ಪೋಸ್ಟ್‌ಗಳು

ಆಗಸ್ಟ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಜಿಟಲ್ ಬೀಗಕ್ಕೆ ನಕಲಿ ಕೀಲಿಕೈ

ಆಗಸ್ಟ್ ೨೭ ರಂದು ಪ್ರಜಾವಾಣಿಯ ಅಂತರಾಳದಲ್ಲಿ ಪ್ರಕಟಗೊಂಡ ಲೇಖನ.  ಭಾರತ ಸರ್ಕಾರ ತನ್ನ ಎಲ್ಲಾ ಪೌರರ ವಿವರಗಳುಳ್ಳ ಅತಿ ದೊಡ್ಡ ದತ್ತಸಂಚಯ (ಡೇಟಾ ಬೇಸ್) ಒಂದನ್ನು ರೂಪಿಸಲು ಹೊರಟಿದೆ. ಇದನ್ನು ಆನ್‌ಲೈನ್‌ನಲ್ಲಿ ಬಳಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡುತ್ತೇವೆಂದು ಅದು ಹೇಳಿಕೊಂಡಿದೆ. ಅದು 1024 ಬಿಟ್‌ಗಳ ಎನ್ಕ್ರಿಪ್ಷನ್ ಮೂಲಕ ಇದನ್ನು ಸಾಧಿಸುತ್ತೇನೆಂದು ಹೇಳಿಕೊಂಡಿದೆ. `ಎನ್ಕ್ರಿಪ್ಷನ್` ಎಂಬುದು ಒಂದು ರೀತಿಯಲ್ಲಿ ಡಿಜಿಟಲ್ ಬೀಗ ಹಾಕುವ ಕ್ರಿಯೆ. ಈ ಬೀಗವನ್ನು ತೆರೆಯಲು ಅದಕ್ಕೆ ಅಗತ್ಯವಿರುವ ಕೀ ಬೇಕಾಗುತ್ತದೆ. ನಮ್ಮ ವೈಯಕ್ತಿಕ ವಿವರಗಳಿರುವ ದತ್ತಾಂಶವನ್ನು ಹೀಗೆ ಬೀಗ ಹಾಕಿ ಇಡಲಾಗಿರುತ್ತದೆ. ಇದನ್ನು ನೋಡಲು ಅಧಿಕೃತ ಕೀ ಹೊಂದಿರುವವರಿಗಷ್ಟೇ ಸಾಧ್ಯ. ಸಾಮಾನ್ಯ ಇ-ಮೇಲ್ ಖಾತೆಯಿಂದ ಆರಂಭಿಸಿ ಬ್ಯಾಂಕ್ ಖಾತೆಗಳ ತನಕ ಎಲ್ಲಾ ಡಿಜಿಟಲ್ ಸವಲತ್ತುಗಳಲ್ಲಿ ಈ ಬಗೆಯ ಎನ್ಕ್ರಿಪ್ಷನ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ತೀರಾ ಇತ್ತೀಚಿನವರೆಗೆ 1024 ಬಿಟ್‌ಗಳ `ಎನ್ಕ್ರಿಪ್ಷನ್` ಅತ್ಯಂತ ಸುರಕ್ಷಿತ ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಅದನ್ನೂ ಕಳ್ಳರು ಸುಲಭದಲ್ಲಿ ತೆರೆಯುತ್ತಾರೆಂಬುದು ಸಾಬೀತಾಗಿದೆ. ಕಳ್ಳರ ತಂತ್ರಗಳನ್ನು ಅರಿಯುವ ಮುನ್ನ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಸಂದೇಶ ಕಳಿಸುವ ಮತ್ತು ಪಡೆಯುವ ಕಂಪ್ಯೂಟರುಗಳ ಮೊದಲು ದತ್ತಾಂಶ ಸುರಕ್ಷತೆಯನ್ನು ಪರೀಕ್ಷಿಸಿಕೊಳ್ಳುತ್ತವೆ. ನಿಮ

ಹಳೆಯ ನೆನಪುಗಳು ಮತ್ತು ಹೊಸತು ಕನಸುಗಳು

ಇಮೇಜ್
ಛಾಯಾಗ್ರಹಣ - ಪವಿತ್ರ 

ವಿಶ್ವ ಛಾಯಾಗ್ರಾಹಕರ ದಿನಕ್ಕೊಂದು ಚಿತ್ರಕವನ

ಇಮೇಜ್

ಬಾಂದವ್ಯದ ಸಂವಹನ - ಗೆಳೆತನ

ಇಮೇಜ್
ಛಾಯಾಗ್ರಹಣ - ಪವಿತ್ರ