ಪೋಸ್ಟ್‌ಗಳು

ಜನವರಿ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೂ-ದುಂಬಿ ಜೊತೆಯಾಟ

ಇಮೇಜ್
ಹೂವ ಕಂಡೊಡನೆ ದುಂಬಿ ತಾ ಬಂದು ಎದೆ ತುಂಬಿ ಗುಯ್ ಗುಟ್ಟು ತೇಲಾಡಿ ಮುತ್ತನಿಟ್ಟಿದೆ ನೋಡಿ ನಾಚಿಕೆಯು ಇದಕಿಲ್ಲ ನಮ್ಮಂತಲ್ಲವೇ ಅಲ್ಲ ತನ್ನ  ಜೀವನದ ಜೊತೆಗೆ ಪರಾಗಸ್ಪರ್ಶದ ಕೊಡುಗೆ ಹೂವಿಗೂ ಗೆಲುವು,  ತನ್ನನ್ನಾರೋ ಸ್ವರ್ಶಿಸಿ ಪೋಷಿಸಿ ಮುತ್ತನಿಟ್ಟಾಗ ಖುಷಿಯಿಂದರಳಿದೆ ನೋಡಿ ನಗುಮುಖದ ಚಲುವೆ ಇದ ಮುಡಿಯೆ ಕೊನೆಗೆ ಅವಳ ಚಂದಕೆ ಮೆರುಗು ಮಿಕ್ಕವರ ಕಣ್ಗಳಿಗೆ ಬೆರಗು ಚಿತ್ರ : ಹರಿಪ್ರಸಾದ್ ನಾಡಿಗ್

ಮುನಿದ ಮನ

ಮುನಿದ ಮನವೇ ಸ್ವಲ್ಪ ನನ್ನ ಮಾತು ಕೇಳೆಯಾ? ನಿಜವಾಗ್ಲೂ ಮನಸ್ಸಿರಲಿಲ್ಲ ನಿನ್ನ ಮನ ನೋಯಿಸಲಿಕ್ಕೆ.. ಈಗ ಹೇಳುವ ಕಾರಣವ ನೀನು ಕೇಳಬೇಕೆಂದೇನಿಲ್ಲ್ಲ.. ಸ್ವಲ್ಪ ನನ್ನ ಮಾತು ಕೇಳೆಯಾ?.... ಸಮಯದ ಪರಧಿಯ ದಾಟಿ ನೆಡೆಯಲಿಕ್ಕಾಗಲಿಲ್ಲ ಕೆಲಸದ ಮಧ್ಯೆ ಎಲ್ಲರೂ ಕಳೆದೇ ಹೋಗಿದ್ದರಲ್ಲಿ... ಇಲ್ಲೂ ಇಲ್ಲದ, ಅಲ್ಲೂ ಇಲ್ಲದ ತ್ರಿಶಂಕುವಿನಲ್ಲಿ ನಾನು ಸ್ವಲ್ಪ ನನ್ನ ಮಾತು ಕೇಳೆಯಾ?.... ತಪ್ಪು ಒಪ್ಪುಗಳ ಮಾತೇ ಇಲ್ಲ... ತಪ್ಪಾಗಿದೆ ಇಂದು, ಕೊಂಚ ಮರೆತು  ನನ್ನ ಮಾತ ಕೇಳೆಯಾ? ಸ್ವಲ್ಪ ನನ್ನ ಮಾತು ಕೇಳೆಯಾ?....

ಕೊಕ್ಕರೆ ಬಾಯಲ್ಲಿ..

ಇಮೇಜ್
ಹಕ್ಕಿಯ ಕೊಕ್ಕಿಗೆ ಸಿಕ್ಕಿದೆ ನೋಡಿ ಸೀಗಡಿ ಮೀನಿನ ಸವಿಯಾದ ಬಾಡಿ ಕೊಕ್ಕರೆ ಕುಕ್ಕಿದ್ರೆ ಬೇರೆಲ್ಲಿ ದಾರಿ ಆಹಾರ ಆಗೋದೆ ಜೀವನ ಪರಿ ಚಿತ್ರ: ಪವಿತ್ರ ಹೆಚ್

