ನನ್ನಲ್ಲಿನ ಆ ನಾನು
ಸಂಕೋಚದ ಮುದ್ದೆಯಾಗಿ
ಮನಸಿನ ಒಳಗಿನದ್ದನ್ನು
ಹೊರಗಿನ ಪ್ರಪಂಚಕ್ಕೆ
ಸರಾಗವಾಗಿ ಪಿಸುಗುಡುವ
ಬದಲು ಅಂಜಿಕೆಯಿಂದ
ನನ್ನದೇ ಲೆಕ್ಕಾಚಾರದ
ಪ್ರಪಂಚವ ಕಟ್ಟಿಕೊಂಡು
ಶೂನ್ಯದಲ್ಲೇ ವಿಹರಿಸುವ
ತನ್ನನ್ನು ತಾನೇ ತಾನಾಗಿ
ಕಲ್ಪಿಸಿಕೊಳ್ವ ಕಲ್ಪನಾಲೋಕದ
ಸಂಚಾರಿಯಾಗಿ ಲೋಕದ
ನಡುವೆ ಹೆಸರಿದ್ದೂ ನಾನೊಬ್ಬ
ಅನಾಮಧೇಯ…
ಅನುಭವವಿದ್ದೂ ಅನುಭವಿಸಿ
ಅನುಭವವ ಹೇಳಿಕೊLLಅಲು
ಯೋಚಿಸುವ ಆ ನಾನೇ ನಾನು
  – ಇದು ಇಂದಿನವರೆಗೆ
ನಾಳೆ ಆ ನಾನು ನಾನಾಗ ಬೇಕಿರುವುದಾದರೂ ಏನು?
ಬರೆಯಲೆತ್ನಿಸುವೆ ಕಾದು ನೋಡಿ..