ಅಲೆಗಳಲ್ಲಿ ತೇಲಿ ಹೋದಾಗ

ಕಳೆದ ದಿನಗಳ ಹಳೆಯ
ನೆನಪುಗಳ ನೆನೆನೆನೆದು
ನೀರಿನೆಲೆಯ ಸೆಳೆತಕೆ
ಕಳೆದು ಹೋಗುತಲಿಹಳು

ತನ್ನ ಇನಿಯನ ಮನೆಯ
ಆ ದಡವ  ಸೇರುವುದು
ಹೇಗೆಂದು ಚಿಂತಿಸುತ
ಕಾಲ ಕಳೆದಿಹಳು

ಈ ಸಂಜೆಗತ್ತಲಲಿ
ನೀರ ಜೊತೆ ನೀರೆಯ
ಹತ್ತಾರು ಮಾತುಕತೆ
ಮನೆಯ  ಮಾಡಿಹುದು

ತಂಗಾಳಿ ಜೊತೆ ಸೇರಿ
ಹಾರುವದೋ, ಇಲ್ಲ..
ಆ ಮೀನ ಜೊತೆಗೆ
ಈಜಲೆಣಿಸಲೊ ನಾನು?

ಪ್ರಶ್ನೆಗಳ ಉತ್ತರಿಸೆ
ಕನಸಲಿ ತಾ ಬಂದು
ತನ್ನ ಮನೆಗೆನ್ನ ಕರೆದೊಯ್ಯ
ಬಹುದೇ ಗೆಳೆಯ?

- ಕಾವೇರಿಯ ದಡದಲ್ಲಿ ಕುಳಿತರೆ  ಇನ್ನೂ ನೂರು ಆಲೋಚನೆಗಳು ನಿಮ್ಮಲ್ಲೂ ಮನೆಮಾಡಬಹುದಲ್ಲ...

ಚಿತ್ರ:- ಪೃಥ್ವಿ - ವಿಜಯ್ ಶಂಕರ್ ಅಲ್ಬಂ ನಿಂದ

ಕಾಮೆಂಟ್‌ಗಳು

 1. ನಿಮ್ಮ ಕವಿತೆ ಬಹಳ ಚೆನ್ನಾಗಿದೆ ಓಂಶಿವಪ್ರಕಾಶ ಅವರೇ.. ಈ ಚಿತ್ರ ಇಷ್ಟೊಂದು ಪ್ರಖ್ಯಾತಿ ಪಡೆಯುವುದೆಂದು ನಾನು ಎಣಿಸಿರಲಿಲ್ಲ :)
  ಈ ಚಿತ್ರ ತೆಗೆದ ನನ್ನ ತಮ್ಮ ಪೃಥ್ವಿಗೂ, ಅದಕ್ಕೆ ಜೀವ ಕೊಟ್ಟ ನಿಮಗೂ ಧನ್ಯವಾದಗಳು

  -ವಿಜಯ ಶಂಕರ

  ಪ್ರತ್ಯುತ್ತರಅಳಿಸಿ
 2. ವಿಜಯ್,

  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.. :) ಚಿತ್ರ ತುಂಬಾ ಹಿಡಿಸಿತು.. ಅದು ತನ್ನಲ್ಲಡಗಿಸಿ ಕೊಂಡಿರುವ ಎಲ್ಲವನ್ನೂ ನನ್ನ ಭಾವನೆಗಳ ಚಿತ್ರಣದಲ್ಲಿ ಚಿತ್ರಿಸಲಿಕ್ಕೆ ಸಾಧ್ಯವಾಗದಿದ್ದರೂ ಒಂದಷ್ಟು ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ.. ಈ ಚಿತ್ರಕ್ಕೆ ಬರೆದ ಮತ್ತಷ್ಟು ಸಾಲುಗಳನ್ನೂ ಮತ್ತೊಮ್ಮೆ ಹಾಕುತ್ತೇನೆ.

  ನಿಮ್ಮ
  ಶಿವು

  ಪ್ರತ್ಯುತ್ತರಅಳಿಸಿ
 3. ತುಂಬಾ ಸುಂದರ ಕವನ ಶಿವು ಅವರೇ ....ಚಿತ್ರ ಕೂಡಾ ತುಂಬಾ ಚೆನ್ನಾಗಿದೆ. ಆ ಚಿತ್ರಕ್ಕೆ ಒಪ್ಪುವಂಥ ನಿಮ್ಮ ಕಲ್ಪನೆ ತುಂಬಾ ಇಷ್ಟವಾಯ್ತು. ಅಭಿನಂದನೆಗಳು.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