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ.... ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕಿಂದು ಹಬ್ಬದ ಸಂಭ್ರಮ,  ೬೦ ವರ್ಷಗಳಾಗಿಯೇ ಹೋಯ್ತಲ್ವೇ ನಮ್ಮ ಸಂವಿಧಾನ ಶಿಲ್ಪಿಯು ರಚಿಸಿದ ಆ ಕಲಂಗಳಿಗೆ... ಬೆಳಗ್ಗೆ ಎದ್ದು, ಬಿಳುಪಿನ ಉಜಾಲಾ ಉಡುಪು, ಅದೇ ಬಣ್ಣದ, ಕೆಲವೊಮ್ಮೆ ನೀಲಿ ಹೆಚ್ಚಾದ ಶೂ ಧರಿಸಿ ಜೇಬಿಗೊಂದು ಪುಟ್ಟ ರೋಜ್ ತೊಟ್ಟು,  ಕಿಸೆಯಲ್ಲಿ, ದೊಡ್ಡಾ ರಾಜಕಾರಣಿಯಂತೆ ಭಾಷಣದ ಚೀಟಿ ಇಟ್ಟು ನೆಡೆದಿದ್ದ ನೆನಪು ಇಂದು ಮರುಕಳಿಸಿದೆ... ಸೋಮಾರಿ ಡಬ್ಬದ ಮುಂದೆ ಕೂತು ಎಡ ಬಲ ಎಣಿಸುತ್ತ ಸರತಿಯ ಸಾಲಿನಲ್ಲಿ ಸೈನಿಕರು ಒಬ್ಬರ ಹಿಂದೊಬ್ಬರು ಮಾರ್ಚ್ ಫಾಸ್ಟ್  ಮಾಡುತ್ತಿರುವುದನ್ನು ಕಾಣುತ್ತಿದ್ದ ದಿನವಿತ್ತು.. ನಾನೂ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತಿದ್ದದ್ದಿದೆ.. ಇಲ್ಲಿ ನಾವು ಹಬ್ಬದ ಸಂಭ್ರಮದಲ್ಲಿದ್ದರೆ,  ದೇಶದ ಮತ್ತೊಂದು ಮೂಲೆಯಲ್ಲಿ  ಗುಂಡಿನ ಸುರಿಮಳೆ, 'ಕೆಣಕದಿರಿ ನಮ್ಮನ್ನು' ಎಂದಿದ್ದಾರೆ ನಮ್ಮ ಮಿನಿಸ್ಟರು, ಎಚ್ಚರಿಕೆಯ ಗಂಟೆ ಬಾರಿಸಿಯಾಗಿದೆ ನಮ್ಮ ಜವಾನರ ನಿಷ್ಟೆಯ ಸೇವೆಯೂ ಸಾಗಿದೆ... ೬೦ ವರ್ಷಗಳಾದರೂ ಇನ್ನೂ ನಮಗೆ ಪ್ರಜಾಪ್ರಭುತ್ವದ ಕಲೆ ಕರಗತವಾಗಬೇಕಾಗಿದೆ... ನಾನೂ, ನೀವೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ, ಬೆಳವಣಿಗೆಗೆ ಅಡೆತಡೆಯಾಗಿರುವ ಕೊಳಕನ್ನು ತೆಗೆಯಬೇಕಿದೆ.. ಇದೂ ನನ್ನ ಭಾಷಣ ನಿಮ್ಮ ಮುಂದೆ ಇಂದು ಕವನವಾಗಿದೆ.... ಯೋಚಿಸಿ, ಮತ್ತೊಮ್ಮೆ ಮಗದೊಮ್ಮೆ ಈ ಹಿಂದಿನ  ಸಾಧನೆಗಳನ್ನು,

