ಪೋಸ್ಟ್‌ಗಳು

ಮಾರ್ಚ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿರಂಕುಶ ಪರಿಭ್ರಮಣ

ಇಮೇಜ್
(ಚಿತ್ರ: ಕೊರಮಂಗಲದಲ್ಲಿ ತೆಗೆದದ್ದು, ೨೯ ನೇ ಮಾರ್ಚ್) ಕತ್ತಲೆಯಾದರೂ ಮುಗಿಯದ ಜೀವನದ ಪಯಣದಲಿ ಮಂದ ಬೆಳಕಿನ ರಂಗಿನಾಟ ಬೆಂಬಿಡದ ಗೋಜಲಿನ ನಡುವೆ ವಿಶ್ವದ ಹೊರೆಯನ್ನೇ ಹೊತ್ತಂತೆ ಬೇಕು ಬೇಡದ ಭೇದದ ನಡುವೆ ನಮ್ಮ ನಿರಂಕುಶ ಪರಿಭ್ರಮಣ.

ಹಕ್ಕಿ ನಾನಾಗಬೇಕು

ಇಮೇಜ್
ಸಿಕ್ಕರೆರೆಡು ರೆಕ್ಕೆ ನನಗೆ ಹಿಗ್ಗು ಬರುವುದು ತೋರಲದನು ಜಗಕೆ ನಾನು ನಭಕೆ ಜಿಗಿವೆನು ಮನುಜ ಮನಸಿಗೆಣೆಯೆ ಹೇಳು ಕಷ್ಟವಾವುದು? ಮನಸು ಮಾಡೆ ದಿಕ್ಕು ದೊರಕಿ ಹಾರಿ ನಲಿವೆನು

ಚುನಾವಣೆ

ಚುನಾಯಿತರಾಗಲು ಅನುಯಾಯಿಗಳ ಕಾಲನಿಡುಯುವ ಕಾಲ ಅಜ್ಜ ಅಜ್ಜಿಯರಿರಲಿ, ದೊಡ್ಡವರೂ, ಯುವಕ, ಯುವತಿಯರೂ ಅದೆಲ್ಲ ಬಿಡಿ, ಬಿಟ್ಟಿಲ್ಲ ನಮ್ಮ ಚಿಕ್ಕ ಪುಟ್ಟ ಕಂದಮ್ಮಗಳನ್ನೂ ಓಟು ಕೊಡಿ.. ಎತ್ತರಿಸಿದ ದನಿಯಲ್ಲಿ ಕೂಗುತ್ತಿರುವ ಆ ಮೈಕಿನ ಧ್ವನಿಗೆ ಎದೆ ಝಲ್ ಎಂದಿತ್ತು ಕೂಗುತ್ತಿದ್ದವರಾರು? ಏನಾಯಿತು ಎನ್ನುವುದರಲ್ಲೇ ತಿಳಿದದ್ದು, ಅದು ಮಗುವೊಂದರ ಮಾತೆಂದು ಕೊಡುತ್ತಿದ್ದಾರೆ ಸೀರೆ, ಕಾಸು, ಬಾಟಲಿಗಳ ಇದೆಲ್ಲಾ ಖಾಸ್ ಬಾತ್.. ಹೊರಗೆ ತಿಳಿದರದು ಮಿಡಿಯಾದ ಕರಾಮತ್ತು... ಆದರೂ ನೆಡೆಯುತ್ತಿದೆ ಚೌಕಾಸಿ ಗತ್ತಿನಿಂದಲೇ ನಡುರಸ್ತೆಯಲ್ಲಿ ಚುನಾಯಿಸ ಬೇಕಿದೆ ಓದಿ ತಿಳಿದ, ತಲೆಯಿರುವ ನಾಯಕನ... ಪಕ್ಷದ್ದಿರಲಿ ಸಿಕ್ಕರೆ ಸಾಕಾಗಿದೆ ಅವನ ಅಟೆಸ್ಟ್ ಮಾಡಿದ ಗುರುತು ಪರಿಚಯ, ನಂತರ ನಾಡ ಕಟ್ಟಲಿಕ್ಕಿರುವ ಯೋಜನೆಗಳ ಸವಿವರ ನಾವು ಕಟ್ಟುತ್ತೇವೆ, ನಾವು ಕೆಡವುತ್ತೇವೆ ನಾವು ಏನು ಮಾಡುತ್ತೇವೆಯೋ ಕಣ್ಮುಚ್ಚಿ ನೋಡಿ ನೀವೇ ನಾವು.. ಸಧ್ಯ ನಮಗೆ ಓಟು ಕೊಡಿ ಹಿಂದಿನದೆಲ್ಲವ ಮರೆತು ಮುಂದಿನದನ್ನು ಚಿಂತಿಸದೆ - ಕಿವಿ ಮಾತು ಪ್ರತಿವರ್ಷದ ಚುನಾವಣಾ ಪ್ರಣಾಳಿಕೆಗಳನ್ನು ನೋಡಿ ನೋಡಿ, ಓದಿ ನಾನೇ ಒಂದು ಬರೆಯಬಲ್ಲೆ ಎಂದೆನಿಸಿದಾಗ ನನ್ನ ತಲೆಯಲ್ಲೊಳೆಯುತ್ತಿದೆ ಒಂದು 'ಟ್ಯೂಬ್ ಲೈಟ್' - ನಾನೇ ಏಕೆ ಸ್ವರ್ಧಿಸ ಬಾರದು ಠೇವಣಿಯ ಭಯವಿಲ್ಲ... ನಾವು ಬದಲಾಗಬೇಕು, ಬದಲಾವಣೆಯು ಸಾಧ್ಯ ಎಂದು ಬಾರಾಕ್ ಹೇಳಿದನೆಂದು ಇಲ್ಲೂ ಬದಲಾವಣೆಯ ತರ

