‍‍‍‍

ಅತ್ಯಂತ ಸುರಕ್ಷಿತ ಬ್ರೌಸರ್ ‌Firefox ಅನ್ನು ಅಭಿವೃದ್ಧಿ ಪಡಿಸುವ ಮೊಜಿಲ್ಲಾ ಫೌಂಡೇಶನ್‌ನ ವೆಬ್‌ಸೈಟ್ ‍- http://mozilla.org ಅನ್ನು ಈಗ ಕನ್ನಡದಲ್ಲೂ ನೊಡಬಹುದು. ‍ಕನ್ನಡ ಆವೃತ್ತಿ ಇಲ್ಲಿ ಲಭ್ಯವಿದೆ. ಫೈರ್‌ಫಾಕ್ಸ್ (F‌irefox) ಅನ್ನು ಕನ್ನಡೀಕರಿಸುವ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಅನುವಾದ ತಂಡ ಈ ವೆಬ್‌ಪಾರ್ಟ್‌ನ ಲೋಕಲೈಸೇಷನ್ (ಕನ್ನಡ ಅನುವಾದ)ದ ಕೆಲಸದ ಹಿಂದಿದೆ.

ನಿಮಗೆ ಈಗಾಗಲೇ ತಿಳಿದಿರುವಂತೆ ‌F‌irefox ಬ್ರೌಸರ್ ಡೆಸ್ಕ್ತಾಪ್ ಹಾಗೂ ಆಂಡ್ರಾಯ್ಡ್‌ನಲಿ ಕನ್ನಡ ಇಂಟರ್‌ಫೇಸ್‌ನೊಂದಿಗೆ ಲಭ್ಯವಿದೆ. ಫೈರ್‌ಫಾಕ್ಸ್ ಕನ್ನಡ ಆವೃತ್ತಿ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‍ಮೊಜಿಲ್ಲಾ ಲೋಕಲೈಸೇಷನ್ ತಂಡದ ಜೊತೆಗೆ ಕೈಜೋಡಿಸಲು ಇಲ್ಲಿ ಕ್ಲಿಕ್ಕಿಸಿ. ಕನ್ನಡದಲ್ಲಿ ನಿಮ್ಮ ನೆ‌‌ಚ್ಚಿನ ಬ್ರೌಸರ್ ನೋಡುವುದರ ಜೊತೆಗೆ ಅದನ್ನು ಯಾವಾಗಲೂ ಕನ್ನಡದಲ್ಲಿರುವಂತೆ ಮಾಡಲು ನಿಮ್ಮ ಸಹಾಯ ಯಾವಾಗಲೂ ಬೇಕಿರುತ್ತದೆ. ನಮ್ಮೊಡನೆ ಕೆಲಸ ಮಾಡಲು ಜೊತೆಯಾಗಬಹುದು.

ಕನ್ನಡೀಕರಿಸಬಹುದಾದ ಮೊಜಿಲ್ಲಾದ ಇತರೆ ಯೋಜನೆಗಳು

ಬ್ರೌಸರ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಷನ್‌ನ ಲೋಕಲೈಸೇಷನ್ ಸ್ಥಿತಿಗತಿ:


ಲೋಕಲೈಸೇಷನ್‌ ತಂಡ ಮತ್ತು ಯೋಜನೆಗಳನ್ನು ಈ ಕೆಳಕಂಡ ಕೊಂಡಿಗಳಲ್ಲಿ ಕಾಣಬಹುದು:

  • Mozilla l10n Dashboard – https://l10n.mozilla.org/teams/kn
  • Mozilla Locamotion – https://mozilla.locamotion.org/kn/ (ಬ್ರೌಸರ್ ಮತ್ತು ಮೊಬೈಲ್ ಆಪ್‌ನ ಕನ್ನಡ ಅನುವಾದದ ಕೆಲಸ ಇಲ್ಲಿ ನೆಡೆಯುತ್ತಿದೆ)
  • Team Contact Page