ಕನ್ನಡ ವಿಕಿಪೀಡಿಯದ ಫೇಸ್‌ಬುಕ್ ಗುಂಪಿನಲ್ಲಿ ಯು.ಬಿ ಪವನಜರ ಪ್ರತಿಕ್ರಿಯೆ ಈ ಪ್ರಶ್ನೆಗೆ ಉತ್ತರಿಸಬಲ್ಲದು:
ಪವನಜ ಯು ಬಿ ನುಡಿ ತಂತ್ರಾಂಶದ ಯುನಿಕೋಡ್ ಕೀಲಿಮಣೆಯಲ್ಲಿ ಒಂದು ದೊಡ್ಡ ದೋಷ ಇದೆ. ನುಡಿಯಲ್ಲಿ ಅರ್ಕಾವೊತ್ತು ಪಡೆಯಲು Shift-f ಬಳಕೆಯಾಗುತ್ತಿತ್ತು. ಅದನ್ನೇ ಯುನಿಕೋಡ್‌ನಲ್ಲೂ ಮುಂದುವರೆಸಿದ್ದಾರೆ. ಆದರೆ ಇಲ್ಲಿರುವ ತೊಂದರೆ ಎಂದರೆ <ವ್ಯಂಜನ> + Shift-f ಮಾಡಿದರೆ ಅದು “ರ + ಹಲಂತ್ + ವ್ಯಂಜನ” ಆಗುವ ಬದಲು ವ್ಯಂಜನ + <ಅರ್ಕಾವೊತ್ತಿನ ಆಕಾರದ ಒಂದು ಅಕ್ಷರ> ಆಗುತ್ತದೆ. ಈ <ಅರ್ಕಾವೊತ್ತಿನ ಆಕಾರದ ಒಂದು ಅಕ್ಷರ> ವನ್ನು ನುಡಿ ಯುನಿಕೋಡ್ ಫಾಂಟ್‌ನಲ್ಲಿ ಅಧಿಕವಾಗಿ ಸೇರಿಸಲಾಗಿದೆ. ಅದು ಯುನಿಕೋಡ್ ಚಾರ್ಟ್‌ನಲ್ಲಿಲ್ಲ. ಅದಕ್ಕೆ ಪ್ರತ್ಯೇಕ ಯುನಿಕೋಡ್ ಸಂಕೇತವನ್ನು Private User Area ದಲ್ಲಿ ಸೇಸಿರಿಸಲಾಗಿದೆ. ಇದರಿಂದಾಗಿ ನೀವು ಹೀಗೆ ತಯಾರಿಸಿದ ಪಠ್ಯವನ್ನು ASCII ಗೆ ಬದಲಾಯಿಸಿದಾಗ ತಪ್ಪಾಗುತ್ತದೆ. NLP ಯಲ್ಲಂತೂ ಕಂಡಿತ ಬರಿಯ ತಪ್ಪು ಲೆಕ್ಕಗಳೇ ಆಗುತ್ತವೆ. ಆದುದರಿಂದ ದಯವಿಟ್ಟು ಯಾರೂ ನುಡಿ ಯುನಿಕೋಡ್ ಕೀಲಿಮಣೆ ಬಳಸಬೇಡಿ.