ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಎದ್ದು ಬಿದ್ದು ಅಡ್ಡಾದಿಡ್ಡಿ
ನಕ್ಕುನಲಿದು ಅತ್ತು ಕರೆದು
ಅಮ್ಮನ ಬಳಿಗೆ ನೆಡೆದ ಪುಟ್ಟು..
ಹಾಲುಹಲ್ಲಿನ ನಗುವ ಚೆಂದ
ಕೋಪ ಬಂದರೆ ಮುಖದ ಬಿಗುವು
ಪಪ್ಪರಮೆಂಟಿಗೆ ಹಾಕಿದ ಸೋಗು
ಎಲ್ಲಕೂ ಮಿಗಿಲು ನಾಚಿದ ಮೊಗವು..
ಶಾಲೆಗೆ ನೆಡೆಯೋ ಎಂದರೆ ಅಮ್ಮಾ!
ಬಂದಿತು ನೋಡೋ ಹೊಟ್ಟೆಯ ನೋವು..
ಕೊಬ್ಬರಿ ಮಿಠಾಯಿ ಜೇಬಿಗೆ ತುಂಬೇ…
ಸರಸರ ನೆಡೆದನು ತುಂಟನೊ ತಿಮ್ಮ!!
ನೆಹರು ಚಾಚಾ ದಿರಿಸನು ಧರಿಸಿ
ಜೇಬಿಗೆ ರೋಜಾ ಹೂವನು ಮುಡಿಸಿ
ಠೀವಿಲಿ ಹಾಕಿದ ಹೆಜ್ಜೆಯ ಕಂಡು
ಕೆನ್ನೆಗೆ ಕೊಟ್ಟಳು ಅಮ್ಮನು ಮುದ್ದು…
ಈಗ ತಾನೇ ಪೋಸ್ಟ್ ಮಾಡಿದ ಹಾಗಿದೆ? ಚೆನ್ನಾಗಿದೆ ಕವನ. ಮಕ್ಕಳ ದಿನಾಚರಣೆಗೆ ಅವಿವಾಹಿತರ ಕವನ 🙂
ಶೀಘ್ರ ಅನುಭವದಿಂದಲೂ ಬರೆಯುವಂತಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಚೆನ್ನಾಗಿ ಬರೆದಿದ್ದೀರಾ ಶಿವು 🙂
Awesome poetry Shiv, Good usage of certain specific words and excellent poetry for Childrens day. -Nagendra