ಪೋಸ್ಟ್‌ಗಳು

ನವೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಗಂಗಾವತಿ

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಗಂಗಾವತಿಯಲ್ಲಿ ಡಿಸೆಂಬರ್ ೯ ರಿಂದ ೧೧ರವರೆಗೆ ನೆಡೆಯಲಿದೆ. ಸಮ್ಮೇಳನದ ಆಮಂತ್ರಣ ಪತ್ರಿಕೆ ನಿಮಗಾಗಿ ಇಲ್ಲಿದೆ. Open publication - Free publishing - More gangavati

ಹೆಲ್ಮೆಟ್ಟೂ - ಸೀಟ್ ಬೆಲ್ಟೂ - ವೈಪರ್ರು

ದೋ ