ಪೋಸ್ಟ್‌ಗಳು

ಫೆಬ್ರವರಿ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿಗುರು

ಇಮೇಜ್
ಎಳೆ ಎಳೆ ಚಿಗುರೆ ಅರಳಲೆ ಚಿಗುರೆ ಅರಳುತ ನೀನು ನಗೆಲೇ ಚಲುವೆ... ಚಿತ್ರ : ಅರವಿಂದ

ಚೌಕಾಬಾರ

ಇಮೇಜ್
Chowkabara | ಚೌಕಾಬಾರ Originally uploaded by omshivaprakash ಚೌಕಾಬಾರ ಆಡಿ ನೋಡು ಚೌಕದ ಮನೆಗಳ ಎಣಿಸಿ ನೋಡು ಮನೆಯಿಂದ ಮನೆಗೆ ಜಿಗಿಯುತ ನೀನು ಒಂದು ಎರಡು ಎಣಿಸಿ ನೋಡು ರಾಜ್ಯಗಳನ್ನೇ ಕಬಳಿಸಿದರಂತೆ ಭಾರತ ಯುದ್ದಕೆ ಕಾರಣವಿದಂತೆ ಶಕುನಿ ಮಾಮನು ನಿಷ್ಣಾತನಂತೆ ನೀನೂ ದಾಳವ ಹಾಕಿ ನೋಡು ದಾಳಗಳೆಸುಯುತ ಚೌಕಕೆ ಹಾರುತ ಮೇಲಿದ್ದವನ ಮನೆಗೆ ಓಡು ಎನ್ನುತ ಹೊಸ ಮನೆಯೊಂದನು ಕಂಡರೆ ನೀನು ಉಳಿಯುವೆ ಅಲ್ಲೇ ತಿಳಿದು ನೋಡು ಚದುರಂಗಕಿಂತ ಕಡಿಮೆ ಏನಲ್ಲ ಮನೆಪಾಠದಲೇ ನೀ ಕಲಿ ಲೆಕ್ಕದ ಆಟ ಚೌಕಾಬಾರದ ಕಾಯಿಯ ನೆಡೆಸು ಮುಟ್ಟಿಸು ತಲೆಗೆ ಆಟದ ಬಿರುಸು ಕಾಯಿಯ ಹಣ್ಣನು  ಮಾಡುವವರೆಗೆ ನೆಡೆವುದು ಆಟ ಗೆಳೆಯರ ಜೊತೆಗೆ ಹಣ ಹೂಡಲು ಬೇಡ ಕೇಳೋ ಅಣ್ಣಾ ಗೆಳೆಯರು ಆದಾರು ಶತೃಗಳಣ್ಣ

ರಾಮದೇವರ ಬೆಟ್ಟದ ಮಡಿಲಲ್ಲಿ

ಇಮೇಜ್
ಚಿತ್ರ: ಪವಿತ್ರ. ಹೆಚ್ ರಾಮದೇವರ ಬೆಟ್ಟದ ಮಡಿಲಲ್ಲಿ ಕುಳಿತ ಮೂರ್ವರ ಮನವು ರಾಮನ ನೆನೆಯುತ್ತಿತ್ತೋ? ರಾಮದೇವರ ಬೆಟ್ಟದ ಮಡಿಲಲ್ಲಿ ಕುಳಿತ ಮೂರ್ವರ ಹೃದಯ ಏತಕ್ಕೆ ಹಪಹಪಿಸುತ್ತಿತ್ತೋ? ರಾಮದೇವರ ಬೆಟ್ಟದ ಮಡಿಲಲ್ಲಿ ಕುಳಿತ ಮೂರ್ವರ ದನಿಯಲ್ಲಿ ರಾಮಾಯಣ ಮಾರ್ಧನಿಸುತ್ತಿತ್ತೋ? ರಾಮದೇವರ ಬೆಟ್ಟದ ಮಡಿಲಲ್ಲಿ ಕುಳಿತ ಮೂರ್ವರ ಜಪದ ಕೊನೆಗೆ ಆದದ್ದೆಂತೋ? ರಾಮದೇವರ ಬೆಟ್ಟದ ಮಡಿಲಲ್ಲಿ ಕುಳಿತ ಮೂರ್ವರ ಮುಂದೆ ಇದ್ದಂತಹ ಪ್ರಕೃತಿ ಇದ್ದದ್ದೆಂತೋ? ರಾಮದೇವರ ಬೆಟ್ಟದ ಮಡಿಲಲ್ಲಿ ಕುಳಿತ ಮೂರ್ವರ ಸೆರೆಯ ಹಿಡಿದರವರು ಕ್ಲಿಕ್ಕಿಸಿದೆಂತೋ?