ಹಕ್ಕಿ ಹಾಡು

ಇಮೇಜ್
ಬೆಳ್ಳಕ್ಕಿ ಜೋಡಾಗಿ ಹಾಡಿ ಕುಣಿದಾವೆ ಬಾನಲ್ಲಿ ತಮ್ಮದೇ ಆಟ ನೆಡೆಸಾವೆ ಹಾರುತ್ತ, ಹಾಡುತ್ತಾ ಕೂಡಾಗಿ ಜಿಗಿಯುತ್ತ, ಮೂಡಣದಿ ಚಿತ್ತಾರ ಬರೆದಾವೆ... ಕಂದಮ್ಮ ಗಳಿಗೆ ಕಾಳನುಣಿಸ್ಯಾವೆ ಅವ ನೋಡು, ಎಲ್ಲರೊಳಗೊಂದಾಗಿ ಆಡ್ಯಾವೆ.... ದಿನದಿನವು ಕಾದಾಡ್ವ ಮನುಜ ಜನ್ಮಕೆ ಇವು ದೂರದಲ್ಲೇ ನಿಂತು ತಿಳಿಯ ಹೇಳ್ಯಾವೆ... ಸೂರ್ಯ ಹುಟ್ಟಿದ ಒಡನೆ, ಜಳಕವೆಲ್ಲವ ಮುಗಿಸಿ ನಿತ್ಯದಾ ಕಾರ್ಯಕ್ಕೆ ತೊಡಗ್ಯಾವೆ... ಶಿಸ್ತಿಗೆ ಉದಾಹರಣೆ, ಘನಗಾಂಭೀರ್ಯದ ನೆಡೆಯು ಲೋಕ ಸಂಚಾರಿಗಳ ಜೊತೆಗೆ ಸೆಣೆಸ್ಯಾವೆ... ವಿಮಾನಗಳೇ ಅದುರುವವು, ಇವುಗಳಾ ಕಂಡೊಡನೆ ಹಾರಿದರೂ ನರರು ಸಾಟಿಯಿಲ್ಲ... ವರುಷಕೊಮ್ಮೆ ಇವುಗಳ ವಿಶ್ವ ಪರ್ಯಟನೆ ಖರ್ಚು ವೆಚ್ಚವು ಇಲ್ಲ, ಸುಖಕೆ ಸಾಟಿಯೆ ಇಲ್ಲ ದೂರ ದೂರಿನ ಮನೆಯ ಹಿತ್ತಲಲೆ ವಾಸ ಕಾವೇರಿ ನೀರ ಜೊತೆ ಕೆಲದಿನದ ಸಹವಾಸ ಕಾಲ ಕಳೆವುದರಲ್ಲಿ ಮತ್ತೊಂದು ಹೊಸ ದೇಶ ಮರಿಹಕ್ಕಿ ಜೊತೆಗೂಡಿ ಹೊರಟು ನಿಂತಾವು ರಂಗನತಿಟ್ಟಿಗೆ ಇಂದೇ ಭೇಟಿ ಕೊಡಿ ಒಮ್ಮೆ ಮತ್ತೆ ಸಿಗದೆ ಹೊರಟು ಹೋದಾವು... ಚಿತ್ರ : ಗುರು ಪ್ರಸಾದ್, ಶೃಂಗೇರಿ

ಕಾಣೆಯಾದವರು

ಕಾಣೆಯಾದವರಿಗೆ (ಟೆಲಿಸ್ಕೋಪಿನಲ್ಲೂ ಕಾಣಸಿಗದವರಿಗೆ): ರವಿವಾರದ ಗುಂಗಿನಲ್ಲಿ ರಜೆಯ ಮರೆಯಲ್ಲಿ ಲೋಕವನು ಮರೆತು ನೀವು ಮರೆಯಾದಿರೆಲ್ಲಿ? ಕಾಣೆಯಾಗಬೇಕು ಎಂದವರಿಗೆ (ಎಲ್ಲಿ, ಹೇಗೆ): ಹೊಸ ಕನಸನು ಹೊತ್ತು ಹೊಸಬರನು ಹುಡುಕಲಿಕ್ಕೆ ಬೇಜಾರ್ ಮಾಡ್ಕೊ ಬೇಡಿ ಇದು ಬರೀ ಹುಡುಗಾಟಕ್ಕೆ ಕಾಣೆಯಾಗದೆ ಎದುರಿಗಿರುವವರಿಗೆ : ನೀವೆಲ್ಲೋ ದಿಕ್ಕು ತಪ್ಪಿದಂತಿದೆ ಗೂಗಲ್ ಮ್ಯಾಪ್ಸ್ ಸ್ವಲ್ಪ ಸರಿಯಿದೆ ಬಳಸಿ ನೋಡಿ ಒಮ್ಮೆ ದೂರದಿದ್ದರೆ ಆಯ್ತು ಮುಂದೊಮ್ಮೆ....

