ಎಲ್ಲ ದಿಕ್ಕುಗಳ ಸುತ್ತಿ ಹೆಣೆದು
ಅಭೇದ್ಯ ಚಕ್ರವ್ಯೂಹದ ಬಗೆಯ
ಸೂರು ಕಟ್ಟುತಿಹುದು ಜೇಡ
ಬದುಕ ಎಲ್ಲ ಕಷ್ಟ ಕಾರ್ಪಣ್ಯಗಳ
ಸುತ್ತ ಕಟ್ಟಿಹುದಿದನು
ಸುಲಭದ ಮೋಕ್ಷ ಮಾರ್ಗವಲ್ಲವಿದು
ಬೆಳಗಿನ ಮಂಜಿನ ಹನಿ ಸೆರೆಹಿಡಿದು
ಮುತ್ತಿನ ಹಾರದಂತೆ ಕಂಗೊಳಿಸಿ
ಆಕರ್ಷಿಸುವುದು
ಮತ್ತೊಂದು ಗಳಿಗೆ, ಹುಷಾರು
ಒಳ ಹೊಕ್ಕಿಯೆ ಇದಲಿ.. ಆಹಾರವಾಗುವೆ,
ಅಭಿಮನ್ಯುವೇ ನೀನು?
ಚಿತ್ರ:- ಗುರುಪ್ರಸಾದ್ ಶೃಂಗೇರಿ
ಆತ್ರಾಡಿ ಸುರೇಶ ಹೆಗ್ಡೆ ಇದರ ಬಗ್ಗೆ ಹೀಗೆ ಹೇಳ್ತಾರೆ:-
ರಾತ್ರಿಯಿಡೀ ನಾ ಹೆಣೆದ ಬಲೆಗೆ ಬಲಿಯಾಗಿ
ನನ್ನ ಆಹಾರವಾದವರು ಬರೀ ಬೆರಳೆಣಿಕೆಯಷ್ಟು
ಹೊಟ್ಟೆ ತುಂಬದಿದ್ದರೂ ನಾನುಂಬುತಿರುವುದು
ನನ್ನ ಪರಿಶ್ರಮದ ಫಲ ಎಂಬ ತೃಪ್ತಿ ಬೆಟ್ಟದಷ್ಟು