ಹಕ್ಕಿ

ಇಮೇಜ್
ನೀಲಾಕಾಶದ ಜೀವ ಜಾಲ ಹಾರುತ್ತಲೇ ಸಾರಿದೆ ನೀ ಜಗಕೆ ಬಾನ ಅಂತರಾಳ ಚಿತ್ರ:- ಗುರುಪ್ರಸಾದ್, ಶೃಂಗೇರಿ

ಮಗು ನಾನಾಗಬಾರದೇಕೆ?

ಇಮೇಜ್
ಚಿತ್ರ :- ಪವಿತ್ರ ಹೆಚ್ ಮಿನುಗು ನಕ್ಷತ್ರಗಳಿವೆಯಲ್ಲಿ ಶಶಿಯು ಅವುಗಳ ಮಧ್ಯೆ ಅಲ್ಲೆಲ್ಲೋ ಉದುರಿದಂತೆ ಧೂಮಕೇತು ಮನದಲ್ಲಿ ಮಿನುಗಿತು ಸಣ್ಣ ಆಸೆ! ಬೆಳಗ್ಗೆ ಸೂರ್ಯ ಕಣ್ಬಿಡುವಾಗ ಬೆಳ್ಳಿ ಕಿರಣಗಳ ಪ್ರಭಾವಳಿಯನ್ನು ಕೆರೆಯ ಅಂಗಳದಲಿ ಚೆಲ್ಲಿದಾಗಲೇ ಆ ಒಂದು ಆಸೆ ಮಿಂಚಿತ್ತು! ಮಧ್ಯಾನ್ಹದ ಬಿಡುವಿನ ಸಮಯದಲ್ಲಿ ದಿನಾ ನನ್ನಿದುರಾಗುತ್ತಿದ್ದ ಆ ತೂಕಡಿಕೆಯ ಮಡಿಲಲ್ಲಿ ಆ ಆಸೆ ಮೆತ್ತನೆ ಸುಳಿದಿತ್ತು! ಮುಂಜಾನೆ ನಗುತ್ತಾ, ಮಧ್ಯಾನ್ಹ ತೂಕಡಿಸಿ, ಸಂಜೆ ಚಂದಾಮಾಮನ ನೋಡಿ ನಗುವ ಆ ಮಗು ನಾನಾಗ ಬಾರದೇಕೆ?