ಛಾಯಾಗ್ರಹಣ

ನಯನ ಸಾಲದು ನಮಗೆ ಸೃಷಿಯ ಸೆರೆಹಿಡಿಯಲಿಕ್ಕೆ, ಅನಿಶ್ಚಿತತೆಯ ನಾಳೆಗೆ 

ಮುಗ್ದ ಮನಸ್ಸುಗಳು.....

ಇಮೇಜ್
ಉದ್ಯಾನದೊಳಗೊಂದು ಸುಂದರ ದಿನ ಅಣ್ಣ ಹೇಳುತ್ತಿರುವನೊಂದು ಕಥೆಯ ರೆಡಿ ಇಲ್ಲ ಕೇಳಲಿಕ್ಕೆ ತಂಗ್ಯವ್ವಾ, ಹೇಳ್ತಾಳೆ... ಬಿಡಲೇ ಬಿಡ್ತೀಯಾ ಬರೆ ಬುರುಡೆಯಾ.... ಅಣ್ಣಾ ಹೇಳ್ತಾನೆ: ನಿಜ ಹೇಳ್ತೀನಿ ಕೇಳವ್ವಾ ನೀನು ಬುರುಡೆ ಬಿಡ್ಲಿಕ್ಕೆ ಬರಾಂಗಿಲ್ಲ ನನ್ಗೆ ಕೇಳಿದೀನಿ ಇಲ್ಲಿನ ಕಥೆಯಾ ಶ್ಯಾಲ್ಯಾಗೆ ವಸಿ ಓಡಿ ಹೋಗ್ದೆ ಕೇಳಿದ್ರಾಯ್ತು ನೀನು... ತಂಗಿ: ಅಯ್ಯೋ ಬಿಡ್ಲೇ ಮುಗ್ಯಾಂಗಿಲ್ಲ ನಿಂದು ಆಟ ಆಡ್ಲಿಕ್ಕೊತ್ತಾಯ್ತು.. ಕಾಯ್ತಾವ್ರ್ ನನ್ ಗೆಳತೀರು.. ಕಥೆ ಹೇಳಾಗಿಂದ್ರೆ ಕೇಳು, ರಾತ್ರಿ ಹೇಳೋವಂತೆ ನೀನು ಬರಿಸ್ತೀಯಾ ನಿದ್ದೆ ನನ್ಗೆ, ತಲೆ ನೋವಾಂಗಿಲ್ಲ ಕೇಳು.. ಅಣ್ಣ: ಬಿಡಾಂಗಿಲ್ಲ ನಿನ್ನ ಇವತ್ತು, ಕೂಡಿ ನನ್ನೊಡನಾಡು ಬಾಳ ಮಾತಾಡ್ತೀ ನೀನು, ಸ್ವಲ್ಪ ನನ್ದೊಸಿ ಕೇಳು ನಾ ನಿಂಜೋಡಿ ಆಡ್ಬೇಕಾದ್ರೆ ಬೇರೆವ್ರ್ಯಾಕೆ ಹೇಳು.. ಚಿನ್ನ ಅಲ್ವಾ, ಕೇಳು ಮಾತ್ನಾ ನನ್ಕೂಡಾ ನೀನು ಆಡು ಚಿತ್ರಗಳು : ಹಳ್ಳಿ ಮನೆ ಅರವಿಂದ

ವನಸಿರಿ

ಇಮೇಜ್
ಬಂಡೀಪುರದ ಗೊಂಡಾರಣ್ಯದಲಿ  ರವಿಯ ರಂಗಿನಾಟ! ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು ಚಿತ್ರವಿಚಿತ್ರ ಲೋಕ! ಚರಾಚರ ಪಕ್ಷಿ ಸಂಕುಲಗಳ ಜೊತೆ ವನ್ಯ ಮೃಗಗಳ ವಾಸ ಜುಳು ಜುಳು ಹರಿವ ನೀರಿನ ಸೆಲೆ ಅದರೊಡನಾಡು ನೀ ಬೆಳಕಿನಾಟ! ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆ ನೀ ಕಲ್ಲು ಚಪ್ಪಡಿಯನ್ನು. ಖುಷಿಯ ಕೊಟ್ಟರೂ ಹೆದರಿಸುವುದದು ಬೆಚ್ಚನೆ ಮಲಗಿರುವ ಮೊಸಳೆಯನ್ನು! ಜೋಕೆ! ವನ್ಯಸಿರಿ ನಿನ್ನ ಕ್ಯಾಮೆರಾದಲ್ಲಿ ಸೆರೆಯಿಡಿಯಲಿಕ್ಕೆ ಮಾತ್ರ.. ಕಡಿದು ತಂದೆಯೋ ವನವ ಮಾನವ ಕಾದಿದೆ ನಿನಗೆ ಶಾಪ! ಚಿತ್ರ: ಅನಿಲ್ ರಮೇಶ್

ಹೀಗೊಂದು ಚಿತ್ರಪಟ

ಇಮೇಜ್
ದಿಗಂತದ ಆ ಎತ್ತರದಲಿ ಮಿರ ಮಿರ ಮಿನುಗುತ್ತಿರುವ ವಜ್ರದ ಹರಳ ತರಲೇನೋ ಎಂಬಂತೆ ಹಾರಿ ಹೋದ ಹಕ್ಕಿಯ ಚಿತ್ರಪಟ ಚಿತ್ರ : ಪವಿತ್ರ ಹೆಚ್

ಬಿಸಿಲು

ಇಮೇಜ್
ಅಪರಾನ್ಹವೇನೂ ಆಗಬೇಕಿಲ್ಲ ಬಿಸಿಯ ಜಳಪಿನ ಜೊತೆ ಸುಡುವ ತಾಪವ ಕಾಣಲು ಸುಟ್ಟು ನಿಂತಿರುವ ಧರೆಯು ಕಾಣದೆ? ಹಸಿರ ಕಡಿದೂ ಕಡಿದೂ ಮರುಭೂಮಿಯ ನಡುವೆ, ನಾವೇ ನಿಂತು ಹೇಳುವೆವು 'ಭೂಮಿ ಮರುಭೂಮಿಯಾಯ್ತಲ್ವೇ?' ಕಾಡಿಲ್ಲ! ಅಲ್ಲೆಲ್ಲಾ ಬರೀ ಕಾಂಕ್ರೀಟು ಜೊತೆಗೆ ಬೆಳಕಿನ ಪ್ರಕರತೆಯ ತೋರಲು ಸೀಸೆಯ ಗೋಡೆಗಳ ನಿಲುಗಡೆ ನಿಂತು ನೋಡೀಗ ಸೊರಗಿದ ಬಾಳು ...

ಮೀಟಿಂಗ್ ರಗಳೆ

ಮಾತಿನಲ್ಲೇ ಮುಗಿಯಿತು ದಿನ ಕೆಲಸವೆಲ್ಲಿಯ ಮಾತು ಮಾತಾಡಿದ್ದೇ ಆಯ್ತು ಮೈ ಬಗ್ಗಿಸಲೇ ಇಲ್ಲ ಕೆಲಸವೆಲ್ಲಿಯ ಮಾತು ಮಾತು ಮುಗಿಸುವುದರಲ್ಲೇ ಮುಗಿದಿತ್ತು ದಿನ ಈಗ ಮುಗಿಯಿತು ನನ್ನ ಮಾತು....

