ಫೆಬ್ರವರಿ ೨೨, ೨೦೧೨ – ಸಂಯುಕ್ತ ಕರ್ನಾಟಕ ಅಂಕಣ
ಆಗಿನ ಕಾಲದಲ್ಲಿ VM/CMS, Macintosh, VAX/VMS ಮತ್ತು Unix ಇವೇ ಮೊದಲಾದ ಆಪರೇಟಿಂಗ್ ಸಿಸ್ಟಂಗಳಿದ್ದು ಮೈಕ್ರೋಸಾಫ್ಟ್ ನ ವಿಂಡೋಸ್, ಡಾಸ್ ಇತ್ಯಾದಿಗಳ ಸುಳಿವೇ ಇರಲಿಲ್ಲ. ಯಾಕಂದ್ರೆ ಅವುಗಳ ಆವಿಷ್ಕಾರಇನ್ನೂ ಆಗೇ ಇರಲಿಲ್ಲ. ಆದ್ರೆ ಅವುಗಳ ಬರುವಿಕೆ ವೆಬ್ ನ ಬಳಕೆದಾರರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾದದ್ದಂತೂ ಸತ್ಯ.
ತನ್ನಲ್ಲಿರುವ ಮಾಹಿತಿಗಳ ಸಂಗ್ರಹವನ್ನು ಹುಡುಕಲಿಕ್ಕೆ ಬೇಕಿರುವ ಸಲಕರಣೆಗಳನ್ನು ಕೊಡುವುದರ ಜೊತೆಗೆ, ಬರ್ನರ್ಸ್ ಲೀ ಇಂತಹದೊಂದು ನೆಟ್ವರ್ಕ್ ಗೆ ಸೇರುವ ಸಿಸ್ಟಂಗಳು ಯಾವುದೇ ಮಧ್ಯಂತರ ನಿಯಂತ್ರಣ ಅಥವಾ ನಿರ್ವಹಣವ್ಯವಸ್ಥೆಯಿಂದ ದೂರವಾಗಿರಬೇಕು ಎಂದ. ಅದರ ಜೊತೆಗೆ, ವ್ಯಕ್ತಿಗಳು ಸಿಸ್ಟಂಗಳನ್ನು ನೆಟ್ವರ್ಕೆಗೆ ಸೇರಿಸಲು ತಮ್ಮದೇ ಖಾಸಗಿ ಕೊಂಡಿಗಳನ್ನು ಬಳಸುವಂತಾಗಬೇಕು, ಈಗಾಗಲೇ ಇರುವ ಮಾಹಿತಿಯನ್ನ ಅದರ ಲೇಖಕ, ಮಾಹಿತಿ ಸಂಗ್ರಾಹಕ,ಮೂಲ ಇತ್ಯಾದಿಗಳನ್ನ ಟಿಪ್ಪಣಿ ಮಾಡುವುದರ ಮೂಲಕ ಮಾಹಿತಿಯ ದ್ವಿಪ್ರತಿಗಳು ನೆಟ್ವರ್ಕ್ ನಲ್ಲಿ ಉಳಿದುಹೋಗುವುದನ್ನೂ ತಪ್ಪಿಸಿದ.
ಇದೆಲ್ಲಾ ಕ್ಲಿಷ್ಟ ಮಾಹಿತಿಗಳನ್ನು ಮನುಷ್ಯನ ಮುಂದಿಡುವಾಗ ಅವು ಸಾಮಾನ್ಯನು ಅರ್ಥಮಾಡಿಕೊಳ್ಳುವ ರೀತಿ ಇದ್ದರೆ ಮಾತ್ರ ತನ್ನ ಆವಿಷ್ಕಾರ ಸಾರ್ಥಕವಾಗುವುದೆಂದು ಆಗಲೇ ಮನಗಂಡಿದ್ದ ಬರ್ನಸ್ ಲೀ, ಅಂತದ್ದೊಂದು ಸಿಸ್ಟಂhypertext ಆಗಿ ಆಗಲೇ ಗರ್ಭಧರಿಸಿದೆಯೆಂದು ಕೂಡ ಗುರುತಿಸಿದ್ದ.
