ಸಿಕ್ಕರೆರೆಡು ರೆಕ್ಕೆ ನನಗೆ
ಹಿಗ್ಗು ಬರುವುದು
ತೋರಲದನು ಜಗಕೆ ನಾನು
ನಭಕೆ ಜಿಗಿವೆನು
ಮನುಜ ಮನಸಿಗೆಣೆಯೆ ಹೇಳು
ಕಷ್ಟವಾವುದು?
ಮನಸು ಮಾಡೆ ದಿಕ್ಕು ದೊರಕಿ
ಹಾರಿ ನಲಿವೆನು