ಸಸ್ಯಕಾಶಿಯ ನಡುವೆ

ಸಸ್ಯಕಾಶಿಯ ನಡುವೆ ಒಂದು ಮುಂಜಾನೆ ನಾಲ್ಕು ಹೆಜ್ಜೆಯ ಹಾಕಿ ಪ್ರಕೃತಿಯ ಸವಿದೆ ಪಕ್ಷಿ ಸಂಕುಲದ ಚಿಲಿಪಿಲಿಯ ಜೊತೆಗೆ ನಲಿದಿತ್ತು ಅಳಿಲಿನ ಮರಿಯೂ ಕೆಳಗೆ ಕಣ್ಣಿಗೆ ತಂಪೆರೆವ ಹೂ, ಚಿಗುರ ಜೊತೆಗೆ ಅಲ್ಲಲ್ಲಿ ತಂಪೆರೆವ ಎಲೆಗಳ ದಟ್ಟಹೊದಿಗೆ ಹಸಿರು ಹಾಸಿನ ಗರಿಕೆಯಾ ಸೊಬಗು ರವಿಯ ಕಿರಣಗಳೋ ಅದು ತಂದಿತ್ತು ಬೆರಗು ಕೆರೆ ನೀರ ನರ್ತನವ ನೋಡಿಯೇ ಸವಿಯೋ ಮೀನು, ಬಾತುಗಳಿವೆ ಇಲ್ಲಿ ನೀ ಆಟವಾಡೋ ಮೂಡಣದ ರವಿಯಾ ಬೆಳ್ಳಿಕಿರಣಕೆ ಇಲ್ಲಿ ಮೈ ಒಡ್ಡಿ ನಿಂತಿವೆ ಕೊಕ್ಕರೆ , ಬೆಳ್ಳಕ್ಕಿ ನೋಡೋ ಬೆಳ್ಳಂಬೆಳಗೆ ಚಳಿಗೆ ಹೆದರದೆ ಬಂದೆ ಚಳಿಬಿಟ್ಟ ಎಷ್ಟೋ ಮಂದಿಯ ಕಂಡೆ ಲವಲವಿಕೆ ಮೈಗೂಡಿ ಒಡನಾಡಿಯಾಯ್ತು ಮತ್ತಷ್ಟು ಹೊಸಬೆಳಗ ಸೆರೆಹಿಡಿದೂ ಆಯ್ತು ತಿಳಿದು ತಿಳಿಯದೆಯೋ  ಇಲ್ಲಿ ಬರದಿದ್ದೆ ನಾನು ಎಳೆದೊಯ್ದುದವರಿಗೆ ಈ ನಾಲ್ಕು ಸಾಲು ಸಾಗಿತ್ತು ಪಾಠ ಬಾಗಿಲೆಡೆ ಸಾಗುವವರೆಗೆ ವಿಖ್ಯಾತ ಈ ಸ್ಥಳ ತಿಳಿದಿದೆಯೆ ನಿಮಗೆ?

ಸುಗ್ಗಿ

ಇಮೇಜ್
ಚಿತ್ರ: ಪವಿತ್ರ ಹೆಚ್ ಸಂಕ್ರಾತಿಯ ಈ ಸಂಜೆಯಲಿ ಓಡಿ ದೆ ನೋಡಿ ಮತ್ತಿನಲಿ ವರು ಷದ ದುಡಿತವು ಮುಗಿಯಿತು ಇಂದು ಹೊಸ ವೇಷವ ಧರಿಸುವ ಇಂಗಿತವು ಬಸವ ನ ಪೂಜೆ ಮುಗಿಯಿತು ನೋಡು ಓಡಿವೆ ಉರಿಯುವ ಕಿಚ್ಚಲಿ ನೋಡು ಮೈ ಯಿಗೆ ಬಿಸಿ ತಾಗಿತೊ ಎಂದೋ ಹಬ್ಬದ ಸುಗ್ಗಿ ಉಂಡೆವೊ ಎಂದೋ ರೋಗವ ಹೊಡೆದೋಡಿಸು ವುದು ದೃಷ್ಟಿ ಯನಿದು ನೀವಾಳಿಪುದು ಎಳ್ಳು ಬೆಲ್ಲ ನಮಗೂ ಉಂಟು ಎಳ್ಳು ಬೆಲ್ಲ ನಿಮಗೂ ಉಂಟು ಸುಗ್ಗಿ ಯ ಹಬ್ಬವ ಕೊಂಡಾಡಿ ವರು ಷದ ಪೂರಾ ಹಾಯಾಗಿರಿ