ಊಟದ ಗಳಿಗೆ

ಮಟ ಮಟ ಮಧ್ಯಾನ್ಹ ಊಟದ ಗಳಿಗೆ ಹೊರಟೆನು ಹೊರಗೆ ಬರಿ ಹೊಟ್ಟೆಯ ಕರೆಗೆ ಮನೆಯೂಟವು ಸಿಗದು ನೆನೆದರು  ನೀನು ಚೆಂದದ ಹೋಟೆಲ್ ಸಿಗುವುದೊ ನೋಡು ನಾಲ್ಕಾಸ್ ಸುರಿದು ಊಟವ ಮಾಡು ಸಾಗದು ಬದುಕು ಬರಿ ಹೊಟ್ಟೆಯ ಜೊತೆಗೆ ಮ್ುಷ್ಟಾನ್ಹವು ಸಿಕ್ಕರೆ ನಿನದೇ ಪುಣ್ಯ ಹೊಟ್ಟೆಯು ಕೆಡದಿರೆ ನೀನೇ ಧನ್ಯ

ರತ್ನನ್ ಪರ್ಪಂಚದಾಗೊಂದು ಸುತ್ತು

ರತ್ನನ್ ಪದಗಳ ಕೇಳಿ ನನ್ಗೆ ಮತ್ನಾಗ್ ತೂರ್ದಂಗಾಯ್ತು.. ಕೂತಲ್ಲಿಂದ್ಲೇ ಜೋರಾಗ್ ನಗ್ತಾ ನನ್ ಮನ್ದ ಕದ್ವ ತಟ್ದಾಂಗಾಯ್ತು...

ಮೋಡದ ಜೊತೆಗೆ

ಇಮೇಜ್
Alone , originally uploaded by Anil Ramesh . ಅಲ್ಲೇ ನನ್ನ  ಹಳ್ಳಿಯ ಪಕ್ಕದ ಏರಿಯ ಮೇಲೆ ಮರವೊಂದು ಮೋಡದ ಜೊತೆಗೆ ಮಾತಾಡಿತ್ತು ಮಳೆ ತರ್ಲಿಕ್ಕೆ ಬಂದೇನೋ ಮಾರಾಯ? ಅತ್ವಾ ಹಾಗೆ ಸುತ್ತ್ತಾಕ್ ಹೋಗ್ಲಿಕ್ಕೊ? ಗಾಳಿ ಬರಾಂಗಿಲ್ಲಲ್ಲೋ ನನ್ ದಿನಾ ಕರ್ದು ಬರ್ಲಿಕ್ಕೆ ಹೇಳಿದ ಮೋಡಣ್ಣ, ಅವನ ಕಣ್ಣಲ್ಲೂ ನೀರು ಹನಿಲಿಕ್ಕಿಲ್ಲ ಆದ್ರೂ ಬಂದೀನಿ ನೊಡು, ಬಿಟ್ಟಿರಾಂಗಿಲ್ಲ ಭೂಮಿನ ಹನಿ ಗೂಡಿಸ್ಕೊಂಡ್ ಬಂದೀನಿ, ಸುರಿಸೇ ಹೋಗ್ತೀನಿ ಸುಡು ಬಿಸಿಲ ನಡುವೆ ಮೋಡ ಮುಸುಕಿ ನೀಲಿ ಬಾನು ಕಪ್ಪಾಗಿ, ಕಣ್ ಹೊಡೆದು ಗುಡುಗಿ, ಗುಡುಗುವವರ ಹುಟ್ಟಡಗಿಸುವಂತೆ ಟಣ್ ಟಣ್ ಹನಿ ಗುಟುಕಿ ಭೂಮಿ ತಂಪಾದಂತೆ - ಅದೆಲ್ಲಿತ್ತೋ ಕಾಣೆ ನಾಲಿಗೆಲಿ ನಾಲ್ಕು ಪದ ಈ ಚಿತ್ರ ಕಂಡಾಗ ನನ್ ಕೈ ನಿಂದ ಜಾರಿ ಬಿತ್ತು :)