ವೃಷಸೇನ

ಇಮೇಜ್
ಮಹಾಭಾರತದ ಕುರುಕ್ಷೇತ್ರ ರಣರಂಗದಲ್ಲಿ ಒಂದು ಪ್ರಸಂಗ ಕಿನ್ನರರ ಯಕ್ಷಗಾನ ಪ್ರದರ್ಶನ ವೀರ ವೃಷಸೇನನ ರುದ್ರ ನರ್ತನ! ಸಾರುತ್ತಲೇ ಜನರ ಮನಗೆದ್ದು ತಾಯಿಯ ಅಪ್ಪಣೆ ಪಡೆದು ಯುದ್ದಕ್ಕೆ ಸಿದ್ದನಾಗಿ ನಿಂತಿದ್ದಾನೆ ಕರ್ಣನ ಪುತ್ರ ವೃಷ ಸೇನ.. ತಂದೆಗಾಗಿ ರಣರಂಗಕ್ಕೆ ನುಗ್ಗಿದ ಅಭಿಮನ್ಯುವ ಮೀರಿಸಲು ತನ್ನ ತಂದೆಯ ಇಷ್ಟಾರ್ಥ ಸಿದ್ದಿಸಲು ಬೆಂಕಿಯುಂಡೆಯಂತೆ ನುಗ್ಗಿ ಬರುತ್ತಾನೆ ಕೃಷ್ಣ ಕಳುಹಿದ ಭೀಮನನ್ನು ತನ್ನೆಲ್ಲಾ ಯುಕ್ತಿ ಉಪಯೋಗಿಸಿ ಸಾಮಾನ್ಯನಲ್ಲದ ಬಾಲಕನ ಕೊಲ್ಲದೆ ತನ್ನಲ್ಲಿ ಹಿಡಿದುತರಲು ಇವನೇನು ಸಾಮಾನ್ಯನೇ? ಉರುಳಿಸಿದ ಭೀಮನನ್ನೇ... ಕೊನೆಗೆ ಅರ್ಜುನನೊಂದಿಗೆ ಕೃಷ್ಣನೇ ಬರಬೇಕಾಯ್ತು ತನ್ನ ಮಾತುಗಳಲ್ಲೇ ಸೋಲಿಸಿದ ಪೋರ ತನ್ನದೊಪ್ಪಂದಿರನ್ನು.. ಕೊನೆಗೂ ಸೋಲಲೇ ಬೇಕಾಯ್ತು ಯುದ್ದದಲ್ಲಿ ಘಟಾನುಘಟಿಗಳ ಮಧ್ಯೆ ಸೋತರೂ ಇವನೇ ಗೆದ್ದ ಎಲ್ಲರ ಮನವನ್ನು.. ಪಾತ್ರದಲ್ಲಿ ತನ್ನ ಮೊನಚಾದ ನಟನೆಯಲ್ಲಿ ರಂಗಶಂಕರದ ಆ ಮಂದಿರದಲ್ಲಿ - ರಂಗಶಂಕರದಲ್ಲಿ ನೋಡಿದ ವೃಷಸೇನ ಚಿಣ್ಣರ ಯಕ್ಷಗಾನ ಪ್ರದರ್ಶನ ಇನ್ನೂ ನನ್ನ ಕಣ್ಮುಂದೆ ಆಗಾಗ ಬಂದು ಹೋಗುತ್ತಿರುತ್ತದೆ. ಮಹಾಭಾರತ ನಮಗೆ ಅದರ ಪ್ರತಿಯೊಂದು ಪ್ರಸಂಗದಲ್ಲೂ  ಏನೆಲ್ಲಾ ಕಲಿಸುತ್ತದೆ ಎಂಬ ಯೋಚನೆಯ ನಡುವೆ, ಯುದ್ದ ಸನ್ನದ್ದತೆ, ಅದಕ್ಕೆ ಬೇಕಿರುವ ಶಿಸ್ತು, ಧೃಡ ನಿರ್ಧಾರ ಹೀಗೆ  ಹತ್ತು ಹಲವು ವಿಷಯಗಳ ಕಡೆ ನನ್ನ ಮನಸೆಳೆದ ಉಡುಪಿಯ ಚಿಣ್ಣರಿಗೆ ಮತ್ತೊಮ್ಮೆ ಪ್ರೀತಿಯ

