ಫೆಬ್ರವರಿ ೨೫, ೨೦೧೨ – ಸಂಯುಕ್ತ ಕರ್ನಾಟಕ ಅಂಕಣ
ಇದಿರಲಿ, ನಮ್ಮ ಅಕ್ಕಪಕ್ಕದ ಸಾಮಾನ್ಯರೂ ಅಂದರೆ ರೈತರಿರಲಿ, ಮಕ್ಕಳಿರಲಿ , ಕಲಿತ ವಿದ್ಯಾವಂತರಿರಲಿ, ಕಲಿಯದ ಅವಿದ್ಯಾವಂತರೇ ಇರಲಿ ಎಲ್ಲರಿಗೂ ತಂತ್ರಜ್ಞಾನದ ಅರಿವು ಅರಿವಿಲ್ಲದೇ ಇರುತ್ತದೆ. ಈಜುವವನಿಗೆ ಈಜು ಕಲಿಸಿದ್ದಾರು? ಹೊಲ ಉಳುವುವವ ಅದಕ್ಕೆ ವಿದ್ಯಾಱತೆ ಪಡೆದದ್ದಾದರೂ ಎಲ್ಲಿಂದ, ಸೈಕಲ್ ಹೊಡೆಯಲು ಕಲಿತ ಮಗುವಿಗೆ ಅದನ್ನು ಕಲಿಯಲು ಸಾಧ್ಯವಾದದ್ದಾರೂ ಎಲ್ಲಿ ಎಂಬ ಪ್ರಶ್ನೆಗಳನ್ನು ಕೇಳಿಕೊಂಡಾಗ , ತಂತ್ರಜ್ಞಾನವನ್ನು ನಾವು ನಮ್ಮ ಜೀವನದಲ್ಲಿ ಹೇಗೆ ಸುಲಭವಾಗಿ ಅಳವಡಿಸಿಕೊಳ್ಳುತ್ತ ಕಲಿಯುತ್ತೇವೆ ಎಂಬುದು ತಿಳಿಯುತ್ತದೆ. 
ಕಂಪ್ಯೂಟರ್ ಕೊಂಡ ಮೊದಲ ದಿನಗಳಲ್ಲಿ ಅದನ್ನು ಬಳಸುವುದು ದೊಡ್ಡ ವಿಷಯವಾಗಿತ್ತು. ದಿನ ಕಳೆದಂತೆ ಗೆಳೆಯರೊಂದಿಗೆ ಅದರ ಬಗ್ಗೆ ಮಾತನಾಡುತ್ತಾ, ಹೊಸ ಬಗೆಯ ಕೆಲಸಗಳನ್ನು ಕಂಪ್ಯೂಟರ್ ಬಳಸಿ ಕಲಿತೆವು, ದಿನಗಳೆದಂತೆ ಕನ್ನಡವನ್ನು ಕಂಪ್ಯೂಟರ್ ಮೂಲಕ ನೋಡಬಹುದೇ, ಕನ್ನಡದಲ್ಲೇ ವ್ಯವಹರಿಸಬಹುದೇ ಎಂದು ಯೋಚಿಸುತ್ತಾ, ಚರ್ಚಿಸುತ್ತಾ ಹೋದಂತೆಲ್ಲಾ ಒಂದಲ್ಲ ಒಂದು ವಿಧವಾಗಿ ವಿಷಯಗಳ ಪರಿಚಯವಾದವು. 
ಗೆಳೆಯರ ಜೊತೆಗೆ ಜ್ಞಾನದ ಭಂಡಾರವನ್ನೇ ನಮ್ಮ ಕಣ್ಣೆದುರಿಗೆ ತೆರೆದಿಟ್ಟಿದ್ದು  ಇಂಟರ್ನೆಟ್‌ನ ಸರ್ಚ್ ಎಂಜಿನ್ ಗೂಗಲ್ (http://google.com) ಈ ಇಂಟರ್ನೆಟ್ ವಿಳಾಸವನ್ನು ಬ್ರೌಸರ್ ಎಂಬ ತಂತ್ರಾಂಶದ ವಿಳಾಸ ಪಟ್ಟಿಯಲ್ಲಿ (Address bar)  ತುರುಕಿ, ನಂತರ ನಮ್ಮೆದುರಿಗೆ ಬರುವ ಸರ್ಚ್ ಎಂಬ ಬಾಕ್ಸ್ ನಲ್ಲಿ ನಮಗೆ ಏನು ಬೇಕು ಎಂಬುದನ್ನು ಕೀಲಿ ಮಣೆಯಿಂದ ಕುಟುಕಿದರಾಯ್ತು. ಇಂಟರ್ನೆಟ್ ನಲ್ಲಿರುವ ರಾಶಿ ರಾಶಿ ಫಲಿತಾಂಶಗಳು ನಮ್ಮೆದುರಿಗೆ ಬರುತ್ತಾ ಹೋಗುತ್ತವೆ.  ಅದರಲ್ಲೂ ಸಾಮಾನ್ಯವಾಗಿ ಮೊದಲ ಕೊಂಡಿಯಲ್ಲಿರುವ ವಿಕಿಪೀಡಿಯದ ಫಲಿತಾಂಶಗಳಂತೂ ಮೊದಲ ಭಾರಿಗೆ ಇಂಟರ್ನೆಟ್ ಬಳಸುತ್ತ ಹೊಸ ವಿಷಯ ತಿಳಿಯುತ್ತಿರುವವನಿಗೆ ರಸಗವಳ. ನೇರವಾಗಿ ಇಂಗ್ಲೀಷ್ ವಿಕಿಪೀಡಿಯ ಪುಟವನ್ನು ನೋಡಲು http://en.wikipedia.org ಗೆ ಇಂಟರ್ನೆಟ್ ನಲ್ಲಿ ಸಂಚರಿಸಿ. ಕನ್ನಡ ವಿಕಿಪೀಡಿಯ ಕೂಡ ಇಂಟರ್ನೆಟ್ ನಲ್ಲಿ ಲಭ್ಯ  http://kn.wikipedia.org. 
ಇಲ್ಲಿಂದ ನಿಮಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾದರೂ ಹೇಗೆ ಎಂಬ ಸಣ್ಣ ಮಾಹಿತಿ ತಿಳಿಯಬಹುದು. ಇನ್ನೂ ಹೆಚ್ಚಿನ ಪ್ರಶ್ನೆಗಳಿಗೆ ಮುಂದಿನ ಕಂತುಗಳಲ್ಲಿ ಉತ್ತರ ಕೊಡುತ್ತಾ ಸಾಗುತ್ತೇನೆ. ನಿಮ್ಮ ಪ್ರಶ್ನೆಗಳನ್ನು [email protected] ಗೆ ಕಳುಹಿಸಿಕೊಡಿ, ಮುಂದಿನ ಕಂತುಗಳನ್ನು ನಿಮ್ಮ ತಂತ್ರಜ್ಞಾನ ಕಲಿಕೆಗೆ ನೆರವಾಗುವಂತೆ ಮಾಡಲು ಇದು ಬಹಳ ಸಹಕಾರಿಯಾಗುತ್ತದೆ..