ಪಶ್ಚಿಮ ಘಟ್ಟಗಳ ಮಧ್ಯೆ ಸುತ್ತಿ ಸುಳಿದು
ಸುಂದರ ಪ್ರಕೃತಿಯ ಮಡಿಲ ಹತ್ತಿ ಇಳಿದು
ಹಳ್ಳ, ಕೊಳ ಝರಿಗಳ ಕಂಡು ಕುಣಿದು
ಬಲ್ಲಾಳರಾನದುರ್ಗದ ಮುಂದೆ ಸುಳಿದು

ಒಣಗಿಸಿದ ಪೊಳ್ಳೆಪೊಟರೆಗಳ ಕಿತ್ತುತಂದು
ಅಗ್ನಿ ದೇವನ ಕೃಪೆಯ ಮುಂದು
ಹಚ್ಚಿದ್ದಾಯಿತು ಸಣ್ಣ ಕುಂಡವೊಂದು
ಹೊತ್ತಿದ್ದ ಪೊಟ್ಟಣವ ರಾಶಿ ಸುರಿದು
ಅಡುಗೆ ಮಾಡಿ ಬಡಿಸಿದ್ದಾಯಿತಂದು

ಜೊತೆ ಜೊತೆಗೆ ಬೆಟ್ಟದಲ್ಲೊಂದು ಮನೆಯ ಮಾಡಿ
ಚಳಿಗಾಳಿ ಮಳೆಗೆ ಅಂಜದೆ ಕೂಡಿ…
ಗ್ರಹ ನಕ್ಷತ್ರಗಳ ಜೊತೆಗೆ ಮಾತನಾಡಿ
ನಿದ್ರಾದೇವಿಯ ತೆಕ್ಕೆಗೆ ಸ್ವಲ್ಪ ಜಾರಿ
ನಿದ್ದೆ ಬಂದಿತ್ತೆನಗೆ ಕೊಂಚ ತಾಗಿ…

ಆ ರಾತ್ರಿ ಹೆದರಿದವರಾರು?
ಬೆಚ್ಚಿ ಬಿದ್ದವರಾರು?
ಮತ್ತೋರ್ವರನು ಅಂದು ಹೆದರಿಸಿದವರಾರು 😉
ಪಶ್ನೆಗಳ ಉತ್ತರಿಸೆ ಕೊಡುವೆ ದೊಡ್ಡ ಚಿಕ್ಕಿ….