ಪೋಸ್ಟ್‌ಗಳು

ಡಿಸೆಂಬರ್, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೨೦೦೯ ಫ್ಲಾಶ್ ಬ್ಯಾಕ್

ಫ್ಲಾಶ್ ಬ್ಯಾಕ್ ಗೆ ಹೋಗಿ ಫ್ಲಾಶ್ ಹೊಡೆದಂತಾಯ್ತು... ಬಾಕಿ ಇರುವ ಕೆಲಸಗಳ ಲಿಸ್ಟು ಮುಂದಾಯ್ತು...

ಆದದ್ದೇನು?.

ಅಸ್ಪಷ್ಟವಾಗಿದ್ದ ದಾರಿಗಳು ಸ್ಪಷ್ಟವಾಗಿ ಹೊಸ ಎತ್ತರಗಳತ್ತ ನನ್ನನ್ನು ನೂಕಿ ಒಂದಿಷ್ಟು ಸಣ್ಣಪುಟ್ಟ ಕಾರ್ಯಗಳ ಸಂಪೂರ್ಣವಾಗಿ ಮುಗಿಸಲಿಕ್ಕಾಯ್ತು.. ಹೀಗೇ ಮತ್ತಷ್ಟು, ನೂರೆಂಟು. ಸದ್ಯ ಹೊಸ ವರುಷ ಬಂದಾಯ್ತು..

ನೆನಪುಗಳು...

ಬುತ್ತಿ ಬಿಚ್ಚಿಟ್ಟು, ಹಳೆಯ ಸರಕುಗಳನ್ನೆಲ್ಲಾ ಹರಡಿ, ಸುತ್ತಲೆರೆಚುತ್ತಾ, ರದ್ದಿಯಲ್ಲೇ ಬಿದ್ದು ಒದ್ದಾಡುತ್ತಾ, ಪ್ಲಾಷ್ ಬ್ಯಾಕಿನ  ಕಪ್ಪು ಬಿಳುಪನು ಬಿಟ್ಟು ಹೊರಬಂದು ನೋಡಿದಾಗ ಗೊತ್ತಾಗಿದ್ದು ಅದು ನೆನಪೆಂದು.....

ಹೊಸ ವರುಷದ ಹರಕೆ

ವಿಶ್ ಲಿಸ್ಟ್ - ರೆಸೆಲ್ಯೂಶನ್, ಬಯಕೆಗಳು ಇತ್ಯಾದಿ ಎಲ್ಲವೂ ಹೊಸ ವರುಷಕ್ಕೇ... ಹೊಸ ದಿನಗಳ ಬರುವಿನ ಜೊತೆ ಹೊಸದನ್ನೂ ತರಲೆಂಬ ಕೋರಿಕೆ... ನಮಗೆ ಅದನ್ನೆಲ್ಲಾ ತಂದು ಕೊಡುವರು ಯಾರು? ಹೆಸರನ್ನೇಳುವಿರಾ? ಎಲ್ಲವೂ ಬೇಕೆಂದ ಮನಕ್ಕೆ, ಹೊಸ ಜೋಶ್ ತುಂಬಲಿಕ್ಕೆ ಮಾತ್ರ ಹೊಸ ವರುಷ.... ಜೋಶ್ ಜೊತೆಯಲ್ಲೇ ಇಟ್ಟು ಕೊಂಡು, ವರುಷ ಪೂರ್ತಿ ಚುರುಕಾಗಿದ್ದರೆ ಮಾತ್ರ ಸಾಧ್ಯ... "ಕನಸುಗಳ ನನಸಾಗಿಸುವುದು...." ಕನಸುಗಳ ನನಸಾಗಿಸುವ ಜೋಶ್ ಹೊತ್ತು ಹೊಸ ವರುಷ ಎಲ್ಲರ ಜೀವನದಲ್ಲಿ ಮತ್ತೆ ಬರಲಿ ಎಂದು ಹರಸುತ್ತಾ...

ನಿದ್ದೆ...

ನಿದ್ದೆ ಬರುವಳು ತಾಯಿ ಸಕಲ ಜೀವಕೆ ಸುಖವು ಜಾತಿಭೇದವ ಮರೆತು ಇಳೆಗೆ ನಿಶಬ್ದದ ಹರಿವು !

