ಪೋಸ್ಟ್‌ಗಳು

ಮೇ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬಳ್ಳಿ ಮರವ ಹಬ್ಬಿ

ಇಮೇಜ್

ಕನಸುಗಳ ರಹದಾರಿ

ಇಮೇಜ್

ಮುದ್ದು ಕನಸು

ಇಮೇಜ್

ಜೇಡರ ಬಲೆ

ಇಮೇಜ್
ಎಲ್ಲ ದಿಕ್ಕುಗಳ ಸುತ್ತಿ ಹೆಣೆದು ಅಭೇದ್ಯ ಚಕ್ರವ್ಯೂಹದ ಬಗೆಯ ಸೂರು ಕಟ್ಟುತಿಹುದು ಜೇಡ ಬದುಕ ಎಲ್ಲ ಕಷ್ಟ ಕಾರ್ಪಣ್ಯಗಳ ಸುತ್ತ ಕಟ್ಟಿಹುದಿದನು ಸುಲಭದ ಮೋಕ್ಷ ಮಾರ್ಗವಲ್ಲವಿದು ಬೆಳಗಿನ ಮಂಜಿನ ಹನಿ ಸೆರೆಹಿಡಿದು ಮುತ್ತಿನ ಹಾರದಂತೆ ಕಂಗೊಳಿಸಿ ಆಕರ್ಷಿಸುವುದು ಮತ್ತೊಂದು ಗಳಿಗೆ, ಹುಷಾರು ಒಳ ಹೊಕ್ಕಿಯೆ ಇದಲಿ.. ಆಹಾರವಾಗುವೆ,  ಅಭಿಮನ್ಯುವೇ ನೀನು? ಚಿತ್ರ :- ಗುರುಪ್ರಸಾದ್ ಶೃಂಗೇರಿ

ಎಷ್ಟು ಅಂದ್ರೆ

ನಾ ನಿನ್ನ ಎಷ್ಟು ಪ್ರೀತಿಸೀನಿ ಅಂದ್ರೆ.... ಪಾವು, ಚಟಾಕು, ಸೇರು, ಕೆ.ಜಿ ಹೀಗೆ ಎಷ್ಟೇ ತೂಕ ಹಾಕಿದ್ರೂ ಮುಗ್ಯಾಂಗಿಲ್ಲ... ಮಿ.ಲಿ, ಸೆಂ.ಮೀ, ಮೀ. ಕಿ.ಮೀ.. ಅಂದ್ರೂ ದಾರಿ ಸವೆಯಾಂಗಿಲ್ಲ.. ಸಧ್ಯಕ್ಕೆ ನನಗೆ ಹಂಗೆಲ್ಲಾ ಅಳೆಯಾಕ್ ಬರಾಂಗಿಲ್ಲ.. ಏನಿದ್ರೂ ಕೆ.ಬಿ, ಎಂ.ಬಿ. ಜಿ.ಬಿ, ಟಿ.ಬಿ , ಪಿ.ಬಿ...  ಕೊನೆಗೆ Zಬಿ ಗಟ್ಲೆ ಅಳಿ ಬೇಕು.. ಇದು ಕಮ್ಮಿ ಆಯ್ತು ಅಂದ್ರೆ... ನಿನ್ನ ಈ ಸಿವ ಅಲ್ಲ.. ಆ ಸಿವಾನೇ ಮೆಚ್ಕೊ ಬೇಕು... 

ಸಂಜೆ

ಓಡಿ ಗೂಡ ಸೇರಲಿಕ್ಕಿತ್ತು ಬೆಳಗಿನಿಂದ ದಣಿದ ಮನಕ್ಕೆ ಕೊಂಚ ತಂಪು ಹವಾ ಬೇಕಿತ್ತು ಗುಬ್ಬಿ ಗೂಡು ಸೇರಿ ಕಥೆ ಕೇಳುತ್ತಾ ಹುಣ್ಣಿಮೆಯ ರಾತ್ರಿ ಕಣ್ಮುಚ್ಚಿ ತಂಗಾಳಿಯಲ್ಲಿ ಮೈಯ್ಯೋಡ್ಡುವ ಆಸೆಯಾಗಿತ್ತು...

ಶುಭೋದಯ

ಇಮೇಜ್

ಅಮ್ಮ

ಎದೆ ಹಾಲ ಕುಡಿಸೆನ್ನ  ಬೆಳಸಿದ ಹೆಡೆದವ್ವ ನಿನ್ನ ಋಣವ ತೀರಿಸಲಿ ಹೇಗೆ? ಮೊದಲ ಗುರುವಾಗಿ ವಿಧ್ಯೆ ಕಲಿಸಿದೆ ನೀ ನಿನ್ನ ಋಣವ ತೀರಿಸಲಿ ಹೇಗೆ? ತುತ್ತು ಅನ್ನವ ನೀಡಿ ಹೊತ್ತು ಹೊತ್ತಿಗೆ ಕಾಯ್ದ ನಿನ್ನ ಋಣವ ತೀರಿಸಲಿ ಹೇಗೆ? ನನ್ನ ಬೇಕು ಬೇಡಗಳ ದೇವರಿಗೂ ಮೊದಲರಿತು ವರವಾಗಿಸಿದ ನಿನ್ನ ಋಣವ ತೀರಿಸಲಿ ಹೇಗೆ? ಕಷ್ಟ ಸುಖಗಳ ನಾಲ್ಕು ಅನುಭವದ ಮಾತುಗಳ ತಿಳಿ ಹೇಳಿದ ನಿನ್ನ ಋಣವ ತೀರಿಸಲಿ ಹೇಗೆ? ಹೊತ್ತು ಹುಟ್ಟುವ ಮುನ್ನ ಹೊತ್ತು ಸರಿದ ಮೇಲೆ ನನ್ನ ಕಾಯುವ  ನಿನ್ನ ಋಣವ ತೀರಿಸಲಿ ಹೇಗೆ? ಕರುಳ ಬಳ್ಳಿಯ ಕರೆಗೆ  ಓಗೊಟ್ಟು ಬಳಿಬರುವ ಅಮ್ಮಾ  ನಿನ್ನ ಋಣವ ತೀರಿಸಲಿ ಹೇಗೆ?