ಗುಡುಗು

ನಡುರಾತ್ರಿಯಲ್ಲಿ , ಕಿಟಕಿಯ ಪಕ್ಕದಲ್ಲಿ ಸುಂಯ್ ಎಂದು ಗಾಳಿ ಬೀಸಿದಾಗ ಅದೆಲ್ಲೋ ಸಿಡಿಲು ಬಡಿದಾಗ ಹಾಗೇ ನನ್ನ ಮನದಲ್ಲಿನ ಪುಟ್ಟದೊಂದು ಕೋಣೆಯಾಗೆ ಮಗುವಿನಂತೆ ಸಣ್ಣ ಹೆದರಿಕೆ... ಹೆದರಿದ್ದು ಸಮಯಕ್ಕೋ ಇಲ್ಲ ಅದೆಲ್ಲೋ ಗುಡುಗಿದ -- ಗುಡುಗಿಗೋ -- ಗುಡುಗಿದ್ದು... ಬಾಸ್ ಆಗಿದ್ದರೆ... - ಫೋನ್ ಸಿಚ್ ಆಫ್ ಮಾಡಿ - ಆಫ್ ಲೈನ್ ಹೋಗಿ ಗುಡುಗಿದ್ದು ... ಥಂಡರ್ ಬರ್ಡ್ ಬೈಕಾಗಿದ್ದರೆ - ಒಂದು ಲಾಂಗ್ ಡ್ರೈವ್ ಗುಡುಗಿದ್ದು ನಿಜವಾಗ್ಲೂ ಗುಡುಗೇ ಆಗಿದ್ದರೆ - ಹೊದಕೆಯ ಮರೆಯಲ್ಲಿ ಸೇರಿಕೊಂಡು - ಒಂದಿಷ್ಟು ಗೊರಕೆ ಹೊಡೆಯಿರಿ

ಹೀಗೂ ಉಂಟು

ತಲೆಗೆರಡು ಪ್ರಶ್ನೆ  ಕಣ್‌ಗೆರೆಡು ಸ್ಕ್ರೀನು  ಕುಟ್ಲಿಕ್ಕೆ ಕೀಲಿಮಣೆ  ಕೈಗೊಂದು ಇಲಿಮರಿ  ಇರಲಿಕ್ಕೆ ಸಾಕು  ದಿನ ಮುಗಿದು  ಬೆಳಗಾಗುವುದು  - ಐ.ಟಿ ಮಂದಿಗೆ