ರವಿವಾರದ ಗುಂಗಿನಲಿ

ಎದ್ದಿದ್ದು ತಡವಾಯ್ತು ಹೋ! ರವಿವಾರ ಇವತ್ತು ಇನ್ನೊಂದು ಸ್ವಲ್ಪ ಹೊತ್ತು ನಿದ್ದೆ ಮಾಡಿದರಾಯ್ತು ಮೊದಲೆಲ್ಲ ಬರ್ತಿತ್ತು ಟೀವಿಲಿ ಟಾಮ್ ಅಂಡ್ ಜರ್ರಿ ಆಟ ನೋಡ್ತಾನೆ ಮಲಗಿರ್ತಿದ್ದೆ ಜಗ್ಗಾಡ್ದೆ, ಇರ್ತಿರ್ಲಿಲ್ಲ ಕೆಲ್ಸ ಚಾರ್ಲಿ ಚಾಪ್ಲಿನ್ ಜೊತೆ ಹಳೆ ಕನ್ನಡ ಚಿತ್ರಗೀತೆಗಳು ಅದಾದ್ಮೇಲೆ ಮಹಾಭಾರತ ಕೊನೆ ಕೊನೆಗೆ ಶಕ್ತಿಮಾನ್ ಮುಗ್ದೇ ಹೋಗ್ತಿತ್ತು ಮಧ್ಯಾಹ್ನ ನಂತ್ರ ಒಂದು ಬಹುಭಾಷಾ ಚಲನಚಿತ್ರ ಸಂಜೆ ಆದ್ರೆ ಒಂದು ಕನ್ನಡ ಸಿನಿಮಾ ರಾತ್ರಿ ಆಯ್ತು ಅಂದ್ರೆ ಭಯ ಶುರು ಹೋಮ್ ವರ್ಕ್ ಮಾಡಿಲ್ಲಾ ಗುರು.........

ಮುಂಜಾವಿನಲಿ

ಇಮೇಜ್
ತಿಳಿ ನೀರ ದರ್ಪಣದ ರಂಗಸ್ಥಳ ಅದೋ ಅಲ್ಲಿ ರವಿ ನಿಧಾನವಾಗಿ ತೇಲುತ್ತಾ, ಸೋಮಾರಿಯಂತೆ ಇನ್ನೂ ಮಲಗಿ ನಿದ್ರಿಸುತ್ತಿರುವ ನನ್ನ ನಿನ್ನಂತಹ ಸೋಮಾರಿಗಳನ್ನು ತನ್ನ ತೀಷ್ಣ ಕಿರಣಗಳಿಂದ ಚುಚ್ಚಿ ಎದ್ದೇಳೆನಲು ತೂರಿ ಬರುತ್ತಿದ್ದಾನೆ ತನ್ನ ಕಳ್ಳ ಹೆಜ್ಜೆಯ ನಿಡುತ್ತಾ... ಚಿತ್ರ: ಗುರು ಪ್ರಸಾದ್, ಶೃಂಗೇರಿ

ತಲೆ ಬಿಸಿ

ತಲೆ ಬಿಸಿಯೇ? ಐಸ್ ಇಟ್ಕೊಳಿ ಪ್ಲೀಸ್ ನೆಗಡಿ, ಆಗಲ್ಲ ಅಂದ್ರಾ? ಸರಿ ತಲೆ ತೆಗೆದು ಪಕ್ಕಕ್ಕಿಡಿ ತಲೆ ಬಿಸಿ! ಅನಾಸಿನ್ ತಗೋಳಿ ಅಲರ್ಜಿ ಅಂದ್ರಾ? ತಲೆ ಇದೆಯೇ ನೋಡ್ಕೊಳಿ

ಬೇಡಿಕೆ

ನನಗೂ ಬೇಕು ರಜೆ ವಾರಕ್ಕೆ ಎರಡು ದಿನ! ಹೌದು ಮಿಕ್ಕೆಲ್ಲರಂತೆ ನನಗೂ ಬೇಕು ರಜೆ ಪ್ರತಿದಿನವೂ ಯಂತ್ರದಂತೆ ದುಡಿದು ಹೊಸತು ಯೋಚನೆಗಳೇ ಬಾರದಾಗಿವೆ ಬಂದರೂ, ಕಾರ್ಯಗಳ ಸಾಧಿಸದಂತಾಗಿವೆ ಈಗ ನನಗೆ ಬೇಕು ರಜೆ.. ನಾಲ್ಕು ಗೋಡೆಗಳ ಕೆಡವಿ ದಿನವೂ ರಜೆಯೇ ಬೇಕು.... ಎಂಬ ಬೇಡಿಕೆ ಎನದಲ್ಲ ಸಾಕು, ವಾರಕ್ಕೆ ಎರಡೇ ದಿನ! ಇದು ನನ್ನ ಸಣ್ಣ ಬೇಡಿಕೆ ಇದಕ್ಕೆ ಸ್ಟ್ರೈಕ್ ಮಾಡಬೇಕೇ? ಮಾತುಗಳು ಸಾಲದೇ? ಲೇಖನಿಯೂ ಸಧ್ಯ ಸುಸ್ತಾಗಿದೆ ಈಗ ನನಗೂ ಬೇಕು ರಜೆ ;)

