೇಸ್‌ಬುಕ್, ಟ್ವಿಟರ್‌ನಿಂದಾಚೆಗೆ…