Hypertext ಅನ್ನು ಟೆಡ್ ನೆಲ್ಸನ್ (Ted Nelson) ಎನ್ನುವ ಕಂಪ್ಯೂಟರ್ ಪ್ರೋಗ್ರಾಮರ್ ೧೯೬೩ ರಲ್ಲಿ, ಡಾಕ್ಯುಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ನಲ್ಲಿ ತನ್ನ ಟಿಪ್ಪಣಿಗಳ ಪರಿವಿಡಿತಯಾರಿಸುವ ವಿಷಯದ ಮೇಲೆ ಅಧ್ಯಯನ ನೆಡೆಸುತ್ತಿದ್ದ ಸಮಯದಲ್ಲಿ ಎಲ್ಲರ ಮುಂದಿಟ್ಟ ಒಂದು ಯೋಚನೆ. ಇದನ್ನು ಉಪಯೋಗಿಸಿಕೊಂಡು ಅದಾಗಲೇ ಅನೇಕ ತಂತ್ರಾಂಶಗಳುಕೂಡ ಅಭಿವೃದ್ದಿಗೊಂಡಿದ್ದವು, ಮತ್ತು ಟಿಮ್ ಬರ್ನಸ್–ಲೀ ಕೂಡ ಇದನ್ನ ೧೯೮೦ರಷ್ಟರಲ್ಲೇ ಉಪಯೋಗಿಸಲಿಕ್ಕೆ ಪ್ರಯತ್ನಿಸಿದ್ದ ಕೂಡ.
೧೯೮೯ರಲ್ಲಿ ತಾನು ಮಂಡಿಸಿದ್ದ ಯೋಜನೆಯನ್ನು ಮತ್ತೆ ಪರಾಮರ್ಷಿಸಿದ ಟಿಮ್ ಬರ್ನಸ್–ಲೀ ೧೯೯೦ರಲ್ಲಿ hypertext ಮೇಲೆತಯಾರಿಸಿದ ಇನ್ಪಾರ್ಮೇಶನ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು CERN ನ ಮತ್ತೊಬ್ಬ ಕೆಲಸಗಾರ ರಾಬರ್ಟ್ ಕೈಲಿಆವು (RobertCailliau) ಜೊತೆಗೂಡಿ ಅಭಿವೃದ್ಧಿಪಡಿಸಿ ಅದನ್ನು ವರ್ಡ್ ವೈಡ್ ವೆಬ್ ಎಂದು ಮೊದಲ ಬಾರಿಗೆ ಕರೆದ.
ಈ ಸಿಸ್ಟಂ ೧೯೮೬ರಲ್ಲಿ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಗಳನ್ನು ಬರೆಯಲು ಬಳಸುತ್ತಿದ್ದ ಟ್ಯಾಗಿಂಗ್ ಎಲಿಮೆಂಟುಗಳಿಂದ StandardGeneralised Markup Language (SGML) ಅನ್ನೋ ತಂತ್ರಾಂಶದ ಮೇಲೆ ಆಧಾರಿತವಾದ Hypertext MarkupLanguage (HTML) ಅಂದ್ರೆ HTML Tags ಅನ್ನುವುದರ ಮೇಲೆ ಕೆಲಸ ಮಾಡುತ್ತಿತ್ತು. ೧೯೯೩ರವರೆಗೆ ಇದನ್ನು ಒಂದುStandard ಅಂತ ಮಾನ್ಯ ಮಾಡಿರಲೇ ಇಲ್ಲ. International Engineering Tas k Force (IETF) ೧೯೯೩ರಲ್ಲಿಮೊದಲ ಬಾರಿಗೆ HTML ಅನ್ನು ಮಾನ್ಯಮಾಡಿತಾದರೂ ಇದುವರೆಗೂ ಬರ್ನಸ್–ಲೀ ಮತ್ತು ಕೈಲಿಅವು ಬರೆದ ಮೂಲ ಟ್ಯಾಗ್ ಗಳು ಇಂದಿಗೂ HTML ಭಾಷೆಯಲ್ಲಿ ಉಳಿದುಕೊಂಡಿವೆ.
೧೯೯೧ ರಲ್ಲಿ, WWW ಸಿಸ್ಟಂ ಅನ್ನು ಪ್ರಾಯೋಗಿಕವಾಗಿ ಡೆವಲಪರ್ಗಳಿಗೆ ಪ್ರಯೊಗಾಲಗಳು ಮತ್ತು ಶೈಕ್ಷಣಿಕ ವಿಧ್ಯಾಲಯಗಳ ಮೂಲಕ CERN ಪ್ರೋಗ್ರಾಮ್ ಲೈಬ್ರರಿಯಾಗಿ ನೀಡಲಾಯಿತು. ಈ ಲೈಬ್ರರಿಯಲ್ಲಿ ಸಾಮಾನ್ಯ HTML ವೆಬ್ಬ್ರೌಸರ್, ವೆಬ್ ಸರ್ವರ್ ತಂತಾಂಶ, ಮತ್ತು ಡೆವೆಲಪ್ಮೆಂಟ್ ಲೈಬ್ರರಿಯನ್ನು ಪ್ರೋಗ್ರಾಮರುಗಳ ಸಹಾಯಕ್ಕೆ ಕೊಟ್ಟು, ಅವರದೇ ಹೊಸ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಂತೆ ಹುರಿದುಂಭಿಸಲಾಯಿತು. CERN ನ ಪ್ರಕಾರ,ಡಿಸೆಂಬರ್ ೧೯೯೧ರಲ್ಲಿ ಅಮೇರಿಕಾದಲ್ಲಿ ಮೊದಲ ವೆಬ್ ಸರ್ವರ್ ಕ್ಯಾಲಿಫೋರ್ನಿಯಾದ Stanford Linear Accelerator Center (SLAC) ನಲ್ಲಿ ಆನ್ಲೈನ್ ಬಂತು.