ಟೈಪೋ (Typo)

ಏಕಾಗ್ರತೆಯ ಕೊರತೆ, ತಂತ್ರಜ್ಞಾನದೆಡೆ ಸ್ವಲ್ಪ ಹೆಚ್ಚೇ ಒಲವು, ಸ್ವಲ್ಪ ಓವರ್ ಕಾನ್ಫಿಡೆನ್ಸು ನಡುವೆ ಜಾರಿತ್ತು ಟೈಪೋ... ಇಂಗ್ಲೀಷಿನಲ್ಲಿ ಕಂಗ್ಲೀಷು ಜೊತೆಗೆ ಮುಂದೆ ಬರುವುದನು ಕಷ್ಟ ಪಡದೇ ಟೈಪಿಸುವ, ಪ್ರಿಡಿಕ್ಷನ್ನು ಮತ್ತೊಂದು... ಅಚ್ಚು ಒತ್ತಿದ್ದೊಂದು, ಕೊನೆಗೆ ದಕ್ಕಿದ್ದಿನ್ನೊಂದು ಮೀರಿತ್ತು ಕಾಲ, ಅದನು ಸರಿಪಡಿಸುವುದರ ಮೊದಲೇ.. "ಟೈಪೋ...." ಇದು ಮುಜುಗರದ ಸರಕು ಅಲ್ಲೆ ಎಲ್ಲೋ ಅಡಗಿತ್ತು ಸ್ಟಾಕು ತಪ್ಪು ತಪ್ಪೇ... ತಿದ್ದಲಿಕೆ ಸಾಧ್ಯವಿಲ್ಲ.. ಇದು ನಾನು ಮಾಡಿದ್ದಲ್ಲ ಟೆಕ್ನಾಲಜಿಯ ಮಿಸ್ಟೇಕು.... ವಹಿಸುವೆ ಜಾಗ್ರತೆಯ ಮರೆಯದೆ ಇನ್ಮುಂದೆ... "ಕ್ಷಮಿಸಿ ಬಿಡಿ ಒಮ್ಮೆ!"

ಸಮಯ

ಸಮಯವು ಜಾರುತಿಹುದಲ್ಲ ಕೈಯಲ್ಲಿಟ್ಟ ಬೆಣ್ಣೆ ನೀರಾಗಿ ಸೋರುವ ತೆರದಿ ನೆನ್ನೆ ತಾನೇ ಶುರುವಾದ ಹೊಸ ವರ್ಷ ಅದರಲ್ಲಿ ಮುಗಿದ ದಿನಗಳು ಏಳು... ವಾರ ಮುಗಿಯುವ ವೇಳೆ, ಮುಗಿಯುತ್ತಿರುವ ಮಾಸದ ನೆರಳು... ಕೆಲಸವಿಲ್ಲದೆ ಕಳೆದ ರಜೆಯ ನಡುವೆ ಯೋಚಿಸಿರಲೇ ಇಲ್ಲ ನಾನು.. ಕೆಲಸ ಮಾಡಬೇಕೀಗ ಮತ್ತೆ ಸಮಯದ ಪರಿವೆಯಿಲ್ಲದೆ, ಅಲ್ವೇನು?? ಅಯ್ಯೋ, ಸಮಯ ಸರಿದೇ ಹೋಗುತ್ತಿದೆ ಸೋರಿ ಹೋಗುತ್ತಿದೆ... ಜಾರಿ ಹೋಗುತ್ತಿದೆ.... ಎಂದು ಮತ್ತೆ ಅವಸರಿಸುತ್ತಿದೆ ಈ "ನನ್ ಮನ"