Chowkabara | ಚೌಕಾಬಾರ
Originally uploaded by omshivaprakash
ಚೌಕಾಬಾರ ಆಡಿ ನೋಡು
ಚೌಕದ ಮನೆಗಳ ಎಣಿಸಿ ನೋಡು
ಮನೆಯಿಂದ ಮನೆಗೆ ಜಿಗಿಯುತ ನೀನು
ಒಂದು ಎರಡು ಎಣಿಸಿ ನೋಡು
ರಾಜ್ಯಗಳನ್ನೇ ಕಬಳಿಸಿದರಂತೆ
ಭಾರತ ಯುದ್ದಕೆ ಕಾರಣವಿದಂತೆ
ಶಕುನಿ ಮಾಮನು ನಿಷ್ಣಾತನಂತೆ
ನೀನೂ ದಾಳವ ಹಾಕಿ ನೋಡು
ದಾಳಗಳೆಸುಯುತ ಚೌಕಕೆ ಹಾರುತ
ಮೇಲಿದ್ದವನ ಮನೆಗೆ ಓಡು ಎನ್ನುತ
ಹೊಸ ಮನೆಯೊಂದನು ಕಂಡರೆ ನೀನು
ಉಳಿಯುವೆ ಅಲ್ಲೇ ತಿಳಿದು ನೋಡು
ಚದುರಂಗಕಿಂತ ಕಡಿಮೆ ಏನಲ್ಲ
ಮನೆಪಾಠದಲೇ ನೀ ಕಲಿ ಲೆಕ್ಕದ ಆಟ
ಚೌಕಾಬಾರದ ಕಾಯಿಯ ನೆಡೆಸು
ಮುಟ್ಟಿಸು ತಲೆಗೆ ಆಟದ ಬಿರುಸು
ಕಾಯಿಯ ಹಣ್ಣನು ಮಾಡುವವರೆಗೆ
ನೆಡೆವುದು ಆಟ ಗೆಳೆಯರ ಜೊತೆಗೆ
ಹಣ ಹೂಡಲು ಬೇಡ ಕೇಳೋ ಅಣ್ಣಾ
ಗೆಳೆಯರು ಆದಾರು ಶತೃಗಳಣ್ಣ
>>ಹಣ್ಣನು ಕಾಯಿ ಮಾಡುವವರೆಗೆ
ಚೌಕಾಬಾರದಲ್ಲಿ ನಾವು ಕಾಯನ್ನ ಹಣ್ಣು ಮಾಡೋದು ಅಂತೀವಿ…ಹಣ್ಣನ್ನು ಕಾಯಿ ಮಾಡೋದು ಹೇಗೆ?? 😉
ಇಂದು, ಸರಿ ಮಾಡಿದ್ದೇನೆ.. ನಾನಿನ್ನೂ ಕಾಯಿ ಅಂತ ಗೊತ್ತಾಯ್ತಲ್ಲ ಇದನ್ನ ಆಡೋವಾಗ.. ಅದಕ್ಕೆ ಸ್ವಲ್ಪ ಎಡವಟ್ಟು..