೧೯೯೩ ರಲ್ಲಿ, ಸಾರ್ವಜನಿಕ ವ್ಯಾಪ್ತಿಯಲ್ಲಿ ಡೆವಲೆಪ್ಮೆಂಟ್ ಕಿಟ್ ಅನ್ನು ಬಿಡುಗಡೆ ಮಾಡಲಾಯಿತು, ಇದೇ ಸಮಯದಲ್ಲಿ ವೆಬ್ ನ ಕೀರ್ತಿ ಮುಗಿಲು ಮುಟ್ಟಲಿಕ್ಕೆ ಶುರುಮಾಡಿತ್ತು. ಇದೇ ವರ್ಷ, University of Illinois ನ NationalCenter for Supercomputing Applications ಆಧುನಿಕ ಜಗತ್ತಿನ ವೆಬ್ ಬ್ರೌಸರ್ನ ಪೂರ್ವಗಾಮಿ ಅನ್ನುವ ತಂತ್ರಾಂಶವನ್ನು ಬಿಡುಗಡೆ ಮಾಡಿತು. Mosaic ನ ಮೊದಲ ಆವೃತ್ತಿ (ನಂತರ ಅದನ್ನು NetscapeNavigator ಅಂತ ಕರೆಯಲಾಯಿತು) X Window System ಮೇಲೆ ಆಧಾರಿತವಾಗಿದ್ದು, ಮೊದಲ ಬಾರಿಗೆ ಕಂಪ್ಯೂಟರಿನಲ್ಲಿ ಪರದೆಯ ಮೂಲಕ ಬ್ರೌಸರ್ ಬಳಕೆಗೆ ಅನುವು ಮಾಡಿಕೊಟ್ಟಿತು, ಇದನ್ನ PC ಮತ್ತು Mac ಆವೃತ್ತಿಗಳುಸ್ವಲ್ಪದರಲ್ಲೇ ಹಿಂಬಾಲಿಸಿದವು.
ಇದೆಲ್ಲವನ್ನ ಹಿಂಬಾಲಿಸಿದ್ದು, ಅತಿ ಶೀಘ್ರವಾಗಿ ಆನ್ಲೈನ್ ಬರಲಿಕ್ಕೆ ಶುರುವಾದ ವೆಬ್ ಸರ್ವರ್ಗಳು ಮತ್ತು ಅವುಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ತಮ್ಮ ವೆಬ್ ಬ್ರೌಸರ್ ಗಳ ಮೂಲಕ ಬಳಸಿಕೊಳ್ಳಲಿಕ್ಕೆ ಶುರುಮಾಡಿದ ಜನರ ಸಂಖ್ಯೆ. ಲೆಕ್ಕಾಚಾರದ ಪ್ರಕಾರ ೧೯೯೩ ರಲ್ಲಿ ೨೫೦ರಷ್ಟಿದ್ದ ವೆಬ್ ಸರ್ವರ್ಗಳ ಸಂಖ್ಯೆ, ೧೯೯೪ ಕೊನೆಯ ಒಳಗೆ ೨೫೦೦ ಆಗಿತ್ತು.
೧೯೯೫ರ ಒಳಗೆ ೭೦೦ ಹೊಸ ವೆಬ್ ಸರ್ವರ್ಗಳು ಪ್ರತಿದಿನ ಆನ್ಲೈನ್ ಬರುತ್ತವೆ ಮತ್ತು ವರ್ಷ ಕಳೆಯುವುದರ ಒಳಗೆ ೭೩,೫೦೦ ಸರ್ವರ್ಗಳು ವೆಬ್ ನ ಜೊತೆಗೂಡುತ್ತವೆ ಎಂದು ಲೆಕ್ಕ ಹಾಕಲಾಯಿತು. ಮತ್ತು ಈ ಎಲ್ಲ ಬೆಳವಣಿಗೆಗೆಕಾರಣವಾಗಿದ ಮುಖ್ಯ ಅಂಶ ಅಂದ್ರೆ, ಆ ದಿನಗಳಲ್ಲಾದರೂ, ವೆಬ್ ಸರ್ವರ್ ಡೆವೆಲಪ್ಮೆಂಟ್ ತಂತ್ರಾಂಶ ಮತ್ತು ವೆಬ್ ಬ್ರೌಸರ್ ಗಳು ಸ್ವತಂತ್ರವಾಗಿ ದೊರಕಿದ್ದು (Free as in FREEDOM).