ಚಾರಣದ ಮೊದಲ ದಿನ

ಪಶ್ಚಿಮ ಘಟ್ಟಗಳ ಮಧ್ಯೆ ಸುತ್ತಿ ಸುಳಿದು ಸುಂದರ ಪ್ರಕೃತಿಯ ಮಡಿಲ ಹತ್ತಿ ಇಳಿದು ಹಳ್ಳ, ಕೊಳ ಝರಿಗಳ ಕಂಡು ಕುಣಿದು ಬಲ್ಲಾಳರಾನದುರ್ಗದ ಮುಂದೆ ಸುಳಿದು ಒಣಗಿಸಿದ ಪೊಳ್ಳೆಪೊಟರೆಗಳ ಕಿತ್ತುತಂದು ಅಗ್ನಿ ದೇವನ ಕೃಪೆಯ ಮುಂದು ಹಚ್ಚಿದ್ದಾಯಿತು ಸಣ್ಣ ಕುಂಡವೊಂದು ಹೊತ್ತಿದ್ದ ಪೊಟ್ಟಣವ ರಾಶಿ ಸುರಿದು ಅಡುಗೆ ಮಾಡಿ ಬಡಿಸಿದ್ದಾಯಿತಂದು ಜೊತೆ ಜೊತೆಗೆ ಬೆಟ್ಟದಲ್ಲೊಂದು ಮನೆಯ ಮಾಡಿ ಚಳಿಗಾಳಿ ಮಳೆಗೆ ಅಂಜದೆ ಕೂಡಿ... ಗ್ರಹ ನಕ್ಷತ್ರಗಳ ಜೊತೆಗೆ ಮಾತನಾಡಿ ನಿದ್ರಾದೇವಿಯ ತೆಕ್ಕೆಗೆ ಸ್ವಲ್ಪ ಜಾರಿ ನಿದ್ದೆ ಬಂದಿತ್ತೆನಗೆ ಕೊಂಚ ತಾಗಿ... ಆ ರಾತ್ರಿ ಹೆದರಿದವರಾರು? ಬೆಚ್ಚಿ ಬಿದ್ದವರಾರು? ಮತ್ತೋರ್ವರನು ಅಂದು ಹೆದರಿಸಿದವರಾರು ;) ಪಶ್ನೆಗಳ ಉತ್ತರಿಸೆ ಕೊಡುವೆ ದೊಡ್ಡ ಚಿಕ್ಕಿ....

ಇವಳು ಯಾರು?

ಪಟಪಟನೆ ಅಡಿಗಡಿಗೆ ವಾಚಾಳಿ ಇವಳೆಂದು ತಿಳಿಹೇಳೆ ರಗಳೆ ಅದುವಲ್ಲ -- ಇವಳು ಯಾರು?

ನೀಲ ನದಿಯ ತಟದ ನೆನಪು...

ಇಮೇಜ್
ಹರಿವ ನದಿಯ ಮಡಿಲಿನಲ್ಲಿ ಬೆಳಕನಿಡಿವ ತವಕದಲ್ಲಿ ನೀಲ ಬನದ ನೆರಳಿನಲ್ಲಿ ಹಕ್ಕಿ ಪಕ್ಕಿ ಸೆರೆಯ ಹಿಡಿದು ಪಟವ ನೋಡೆ ಮನವು ಮಿಡಿದು ಹೊಸದು ಕನಸ ಕಾಣುವಾಸೆ ಹೊಸದನೇನೋ ಮಾಡುವಾಸೆ....

ಕಾಲ ಚಕ್ರದ ಮುಂದೆ..

ಇಮೇಜ್
ಕಾಲ ಚಕ್ರದ ಮುಂದೆ ನನ್ನದೇನಿದೆ ಇಲ್ಲಿ? ಯುವಕನ ಪರಿ ತಿರುಗಿ ನನ್ನ ಜೀವನದ ಕೊನೆಯ ದಿನಗಳ ನೆನಪಿಸುತಿಹುದು... ಎದ್ದು ಕೂರಲೂ ಕಷ್ಟ, ಓಡುವುದೆಲ್ಲಿಯ ಮಾತು? ಇಷ್ಟು ದಿನ ಕಾಲಚಕ್ರವನಿಡಿದು ಕಲಿತದ್ದಷ್ಟೇ ಗೊತ್ತು.. ಈಗಿಲ್ಲಿ ಕೂತು, ಮೊಮ್ಮಗನಿಗೆ ಕೇಳಿಸುವೆ ಇದ್ದು, ಈಸಿ ಜಯಿಸುವ ಕಥೆಯ ಅಗೋ ಕಾಣುತ್ತಿವೆ ಅಲ್ಲಿ, ನನ್ನ ಚಿತ್ರಪಟದಲ್ಲಿ ಕಂಗೊಳಿಸುವ ಆ ಎರಡು ಕಣ್ಣುಗಳು ಕಾಣದ ಆ ಕೊನೆ ಎರಡು ದಿನಗಳ ಆಶ್ಚರ್ಯದಿಂದೆದುರುಗಾಣುತ್ತಾ... ಸುತ್ತಿ ಸುತ್ತಿ ತಿರುಗುವ ಕಾಲ ಚಕ್ರಕೆ ನಾನು ನಾಲ್ಕು ದಿನದ ಸಹಪಯಣಿಗನು ಸುಸ್ತಾದರೂ ವಿರಮಿಸುವ ಪ್ರಶ್ನೆಯಿಲ್ಲ.. ನಾಳೆಯ ಬದುಕಿನ ಉತ್ತರಕ್ಕೀ ಓಟ.. ಕಾಲಚಕ್ರದ ಮುಂದೆ ನಾನೇನೂ ಅಲ್ಲ....