ಅಭ್ಯಂಜನ ತೈಲದಬ್ಯಂಜನ

ಅಭ್ಯಂಜನ ತೈಲದಬ್ಯಂಜನ ಹೊಸ ವರುಷದ ಹೊಸ ದಿನದಲಿ ಜಿಡ್ಡಿನಿಂದಲೇ ಜಿಡ್ದ ತೆಗೆಯುವ ಜಿದ್ದಿನಾಟದ ಅಭ್ಯಂಜನ ಚಿಕ್ಕಂದಿನ ಅಭ್ಯಂಜನದ ಆ ಕೆಲ ಕ್ಷಣಗಳು -- ಎದ್ದೊಡನೆ ಅಮ್ಮ ಎಣ್ಣೆ ಹಚ್ಚಿ, ಬೇವಿನ ಎಲೆ ಬೆರೆಸಿ ಬಿಸಿನೀರ ಕೊಡದಿಂದ ತಲೆ ಮೇಲೆ ನೀರು ಸುರಿಯುವಾಗಿನ ಸಂದರ್ಭ ನೆನೆದು ಓಡಿದ್ದು ತಪ್ಪಿಸ್ಕೊಳ್ಳಲಾರದೆ, ಎಣ್ಣೆ ಹಚ್ಚಿಸಿ ಕೊಂಡ ನಂತರ ಫೈಲ್ವಾನನಂತೆ ಸೀಗೇಕಾಯಿ ಬೇಡವೆಂದು ಜಿದ್ದಿನಿಂದಗುದ್ದಾಡಿದ್ದು ಹೊರಬಂದಾಕ್ಷಣ ಸಿಗುತ್ತಿದ್ದ ಬಣ್ಣದ ಹೊಸ ಬಟ್ಟೆಯ ಆಸೆಗೆ ಸೋತು ಉರಿಯುತ್ತಿದ್ದ ಕಣ್ ಮಿಟುಕಿಸಿ ಕಾದಿದ್ದು.. ನಿವಾರಣೆಯಾಗಲಿ ವಾತಾದಿದೋಷಗಳು ಆಯುರಾರೋಗ್ಯ ವೃದ್ದಿಸಲಿ ಪುಷ್ಕಳ ಜಳಕದಲ್ಲಿ ಪ್ರಸನ್ನತೆಯ ಸುಖದೊರೆತು ಸೌಂದರ್ಯ ವೃದ್ದಿಸಲಿ ತೈಲದ ಅಭ್ಯಂಜನದಿಂದ ಹೀಗೆ ಯಾವ ಜಿದ್ದಿಗೂ ಜಗ್ಗದೆ, ಜಿದ್ದಿನಲ್ಲೇ ಮತ್ತೊಂದಿಷ್ಟು ಸಾಲುಗಳಲ್ಲಿ ಏಕೆ ಅಭ್ಯಂಜನ ಅನ್ನೊದನ್ನು ಸಾರಿ ಸಾರಿ ದೊಡ್ಡವರಿಂದ ಹೇಳಿಸುತ್ತಿತ್ತು..

ಯುಗಾದಿ

ಇಮೇಜ್
ವರುಷ ವರುಷಕೂ ಬರುವ ಯುಗಾದಿ ನನಗೊಂದಿಷ್ಟು ಹೊಸ ಕನಸುಗಳ ನೆಯ್ದು ಕೊಡು ಯುಗಾದಿ ಹೊಸ ದಿರಿಸ ತೊಟ್ಟ ಆ ಮಗುವಿನ ನಗು ಎಲ್ಲರನ್ನೂ ನಗಿಸುವಂತೆ ನಗುವಿನ ಬುತ್ತಿ ಕಟ್ಟಿ ಕೊಡು ನನಗೆ ಪ್ರತಿವರ್ಷ ನೀನು ಬರುವಾಗ ಹೊತ್ತು ತರುವ ಆ ಸಂತೋಷ ವರ್ಷವಿಡೀ ಇರಲಿ ಹಾಗೆ ಸಂತೆಯಲಿ ತುಂಬಿ ತುಳುಕುವ ಆ ಹೂವ ಪರಿಮಳ ವರುಷ ಪೂರಾ ಕಂಪ ತರಲಿ ನಮ್ಮೆಲ್ಲರ ಬಾಳಲ್ಲಿ ಹೊಂಗಿರಣದ ಆ ನೇಸರನಿಗೂ ಒಬ್ಬಟು ಬಡಿಸಿಕೊಡುವ ಹೊಸ ಬೆಳಕ ತೋರು ನೀನಿಲ್ಲಿ ಬೇವು ಬೆಲ್ಲದ ಜೊತೆಗೆ ಬಾಳ ಸವಿ ಮಿಶ್ರಣವ ತೂಗಿ ತೋರೆಲೆ ನೀನು ಯುಗಾದಿ.. - ಎಲ್ಲರಿಗೂ ವಿಕೃತಿ ನಾಮ ಸಂವತ್ಸರದ ಶುಭಾಶಯಗಳು

