ಅಪರಾನ್ಹವೇನೂ ಆಗಬೇಕಿಲ್ಲ
ಬಿಸಿಯ ಜಳಪಿನ ಜೊತೆ
ಸುಡುವ ತಾಪವ ಕಾಣಲು
ಸುಟ್ಟು ನಿಂತಿರುವ ಧರೆಯು ಕಾಣದೆ?
ಹಸಿರ ಕಡಿದೂ ಕಡಿದೂ
ಮರುಭೂಮಿಯ ನಡುವೆ,
ನಾವೇ ನಿಂತು ಹೇಳುವೆವು
‘ಭೂಮಿ ಮರುಭೂಮಿಯಾಯ್ತಲ್ವೇ?’
ಕಾಡಿಲ್ಲ! ಅಲ್ಲೆಲ್ಲಾ ಬರೀ ಕಾಂಕ್ರೀಟು
ಜೊತೆಗೆ ಬೆಳಕಿನ ಪ್ರಕರತೆಯ ತೋರಲು
ಸೀಸೆಯ ಗೋಡೆಗಳ ನಿಲುಗಡೆ
ನಿಂತು ನೋಡೀಗ ಸೊರಗಿದ ಬಾಳು