ಇರುಳ ಬಾನ ನೋಡಿದಾಗ
ಎತ್ತ ನೋಡು ಕಪ್ಪು ಛಾಯೆ
ಕಾಣದಾಯ್ತು ಚುಕ್ಕಿ ಗುಂಪು
ಯಾರು ಕದ್ದರೋ?

ಕತ್ತಲಲ್ಲೂ ಹತ್ತು ದೀಪ
ಬೆಳಗಿ ಬೆಳಗಿ ಕತ್ತಲನ್ನು
ಹೊಸಕಿ ಹಾಕಿ ಕುಳಿತರವರು
ಅವರೆ ಕದ್ದರೋ?

ಕತ್ತಲೆಯ ಕತ್ತಲಲ್ಲಿ
ಎಣಿಸುತ್ತಿದ್ದೆ ಚುಕ್ಕಿಗಳನು
ಲೆಕ್ಕ ತಪ್ಪಿ ಹೋಯಿತಿಂದು
ಎಂತ ಮಾಡಲೋ?


ನನ್ನದೊಂದು ಚಿಕ್ಕ ದಾವೆ
ಹೂಡಲೊರಟು ಬೆಚ್ಚಿ ನಿಂತೆ
ಹುಡುಕಿಕೊಡಿ ಎಂದರೆನ್ನ
ಹೊಡೆದು ಬಿಡುವರೋ?