ಪೇಪರ್ ದೋಣಿ

ಇಮೇಜ್
 ಚಿತ್ರಗಳು: ಪವಿತ್ರ ಅಲೆಗಳ ಮೇಲೆ ತೇಲುತ ಬಂತು ನೆನಪಿನ ಸೆರಗನು ಸರಿಸುತ ಬಂತು ಮಗುವಿನ ಮನಸನು ತಣಿಸಲು ಬಂತು ಊರಿಗೆ ನನ್ನನು ಒಯ್ಯುವೆನೆಂತು ಕಾಗದದಲ್ಲಿ ಮಾಡಿದ ದೋಣಿ ಪುಸ್ತಕದಾಳೆಯ ನೆನಪಿನ ದೋಣಿ ರಜೆಯಲಿ ಮಜವ ತಂದ ದೋಣಿ ಹರಿವ ನೀರಲಿ ತೇಲುವ ದೋಣಿ ಮಕ್ಕಳ ಸಂಗ ಕೂಡಿ ನೋಡು ಪೇಪರ್ ದೋಣಿಯ ಮಾಡಿ ನೋಡು ರಸ್ತೆಯ ಮಧ್ಯೆ ಹರಿಯುವ ನೀರಲಿ ಮಕ್ಕಳೊಡನೆ ಅದನಾಡಿಸಿ ನೋಡು ಮಳೆಗಾಲದಲ್ಲಿ ರಸ್ತೆಯ ಮೇಲೆ ಬೇಸಿಗೆ ಯಲ್ಲಿ ಮನೆ ಸಂಪಿನ ಒಳಗೆ ಚಳಿಗಾಲದಲ್ಲಿ ಬಿಸಿ ನೀರಿನ ಜೊತೆಗೆ ಕೈಯ್ಯಲ್ಲಿರಲಿ ಪೇಪರ್ ದೋಣಿ!

ಬೆಳಗು ಜಗವ

ಹಳೆಯ ಪುಟವ ತಿರುವಿ ನೀನು ಕಲಿ ಇಂದು ಹೊಸದು ವಿಷಯ ತಿಳಿವ ತಿಳಿದು ಜಗದಿ ನೀನು ಬೆಳಗು ಕಲಿಯದವರ ಜಗವ

ನಕ್ಷತ್ರಗಳು ಕಾಣೆಯಾದಾಗ!

ಇರುಳ ಬಾನ ನೋಡಿದಾಗ ಎತ್ತ ನೋಡು ಕಪ್ಪು ಛಾಯೆ ಕಾಣದಾಯ್ತು ಚುಕ್ಕಿ ಗುಂಪು ಯಾರು ಕದ್ದರೋ? ಕತ್ತಲಲ್ಲೂ ಹತ್ತು ದೀಪ ಬೆಳಗಿ ಬೆಳಗಿ ಕತ್ತಲನ್ನು ಹೊಸಕಿ ಹಾಕಿ ಕುಳಿತರವರು ಅವರೆ ಕದ್ದರೋ? ಕತ್ತಲೆಯ ಕತ್ತಲಲ್ಲಿ ಎಣಿಸುತ್ತಿದ್ದೆ ಚುಕ್ಕಿಗಳನು ಲೆಕ್ಕ ತಪ್ಪಿ ಹೋಯಿತಿಂದು ಎಂತ ಮಾಡಲೋ? ನನ್ನದೊಂದು ಚಿಕ್ಕ ದಾವೆ ಹೂಡಲೊರಟು ಬೆಚ್ಚಿ ನಿಂತೆ ಹುಡುಕಿಕೊಡಿ ಎಂದರೆನ್ನ ಹೊಡೆದು ಬಿಡುವರೋ?

ತಂಗಾಳಿ

ಸಂಜೆಯ ಆ ತಂಗಾಳಿ ನನ್ನ ಕೆನ್ನೆ ಸವರಿತ್ತು ಒಳಗಿನ ಏರ್ ಕಂಡಿಷನ್  ನನ್ನ ಹೊಸಕಿ ಹಾಕಿದಾಗ ಕಾರಿನ ಕಿಟಕಿಯ ಹೊರಗೆ  ಮುಖವಿಟ್ಟಾಗ ರಾಚಿದ ತಂಗಾಳಿಯ ತಂಪಿಗೆ ನನ್ನ ಕೆನ್ನೆಯೂ ಕೆಂಪೇರಿತ್ತು ವೇಗದ ಮಿತಿಯ ಒಳಗೇ ಮಿತಿ ಮೀರಿದ ಕನಸುಗಳ ಇತಿಮಿತಿಯಿಲ್ಲದ ಆಟದಲ್ಲಿ ತಂಗಾಳಿ ನನ್ನ ಎಚ್ಚರಿಸಿತ್ತು -- ನನ್ನ ಎಚ್ಚರಿಸಿತ್ತು 