ಅಮ್ಮನ ಕೈ ರುಚಿ

ಹೊಟ್ಟೆಗೆ ಬಿತ್ತು ರೊಟ್ಟಿಯ ಚೂರು ಚುರು ಚುರು ಉದರಕೆ ತಂಪನೆ ನೀರು ಮಜ್ಜಿಗೆ ಜೊತೆಯಲಿ ಉಪ್ಪಿನಕಾಯಿ ಹಪ್ಪಳ, ತುಪ್ಪ, ಪಲ್ಯದ ಜೊತೆಗೆ ಗಸಗಸೆ ಪಾಯಸ ಗಟಗಟ ಕುಡಿಯೆ ಕಂಡಿತು ನಾಲಗೆ ಅಮ್ಮನ ಕೈ-ರುಚಿಯನ್ನು

ವಿಲ್ ಯೂ ಬಿ ಮೈ ವ್ಯಾಲೆಂಟೈನ್

ಹೊಳೆವ ಚಂದ್ರನ ದಿನವು ಚುಂಬಿಸಿ ಮಿನುಗು ನಕ್ಷತ್ರಗಳ ಜೊತೆ ನಲಿದು ಸುಡುವ ಬೇಸಿಗೆಯಲ್ಲಿ ತಂಪ ಕಂಡು ಅದೃಶ್ಯ ಶಕ್ತಿಯ ಇರುವನ್ನನುಭವಿಸಿರುವೆ ಸೃಷ್ಟಿಯ, ಮುಗಿಲೆತ್ತರದ ಗಿರಿಶಿಖರಗಳ ಕಂಡಿರುವೆ ಪ್ರೇಮಾಮೃತವನ್ನು ಪವಿತ್ರ ಗಂಗೆಯಲ್ಲಿ ಸವಿದಿರುವೆ ಉತ್ಕಟ ಬಯಕೆಯ ಉಕ್ಕಿಸುವ ತುಟಿಯ ಕಂಡಿರುವೆ ಪತಂಗವಾದ ಅಭಾಸವಾಗಿದೆ, ನೂರಾರುಸಲ ಎನಗೆ ಪವಾಡಗಳನ್ನೂ , ನೋವು ಮಾಸುವುದನ್ನೂ ಕಂಡಿರುವೆ ನಾನು ಆದರೆ ನನ್ನ ವಿಸ್ಮಿತನನ್ನಾಗಿಸಲು ನೀ ಮಾಡುವ ಎಷ್ಟೋ ಕೆಲಸಗಳು ನಾ ಬೇರೆಲ್ಲೂ ಕಂಡಿಲ್ಲ... ಜಿಗುಪ್ಸೆಯಾದಾಗ ಎಚ್ಚರಿಸಿದೆ ನೀನು ಸ್ಪರ್ಶದಿಂದಂಮೃತದ ದಾರೆ ಎರೆದೆ ನಾನರಿಯದ ಕೆಲಸಗಳ ಸಾಧಿಸಿಹೆ ನೀನು ಸಂಯಮ ಕಳೆದ ಪಶುವಾಗಿಹೆ ನಾನು ಏಕೆಂದರೆ, ನೀನೆ ನನ್ನ ಜೀವನ ಸೆಲೆಯು... ಕಂಡರಿಯದ ಕನಸ ಕಂಡೆ ರವಿಯು ಶರಧಿಯ ಮೋಹಿಪುದ ಕಂಡೆ ಶಶಿಗೆ ದಿನ ಚುಂಬನದ ಮಳೆಗರೆಯುತ್ತ ನಾ ಕನಸಿನಪ್ಸರೆಯರ ಜೊತೆಗೂಡಿ ಕಾಲಕಳೆದೆ. ವಿಲ್ ಯೂ ಬಿ ಮೈ ವ್ಯಾಲೆಂಟೈನ್

