ನಕ್ಷತ್ರಗಳು ಕಾಣೆಯಾದಾಗ!

ಇರುಳ ಬಾನ ನೋಡಿದಾಗ
ಎತ್ತ ನೋಡು ಕಪ್ಪು ಛಾಯೆ
ಕಾಣದಾಯ್ತು ಚುಕ್ಕಿ ಗುಂಪು
ಯಾರು ಕದ್ದರೋ?

ಕತ್ತಲಲ್ಲೂ ಹತ್ತು ದೀಪ
ಬೆಳಗಿ ಬೆಳಗಿ ಕತ್ತಲನ್ನು
ಹೊಸಕಿ ಹಾಕಿ ಕುಳಿತರವರು
ಅವರೆ ಕದ್ದರೋ?

ಕತ್ತಲೆಯ ಕತ್ತಲಲ್ಲಿ
ಎಣಿಸುತ್ತಿದ್ದೆ ಚುಕ್ಕಿಗಳನು
ಲೆಕ್ಕ ತಪ್ಪಿ ಹೋಯಿತಿಂದು
ಎಂತ ಮಾಡಲೋ?


ನನ್ನದೊಂದು ಚಿಕ್ಕ ದಾವೆ
ಹೂಡಲೊರಟು ಬೆಚ್ಚಿ ನಿಂತೆ
ಹುಡುಕಿಕೊಡಿ ಎಂದರೆನ್ನ
ಹೊಡೆದು ಬಿಡುವರೋ?

ಕಾಮೆಂಟ್‌ಗಳು

 1. ನಿಮ್ಮ ಚುಕ್ಕಿ ಚಂದ್ರನ ಕದ್ದು ಹೋಗುವರೆಲ್ಲಿ
  ಬಂದೆ ಬರುವರು ನಿಮ್ಮ ಬಳಿ ಒಂದು ದಿನ
  ಒಲವ ಹೂವು ಅರಳಿನಿಂತು ಕಂಪ ಸೂಸಿ ನಗುವುದಾಗ
  ಬೆಳಗಲೀ ಆ ಬೆಳಕು ನಿಮ್ಮ ಮನೆ ಮನ.....:))

  ಕವನ ತುಂಬಾ ಚೆನ್ನಾಗಿದೆ ...:))

  ಪ್ರತ್ಯುತ್ತರಅಳಿಸಿ
 2. ನಮಸ್ತೆ,


  ಚಂದ್ರ ಕಳೆದು ಹೋಗಿಲ್ಲ.. ಚುಕ್ಕಿಗಳು... ನಗರದ ಬೆಳಕಿನ ಮಾಲಿನ್ಯದ ಮಧ್ಯೆ ನನ್ನ ಚುಕ್ಕಿಗಳು ಕಾಣದಾಗಿವೆಯಲ್ಲ ಎಂದು ಬರೆದದ್ದು..

  ನಿಮ್ಮ ಸಾಲುಗಳೂ ಸೊಗಸಾಗಿವೆ..

  ಮೆಚ್ಚಿದ್ದಕ್ಕೆ ಧನ್ಯವಾದಗಳು :)
  ಶಿವು

  ಪ್ರತ್ಯುತ್ತರಅಳಿಸಿ
 3. ಊರಿಗೆ ಹೋಗಿದ್ದಾಗ ಪಡಸಾಲೆಯಲ್ಲಿ ಎಲ್ಲರೂ ಚಾಪೆ ಹಾಸಿ ಕುಳಿತುಕೊಂಡೋ ಮಲಗೋ ಆಕಾಶ ನೋಡುವಾಗ ಎಷ್ಟೊಂದು ಚುಕ್ಕಿಗಳು ಕಾಣ್ತವೆ...
  ಕೆಲವು ದೊಡ್ಡವು
  ಕೆಲವು ಪುಟ್ಟವು
  ಸಣ್ಣ ಸಣ್ಣ ಗುಂಪು
  ಹಲವು ಒಂಟಿ ನಕ್ಷತ್ರ
  ಅದೇ ಇಲ್ಲಿ ತುಂಬಾ ಕಮ್ಮಿ :(
  ಚಂದ್ರ ಕಾಣ್ತಾನಲ್ಲ ಅದೇ ಪುಣ್ಯ....

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