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿ ಬದುಕುವ ಹಂಬಲದಲ್ಲಿರುವವನಿಗೆ ಗೆಳತಿಯೋ, ಅಮ್ಮನೋ, ಹೆಂಡತಿಯೋ, ಅಕ್ಕನೋ, ತಂಗಿಯೋ ಆಗಿ ವಿಭಿನ್ನ ರೂಪಗಳಲ್ಲಿ ಜೊತೆಯಾಗಿ ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ ಲೋಕದವರೆಗಿನ ಸುಖ ದು:ಖದ ದಾರಿಯೊಳಗಣ ಸರಾಗವಾಗಿ ಸಾಥ್ ಕೊಡುವ ನಿನಗೆ ಪದಗಳಲ್ಲಿ ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ ಅಭಿನಂದನೆಗಳನ್ನು ಸಲ್ಲಿಸಲು ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು... ... ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

ನನ್ನಲ್ಲಿನ ಆ ನಾನು

ನನ್ನಲ್ಲಿನ ಆ ನಾನು ಸಂಕೋಚದ ಮುದ್ದೆಯಾಗಿ ಮನಸಿನ ಒಳಗಿನದ್ದನ್ನು ಹೊರಗಿನ ಪ್ರಪಂಚಕ್ಕೆ ಸರಾಗವಾಗಿ ಪಿಸುಗುಡುವ ಬದಲು ಅಂಜಿಕೆಯಿಂದ ನನ್ನದೇ ಲೆಕ್ಕಾಚಾರದ ಪ್ರಪಂಚವ ಕಟ್ಟಿಕೊಂಡು ಶೂನ್ಯದಲ್ಲೇ ವಿಹರಿಸುವ ತನ್ನನ್ನು ತಾನೇ ತಾನಾಗಿ ಕಲ್ಪಿಸಿಕೊಳ್ವ ಕಲ್ಪನಾಲೋಕದ ಸಂಚಾರಿಯಾಗಿ ಲೋಕದ ನಡುವೆ ಹೆಸರಿದ್ದೂ ನಾನೊಬ್ಬ ಅನಾಮಧೇಯ... ಅನುಭವವಿದ್ದೂ ಅನುಭವಿಸಿ ಅನುಭವವ ಹೇಳಿಕೊLLಅಲು ಯೋಚಿಸುವ ಆ ನಾನೇ ನಾನು   - ಇದು ಇಂದಿನವರೆಗೆ ನಾಳೆ ಆ ನಾನು ನಾನಾಗ ಬೇಕಿರುವುದಾದರೂ ಏನು? ಬರೆಯಲೆತ್ನಿಸುವೆ ಕಾದು ನೋಡಿ..

ಹೀಗೊಂದು ಪ್ರಶ್ನೆ

ಎದ್ದೊಡನೆ ಹೊರಗಿನ ಮಬ್ಬಿನಲಿ ಎರಡೆಜ್ಜೆ ಇಟ್ಟು ರಸ್ತೆಯ ಸುತ್ತಮುತ್ತ ಬಸ್ ಸ್ಟಾಂಡಿನ ಆ ಸೂರಿನ ಕೆಳಗೆ ಬಸ್ ಹೊಳಹೊಕ್ಕ ನಂತರ ಹೊರಗಿನ  ಚಕ್ರದ ಮೇಲಿನ ಮನೆಗಳಲ್ಲಿ ಮತ್ತಾವುದೋ ಮನೆಯಂಗಳದಲ್ಲಿ ಗೆಳೆಯನ ಮದುವೆಯ ಸಂಭ್ರಮದ ಮಧ್ಯೆ ಕಚೇರಿಯ ಒಳಹೊರಗೆ ಕೆಲಸ ಬಿಟ್ಟು ನೆಡೆದ ಮಾಲ್ ಗಳ ಬಳಿ ಎಲ್ಲವನ್ನೂ ಸ್ವಲ್ಪ ದೂರವಿಟ್ಟು ನೆಡೆದ ದೇವಸ್ಥಾನದ ಆಜೂ ಬಾಜು ಆಗೊಮ್ಮೆ ಈಗೊಮ್ಮೆ ಕಾಲಿಟ್ಟ ಪಾರ್ಕಿನಲ್ಲಿ ಹೀಗೆ ಇನ್ನೂ ಹತ್ತು ಹಲವು ಕಡೆ ನಾನು ನೋಡಿಯೂ ನೋಡದ ನೋಡಬೇಕಾದ ಮುಖ ಇಂದು ಎಲ್ಲಿ ಮರೆಯಾಗಿದೆ ಎಂದು ಮನದಲ್ಲೊಂದು ಪ್ರಶ್ನೆ... ಉತ್ತರ ಎಲ್ಲಿ ಅಡಗಿ ಕುಳಿತಿದೆಯೋ....