ಮಹಾ ಶಿವರಾತ್ರಿ

ಇಮೇಜ್
Ohm Namah Shivaaya , originally uploaded by omshivaprakash . ಪಂಚಾಕ್ಷರಿ ನುಡಿಯುತ ಜಗವನು ಮರೆತು ಶಿವನನು ನೆನೆಯೋ ಶಿವರಾತ್ರಿಯು ಇಂದು ಬಿಲ್ಪತ್ರೆಯ ನಿಟ್ಟು ಪೂಜೆಯ ಮಾಡು ಶಿವನೊಲಿವನು ನಿನಗೆ ಶಿವರಾತ್ರಿಯು ಇಂದು ಸಿದ್ದಾರೂಡನು ಈ ಶಿವನಯ್ಯ ನಿದ್ದೆಯ ಮಾಡದೆ ನೀನು ಇರಯ್ಯ ಜಾಗರಣೆ ಜೊತೆ ಜಪವನು ಮಾಡು ಶಿವನೊಲಿವನು ಶಿವರಾತ್ರಿಯು ಇಂದು

ಮಳೆಗಾಲದ ಸಂಜೆ

ಇಮೇಜ್
On a rainy day , originally uploaded by omshivaprakash . ಮಳೆಗಾಲದ ಆ ಒಂದು ಸಂಜೆ ನೀರು ಸೋರುತ್ತಿತ್ತು ಮಾಡಿಂದ ನೀರು ಸೋರುತ್ತಿತ್ತು ನೆನಪ ಮಾಡುತ್ತಿತ್ತು ಆ ದಿನಗಳ ಸೋರುತ್ತಿದ್ದ ಮನೆಯಂಗಳದಿ ನಿಂತು ಮೀಯುತ್ತಿದ್ದೆ ನಾ ಇಂದು ಸುರಿವ ನೀರು ನನ್ನ ತೋಯುತ್ತಿಲ್ಲಾ...ಬದಲಿಗೆ ಅದ ಕಂಡು ಕಿರಿಯುತ್ತಿರುವೆ ನಾ ಹಲ್ಲ ನೀರನ್ನೇ ಸೆರೆ ಹಿಡಿದು ಝಣ ಝಣ ಕಾಂಚಾಣ ದೋಚಿ ಮತ್ತದೇ ನೀರ ಚಿತ್ರವ ಹಿಡಿದಿರುವೆ ಮುಂದಿನ ದಿನಗಳು ಹೇಗೋ, ಜೀವಜಲವೇ ಇಲ್ಲದ ದಿನಗಳ ಕನಸೂ ಇನ್ನೂ ಎಚ್ಚರಿಸದಾಗಿದೆ ನನ್ನ ಶುಭ್ರ ನೀರಿನ ಸೆಲೆಯ ಹುಡುಕಲು ನೆಡೆಯ ಬೇಕಿದೆ ಇಂದು ಮೈಲು ಮತ್ತಾರು... ಮತ್ತೆ ಮಳೆ ಸುರಿಯುವುದೇ? ಕಾಳು ನೆಟ್ಟು, ಬೆಳೆ ಬೆಳೆಯುವೆನೇ? ನೀರು ದಾಹವಾದಾಗ ಸೋರುವುದೇ? ಉಳಿದ ನೀರ ಸೆಲೆ ಅದೇಕೋ ಗಂಗೆಯ ಸಂಗ ಸೇರಿ ನಮ್ಮ ಹಾಸ್ಯ ಮಾಡುತ್ತಿರುವಂತಿದೆ ಉಳಿಗಾಲವುಂಟೇ ನಮಗೆ? ಸಿಕ್ಕ ಸಿಕ್ಕ ನೀರ ಸೆಲೆಗಳನ್ನೆಲ್ಲಾ ಮುಕ್ಕಿರುವಾಗ ನೀರು ಸೋರುವುದುಂಟೆ ಮತ್ತೆ....

