ಪೋಸ್ಟ್‌ಗಳು

ಮೇ, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎರಡು ಚಕ್ರಗಳ ಪ್ರೀತಿ

ಇಮೇಜ್
ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ೨೯ನೇ ಮೇ ೨೦೧೧ ರಂದು ಪ್ರಕಟವಾದ ಲೇಖನ. ಈ ಸೈಕಲ್ ನನ್ನ ಬದುಕಿನೊಂದಿಗೆ ಬೇರುಬಿಡಲು ಆರಂಭಿಸಿದ್ದು, ನನ್ನ ಪುಟ್ಟ ಗೆಳೆಯನೊಬ್ಬನ ಸಹಾಯದಿಂದ ಮನೆಯ ಹಿಂದಿನ ಸೈಕಲ್ ಶಾಪ್‌ನಲ್ಲಿ `ಬಾಡಿಗೆ ಸೈಕಲ್~ ಪಡೆದು ಕಲಿಯಲಿಕ್ಕೆ ಶುರುಮಾಡಿದಾಗ. ನನಗಿಂತ ಚಿಕ್ಕವನಿದ್ದ ಆತ ದಿನಾ ಸೈಕಲ್ ಹೊಡೆದು ಬಂದು ಅಂಗಡಿಯಲ್ಲಿ ಚಾಕೋಲೇಟ್ ತಿಂದು ಹೋಗುತ್ತಿದ್ದ. `ಅವನು ನನಗೆ ಸೈಕಲ್ ಕಲಿಸೋದಾ~ ಅನ್ನಿಸಿದರೂ ಪ್ರಶ್ನಿಸದೆ ಅವನೊಡನೆ ಸೈಕಲ್ ಕಲಿಯಲು ಶುರುಮಾಡಿದ್ದಾಯ್ತು. ಚೋಟುದ್ದ ಇದ್ದ ಅವನು ನನ್ನ ಹಿಡಿಯಲಿಕ್ಕೆ ಕಷ್ಟಪಟ್ಟರೂ ಪಟ್ಟು ಬಿಡದೆ ಸೈಕಲ್ ಹತ್ತಿಸಿದ. ಒಂದು ದಿನ ನನ್ನ ಸೈಕಲ್ ಹತ್ತಿಸಿ ಇಳಿಜಾರಿನ ಒಂದು ರಸ್ತೆಯಲ್ಲಿ ಕೈಬಿಟ್ಟ. `ಅವನು ಇದ್ದಾನಲ್ಲ~ ಅನ್ನುವ ಧೈರ್ಯದ ಮೇಲೆ ಸೈಕಲ್ ತುಳಿಯುತ್ತಿದ್ದೆ. ಕೊನೆಗೆ ವಾಪಸ್ ತಿರುಗಿಸಿಕೊಳ್ಳಲು ಬ್ರೇಕ್ ಹಾಕಿ ನಿಲ್ಲಿಸಿದಾಗಲೇ ಗೊತ್ತಾದದ್ದು- `ನಾನೇ ಸೈಕಲ್ ಓಡಿಸಬಲ್ಲೆ~ ಎಂದು. ಹೀಗೆ ಒಬ್ಬ ಚಿಕ್ಕ ಹುಡುಗ ನನಗೆ ಸೈಕಲ್ ಕಲಿಸಿದ ಗುರುವಾದ. `ಇನ್ನು ಮುಂದೆ ನೀನೇ ಓಡಿಸ್ಕೊ~  ಮಾಯವಾದ. `ಮನೆಗೆ ಬಂದು ನಾನೇ ಸೈಕಲ್ ಓಡಿಸೋಕೆ ಶುರು ಮಾಡಿದ್ದೀನಿ~ ಎಂದು ಸಾರಿ ಹೇಳಿದವನೇ, `ಈಗ ನಂದೇ ಒಂದು ಸೈಕಲ್ ಬೇಕು~ ಅಂತ ಒಂದೇ ಉಸಿರಿನಲ್ಲಿ ಹೇಳಿದ್ದಾಯಿತು. ವಾರದ ಕೊನೆಯಲ್ಲಿ ಸೈಕಲ್ ಬೇಟೆಗೆ ಹೋಗೋದು ಅಂತ ನಿಶ್ಚಯವಾಯ್ತು. ಅಪ್ಪನ ಸೈಕಲ್ ಸರ್ವೀಸ್ ಮಾಡಿಕೊಡುತ್ತಿದ್ದ ಸ

ಮನೆಯ ಕಟ್ಟುವ ಆಸೆಯಿಲ್ಲ

ಇಮೇಜ್
ಛಾಯಾಗ್ರಹಣ : ಪವಿತ್ರ ಹೆಚ್ ಮನೆಯಂತೆಯೇ ತೋರುತ್ತಿದೆಯಲ್ಲ ಬಾಗಿಲು ಮಾತ್ರ ಕಾಣುತ್ತಿಲ್ಲ... ಪರವಾಗಿಲ್ಲ, ಗಾಳಿ ಬೆಳಕಿನ ಚಿಂತಿಲ್ಲ ಮಳೆಗಾಲದ ನೀರಿನ ಮೇಳ ನೆನೆದು ಆನಂದಿಸಿದರಾಯ್ತಲ್ಲ... ಬಿಸಿಲು ಸಿಡಿಸುಯ್ದು ಬೇಸತ್ತರೆ ಪುರ್ರನೆ ಆಗಸಕ್ಕೆ ಹಾರುವೆ ನಾ ಇಲ್ಲೇ ನಿಂತು ಅಳುವ ಮನಸ್ಸಿಲ್ಲ... ಕಟ್ಟಿಕೊಳಲೇಕೆ ನಾ ಇನ್ನೊಂದು ಮನೆಯನ್ನ

ಲೋರಿಕಿಟ್‌ನ ಪ್ರೀತಿಯ ನಡುವೆ

ಇಮೇಜ್