ಸಂಜೆ ದೀಪ ಹೊತ್ತಿಸುವ ಹೊತ್ತು
ಅಲ್ಲಲ್ಲಿ ಬೆಳಗಿದ ದೀಪದ ಜೊತೆಗೆ
ಚಂದಿರನ ಮುಖ ಅರಳಿತ್ತು
ತಂಗಾಳಿಯ ಆ ಸಣ್ಣ ತೂಗು
ನನ್ನರಗಿಣಿಯ ಮುಂಗುರುಳ
ಹಣೆಯ ಮೇಲೆ ಆಡಿಸಿತ್ತು
ಸುತ್ತಲಿದ್ದ ಪ್ರಪಂಚದ ಅರಿವಿಲ್ಲದೆ
ನೀ ಹೇಳುವ ಮಾತು ಕೇಳಲು
ನನ್ನ ಕಿವಿ ಅರಳಿ ನಿಂತಿತ್ತು
ನಿನ್ನ ತುಟಿಯಿಂದುರುಳಿದ
ಮಾತಿನ ಮುತ್ತುಗಳ ಎಣಿಸುತ್ತಾ
ನಾ ದಾರಿ ಸವೆಸಿಯಾಗಿತ್ತು
ನೀ ಜೊತೆಗಿದ್ದರೆ ಚಿನ್ನಾ
ಮುಸ್ಸಂಜೆ ಅದೆಷ್ಟು ಚೆನ್ನ
ಮರೆತಾಗಿತ್ತು ನನ್ನನ್ನೇ ನಾ
ಚೆನ್ನಾಗಿದೆ ಸಾರ್..
ಧನ್ಯವಾದಗಳು ವೆಂಕಟ್