ನೀರ್ ನಡಿಗೆ

ಇಮೇಜ್
CSC_4040 , originally uploaded by Palachandra . ನೀರಿನ ಆಳವರಿವ ತವಕವೋ ನೀರ ಮೇಲ್ ನೆಡೆವ ತುಡಿತವೋ ನೀರಿನೊಳಾಡುವ ಮೀನ ಬಯಕೆಯೋ ಪಾಲನಿಗೆ ಅದ ನೋಡುವ ಮನುಜನಿಡಿವಾಸೆ ಚಿತ್ರ: ಪಾಲಚಂದ್ರ

ಸೂರ್ಯಾಸ್ತಮಾನದತ್ತ...

ಇಮೇಜ್
ಹೊಸ ಕ್ಯಾಮೆರಾದಲ್ಲಿ ಸೂರ್ಯನ ಕಡೆಗದನು ಮುಖ ಮಾಡಿ ನೋಡಿದ ಪವಿತ್ರಾಗೆ - ಮೊದಲ ಚಿತ್ರದ ಮೇಲೆ ಹೀಗೊಂದು ಕಾಮೆಂಟು ಸೂರ್ಯಾಸ್ತಮಾನದತ್ತ ಒಂದು ನೋಟ ರಂಗಿನ ರಂಗಸ್ಥಳದಲಿ ಕಾಣುತ್ತಿದೆಯೇ ಮಾಟ.... ಇಣುಕಿ ನೋಡಿತ್ತು ನನ್ನ ಹೊಸ ಕ್ಯಾಮೆರಾ, ಸೆರೆ ಹಿಡಿದಿತ್ತು ಜಗತ್ತಿನ ನೀರವ ಸಂಜೆಯ, ನಿದ್ದೆಗೆಟ್ಟು ದಿನವೆಲ್ಲಾ ದುಡಿದ ಜನರ ಮನೆಗಳ, ಹಕ್ಕಿಗಳೂ ಏಕೋ ಬೇಗನೆ ಮನೆ ಸೇರಿಯಾಗಿತ್ತು ಚಂದ್ರನ ಬರುವಿಗೂ ಕಾಯಲಿಕ್ಕಿಲ್ಲ ನೇಸರ ದಿನವಿಡಿ ಬಿರು ಬಿಸಿಲಲಿ ಕಾದ ಭೂಮಿಗೆ ಈಗ ಕೆಂಪಾದ ಸೂರಿನಡಿ ತಂಪಿನ ಹವಾ.... ಏನೆಲ್ಲಾ ಸೆರೆ ಹಿಡಿದಿದೆಯಲ್ಲಾ! ಹಾ ಹಾ!... ಮತ್ತೂ ಇನ್ನಷ್ಟು ದೃಶ್ಯಗಳ ಸೆರೆಹಿಡಿಯುತ್ತಿರಲಿ ಈ ಮಾಟಗಾರ.... ಮತ್ತೊಮ್ಮೆ ಹೊಸ ಕ್ಯಾಮೆರಾಗೂ ನಿಮಗೂ ಅಭಿನಂದನೆಗಳು ;)

