ಪೇಪರ್ ದೋಣಿ

 ಚಿತ್ರಗಳು: ಪವಿತ್ರ

ಅಲೆಗಳ ಮೇಲೆ ತೇಲುತ ಬಂತು
ನೆನಪಿನ ಸೆರಗನು ಸರಿಸುತ ಬಂತು
ಮಗುವಿನ ಮನಸನು ತಣಿಸಲು ಬಂತು
ಊರಿಗೆ ನನ್ನನು ಒಯ್ಯುವೆನೆಂತು

ಕಾಗದದಲ್ಲಿ ಮಾಡಿದ ದೋಣಿ
ಪುಸ್ತಕದಾಳೆಯ ನೆನಪಿನ ದೋಣಿ
ರಜೆಯಲಿ ಮಜವ ತಂದ ದೋಣಿ
ಹರಿವ ನೀರಲಿ ತೇಲುವ ದೋಣಿ

ಮಕ್ಕಳ ಸಂಗ ಕೂಡಿ ನೋಡು
ಪೇಪರ್ ದೋಣಿಯ ಮಾಡಿ ನೋಡು
ರಸ್ತೆಯ ಮಧ್ಯೆ ಹರಿಯುವ ನೀರಲಿ
ಮಕ್ಕಳೊಡನೆ ಅದನಾಡಿಸಿ ನೋಡು

ಮಳೆಗಾಲದಲ್ಲಿ ರಸ್ತೆಯ ಮೇಲೆ
ಬೇಸಿಗೆ ಯಲ್ಲಿ ಮನೆ ಸಂಪಿನ ಒಳಗೆ
ಚಳಿಗಾಲದಲ್ಲಿ ಬಿಸಿ ನೀರಿನ ಜೊತೆಗೆ
ಕೈಯ್ಯಲ್ಲಿರಲಿ ಪೇಪರ್ ದೋಣಿ!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