ಅಪ್ಪುಗೆ

ಇಮೇಜ್
ಹುಟ್ಟುತ್ತಲೇ ಅಮ್ಮನ ಅಪ್ಪುಗೆಯಿಂದ ತನ್ನ ದೇಹದ ಬಿಸಿಚಳಿಗಳ ಬದಿಗಿಟ್ಟು ಜಗತ್ತಿನ ಎಲ್ಲ ತಾಪಮಾನಗಳಿಗೆ ಅಂಜದೆ ಅಂಬೆಗಾಲಲಿ ನಡೆವೆ ಮಗು ಒಡಹುಟ್ಟಿದವರು, ಗೆಳೆಯರೊಡನಾಡಿ ಅವರ ಪ್ರೀತಿಯ ಅಪ್ಪುಗೆಯಿಂದ  ಜೀವಿಸಿ ಜಗವ ಗೆಲ್ಲುವ ಛಲವ  ತಮ್ಮಲ್ಲಿ ತುಂಬಿಕೊಳ್ಳುವ  ಮಕ್ಕಳು ಬೆಳೆದಂತೆ ಮನಕದ್ದ ಇನಿಯ ಇನಿಯಳ ಜೀವಕ್ಕೆ ಜೀವವಾಗಿ ನಾನು ನಿನ್ನಲ್ಲಿದ್ದೇನೆ ಎಂದು ಹೇಳುತ್ತಾ ಅಪ್ಪುಗೆಯ ಸವಿ ಅನುಭವಿಸುವ ಪ್ರೇಮಿಗಳು ಯಾವುದೋ ಹಿಂದಿನ ಜನುಮದ  ಋಣಾನುಬಂಧಧದಿ ಜೊತೆಗೂಡಿ ಮರೆಯಲಾರದ ಜೀವದಪ್ಪುಗೆಯ ಮೊರೆಹೋಗುವ ಪ್ರಾಣಸ್ನೇಹಿತರು ಅಬ್ಬಬ್ಬಾ ... ಈ ಮಾಯದ ಅನುಭವವ ಸವಿದಾಗಲೇ ನಮ್ಮ ಮನದ ಅನೇಕ ತಂತುಗಳು ಚಲನಾಶೀಲ ಚೈತನ್ಯವನ್ನು ಪಡೆದು ಲೋಕದ ಕೊನೆಗಾಣುವವರೆಗೂ ನಮ್ಮ ಜೊತೆಗಿರುವ ಎಲ್ಲರ ಪ್ರೀತಿ ಪ್ರೇಮಗಳನ್ನು ಸಾಂಕೇತಿಕವಾಗಿ ಧೃಡಪಡಿಸುವುದಲ್ಲದೇ, ಕೊನೆಯ ಕ್ಷಣದಲ್ಲಿ ನಮ್ಮನ್ನು ಬಿಡಲಾರದೆ ಗೋಗರೆವ ಹೆತ್ತವರ, ಕಟ್ಟಿಕೊಂಡವರ ಮರೆಯಲಾರದ ನೋವ ಬವಣೆಗಳನ್ನೂ ನಮ್ಮ ಕಣ್ಮುಂದೆ ತರುತ್ತದೆಯಲ್ಲ... ಚಿತ್ರ :- ಪಾಲಚಂದ್ರ 

ಮುಸ್ಸಂಜೆ

ಇಮೇಜ್
ಸಂಜೆ ದೀಪ ಹೊತ್ತಿಸುವ ಹೊತ್ತು ಅಲ್ಲಲ್ಲಿ ಬೆಳಗಿದ ದೀಪದ ಜೊತೆಗೆ ಚಂದಿರನ ಮುಖ ಅರಳಿತ್ತು ತಂಗಾಳಿಯ ಆ ಸಣ್ಣ ತೂಗು ನನ್ನರಗಿಣಿಯ ಮುಂಗುರುಳ ಹಣೆಯ ಮೇಲೆ ಆಡಿಸಿತ್ತು ಸುತ್ತಲಿದ್ದ ಪ್ರಪಂಚದ ಅರಿವಿಲ್ಲದೆ ನೀ ಹೇಳುವ ಮಾತು ಕೇಳಲು ನನ್ನ ಕಿವಿ ಅರಳಿ ನಿಂತಿತ್ತು ನಿನ್ನ ತುಟಿಯಿಂದುರುಳಿದ ಮಾತಿನ ಮುತ್ತುಗಳ ಎಣಿಸುತ್ತಾ ನಾ ದಾರಿ ಸವೆಸಿಯಾಗಿತ್ತು ನೀ ಜೊತೆಗಿದ್ದರೆ ಚಿನ್ನಾ ಮುಸ್ಸಂಜೆ ಅದೆಷ್ಟು ಚೆನ್ನ ಮರೆತಾಗಿತ್ತು ನನ್ನನ್ನೇ ನಾ

ಧೂಪದಾರತಿ

ಇಮೇಜ್
ಚಿತ್ರ:- ಪವಿತ್ರ ಹೆಚ್