ಚಿಟ್ಗುಬ್ಬಿ

ಇಮೇಜ್
ಚಿತ್ರ:- ಅರವಿಂದ ಚಿಟ್ಗುಬ್ಬಿ ನಾಮಕರಣ :- ರವಿ ಚಿಟ್ ಚಿಟ್ ಅಂತ ಚಿಟ್ಗುಬ್ಬಿ ಕೂತಿತಲ್ಲಿ ಸುಸ್ತಾಗಿ... ಕಾಳಿಗೆ ಕಾದು ಕುಂತಿತ್ತು ಕ್ಯಾಮೆರ ಸೆರೆಯಲಿ ಬಿದ್ದಿತ್ತು..

ಹೀಗೇ ಬರೆಯುತ್ತಿರಿ ನೀವು

ಹೀಗೇ ಬರೆಯುತ್ತಿರಿ ನೀವು ಕನ್ನಡದಲ್ಲಿ... ಮತ್ತಿಷ್ಟು ಕಥೆಯ ಹೆಣೆಯುತ್ತಿರಿ ಕನ್ನಡದಲ್ಲಿ... ನಿಜ ಜೀವನದ ಪುಟಗಳ ಸೇರಿಸುತ್ತಿರಿ ಕನ್ನಡದಲ್ಲಿ... ಯಾರೋ ಓದಲೇ ಬೇಕೆನ್ನದೆ ಬರೆಯುತ್ತಿರಿ ಕನ್ನಡದಲ್ಲಿ... ಯಾರೋ ನಕ್ಕಾರು ಎಂದು ನಿಲ್ಲಿಸದಿರಿ ಬರೆಯುವುದ ಕನ್ನಡದಲ್ಲಿ... ನಿಮ್ಮ ನೆನಪಿನ ಮೆರವಣಿಗೆ ಸಾಗಲಿ ಸರಾಗವಾಗಿ ಕನ್ನಡದಲ್ಲಿ... ಬರೆದು ಬಿಡಿ ಮನಸ್ಸಿನಲ್ಲಿರುವ ಎಲ್ಲ ಮೆಲುಕುಗಳ ಕನ್ನಡದಲ್ಲಿ.. ಹೀಗೇ ಬರೆಯುತ್ತಲೇ ಇರಿ ಅಚ್ಚ ಕನ್ನಡದಲ್ಲಿ -- ಕನ್ನಡದಲ್ಲಿ ತನ್ನ ದಿನಚರಿಯ ಬರೆಯಲೆತ್ನಿಸಿದ ಗೆಳತಿ ಪವಿತ್ರಾಗೆ..

ಮೊದಲ ಮೊದಲು

ಇದು ಮೊದಲಲ್ಲ, ಮೊದಲ ಮೊದಲು ಪದಗಳ ಆಟವಲ್ಲ ನೆನಪ ಹೊನಲು ಇನ್ನೂ ಮಬ್ಬಿದೆ, ಕಾದಿರುವೆ ಸೂರ್ಯನ ಹುಟ್ಟನ್ನು.. ಕಾಣುವುದು ಬಹಳಿದೆ ಇದು ಬರೀ ಮೊದಲು