ಇತ್ತೀಚೆಗೆ ಯುನೈಟೆಡ್ ನೇಷನ್ಸ್ ನ ಏಜನ್ಸಿ International Telecommunication Union ಬಿಡುಗಡೆ ಮಾಡಿದ ಅಧ್ಯಯನದ ಪಲಿತಾಂಶದ ಪ್ರಕಾರ, ಜಗತ್ತಿನ ೬.೭ ಬಿಲಿಯನ್ ಜನಸಂಖ್ಯೆಯ ಕಾಲುಭಾಗ ಜನ ಇಂಟರ್ನೆಟ್ಬಳಸ್ತಿದಾರೆ ಮತ್ತು ಈ ಸಂಖ್ಯೆ ಪ್ರತಿವರ್ಷ ೨೦೦೨ಕ್ಕೆ ಹೋಲಿಸಿದಂತೆ ಶೇಕಡ ೧೧ ಪ್ರತಿಶತ ಹೆಚ್ಚುತ್ತಲೇ ಇದೆ.
ತಮ್ಮ ಆವಿಷ್ಕಾರವೊಂದು ಹುಟ್ಟಿದ ೨೦ ವರ್ಷಗಳಲ್ಲೇ, ತಮ್ಮ ಜೀವಿತದ ಅತ್ಯುನ್ನತ ತಂತ್ರಜ್ಞಾನ ಕ್ರಾಂತಿಯಾಗಿ ಹೊರಹೊಮ್ಮಿತು. ಇಂಥ ವಿದ್ಯಮಾನ ಜರುಗುವುದೆಂದು ಬರ್ನರ್ಸ್–ಲೀ ಅಥವಾ ಕೈಲಿಅವರು ಕೂಡ ನಿರೀಕ್ಷಿಸಲಾರರು.
ಇಂದು ಇಂಟರ್ನೆಟ್ ಮೂಲಕ ದೊರೆಯುತ್ತಿರುವ ಸೇವೆಗಳು ಶಿಕ್ಷಣ ಕ್ಷೇತ್ರದಲ್ಲೂ ಅತಿ ಮುಖ್ಯಪಾತ್ರವಹಿಸುತ್ತಿವೆ. ಅನ್ಲೈನ್ ಕ್ಲಾಸ್ ರೂಮುಗಳು, ವಿಕಿಪೀಡಿಯಾದಂತಹ ನಿಘಂಟು, ಐ.ಆರ್.ಸಿ (ಇಂಟರ್ನೆಟ್ ರಿಲೆ ಚಾಟ್) ನಂತಹ ಸಹೃದಯಿಚಿಂತಕರು, ಸಮಾನ ಮನಸ್ಕರು, ಕಲಿಯಲು ಕಲಿಸಲು ಆಸಕ್ತಿಯಿರುವವರು ದೊರೆಯುವ ಚಾಟ್ ರೂಮ್ ಗಳು, ಟ್ವಿಟರ್, ಫೇಸ್ ಬುಕ್, ಇತ್ಯಾದಿ ಮೈಕ್ರೋ ಬ್ಲಾಗಿಂಗ್ ಸೈಟ್ ಗಳಿಂದ ಸೆಕೆಂಡುಗಳಿಗೊಮ್ಮೆ ವಿಶ್ವದ ಹಾಗು ಹೋಗುಗಳನ್ನುಅರಿಯಲು ಸಾಧ್ಯವಿದೆ. ಈ ಆವಿಷ್ಕಾರಗಳೆಲ್ಲಾ ಇಂಟರ್ನೆಟ್ ನಿಂದಲೇ ಹುಟ್ಟಿ, ಅಲ್ಲಿಯೇ ಒಂದು ಹೊಸ ಲೋಕವನ್ನು ಸೃಷ್ಟಿಸಿರುವುದನ್ನು ನಾವಿಂದು ಕಾಣಬಹುದಾಗಿದೆ.
ಚಿತ್ರಗಳು: ವಿಕಿಪೀಡಿಯ ಕಾಮನ್ಸ್ (http://commons.wikipedia.org)