ಸಲೂನಿನ ಒಳಗೊಂದು ತಾಸು

ಕರಡಿಯ ಕೂದಲಿಗಿಂತಲು ದಟ್ಟ ಇತ್ತದು ತಲೆಯ ಮೇಗಣ ಸುತ್ತ ಕಡಿದದನೆಸೆಯಲು ನನಗಾದ್ ಆಸೆ ಕರೆದೊರಟಿತ್ತೆನ್ನ ಸಲೂನಿನ ಕಡೆಗೆ ನಾಲ್ಕು ಗೋಡೆ ನಡುವಿನಲೊಬ್ಬ ನಿಂತಿದ್ದ, ಜೊತೆಗೆ ನಿಲುಗನ್ನಡಿ ಸುತ್ತ ಕಟ ಕಟ ಕತ್ತರಿ ಜಳಪಿಸಿ ಆತ ಬನ್ರಿ ಕೂಡಿ....ನನಗೆ ಕೇಳಿಸಿತ್ತ ಇವನಾರೋ ತಿಳೀದು ನನಗೆ ಹಳಬರ ಬಾಯಿಗೆ ಕೆಳವರು ಇವರು ಇವರಲೂ ಇಂದು ಕೆಲ ಮೇಲ್ಮನೆಯವರು ಜಾವೇದ್ ಹಬೀಬ್ ಗೊತ್ತಿಲ್ಲವೆ ನಿಮಗೆ ಕತ್ತರಿ ನೆಡೆಸಿತ್ ಕರಾಮತ್ ಅಲ್ಲಿ ಮಾತಿನ ಸುತ್ತ ಹುಡುಗ ಮಾಡಿದ ಚೌರ ಓದಿಲ್ಲಾ ಸಾರ್ ಜ್ಯಾಸ್ತಿ ನಾನು.. ನೀವು ದಿನಾ ಪೂರಾ ಮಾಡೋದ್ ಏನು? ಮುಗಿವಷ್ಟರಲ್ಲಿ ಕತ್ತರಿ ಆಟ ಹೇಳಿ ನೀವು ನಿಮಗೆ ಬೇಕಾದ್ದೇನು... ಹೇಳದೆ ಮರೆತಿರೋ ಅಷ್ಟೇ ಮತ್ತೆ.. ವೆಂಕಟರಮಣನ ಬುರುಡೆಯೆ ಗಟ್ಟಿ ಇಷ್ಟೇ ಅಲ್ಲ ಸಲೂನಿನ ಕಥೆ ಕೇಳಲೆ ಇಲ್ಲ ಎಣ್ಣೆ ಮಸಾಜಿನ ಮಿತಿ ತಟ ತಟ ಎಣ್ಣೆಯ ತಟ್ಟುವನೀತ ತಲೆ ಬೇನೆಯ ಹೊರದೂಡುವನು ಬರಿ ಚೌರವೆ ಅಲ್ಲ, ಇದು ಹೈಟೆಕ್ ಸಲೂನ್ ಮೈ ಕೈ ಜೊತೆಗೆ ನಿಮ್ಮ ಮುಖಕೂ ಮಸಾಜ್ ಪಿಂಪಲ್? ಇರುವುದು ಸಿಂಪಲ್ ಸೊಲ್ಯೂಶನ್ ನಿಮ್ಮ ಜೇಬಿಗೆ ಮಾತ್ರ ಸೂಪರ್ ಸೆನ್ಸೇಷನ್ ಸಲೂನ್ ಇರೋದ್ ಬರಿ ಸ್ಟೈಲಿಗೆ ಅಲ್ಲ... ಸ್ಟೈಲ್, ನಿಮ್ಮ ವೇಷಕ್ಕಿದು ಭೂಷಣವು ಕುರೂಪಿಯೂ ಕೊನೆಗಾಗುವ ಖಾನ್! ಹೀರೋ ಆದರೂ ಅಡ್ಡಿಯೆ ಇಲ್ಲ ತಾಸು ಮುಗಿಯಿತು ದೌಡಾಯಿಸು ಮನೆಗೆ ಬಿಸಿ ಬಿಸಿ ನೀರು ಕಾದಿಹುದು ಜಳಕದ ನಂತರ ಹೊರಡು ಯಾತ್ರೆ ಕಣ್ ಕಣ್ ಬಿಟ್

ಜ್ವರದ ನೆರಳು

ಎಗ್ಗಿಲ್ಲದೆ ಸಾಗಿದ್ದ ದಿನಗಳ ನಡುವೆ ತಗ್ಗಿ ಬಗ್ಗಿ ನೆಡೆ ಎಂದಿತು ಜ್ವರ ಮುಖದ ಮುಂದಿಡಿದು ನಿನ್ನ ಕರ ಶೀತ, ನೆಗಡಿಯ ತಡೆ ಒಡನೆ ಹೊರಗಿನ ಬಿಸಿಲಿಗೆ ಜಗ್ಗಿರಲಿಲ್ಲ ಬಿಸಿ ಬಿಸಿ ಕಾಫಿ ಸುರೀಲಿಕ್ಕೂ ಸಾಕು ಮೈ ಬಿಸಿ ಆದೊಡನೆ ನೆಲ ಅದುರಿತ್ತು ಈ ಜ್ವರದ ನೆರಳು ಸ್ವಲ್ಪ ಬೇಕಿತ್ತು...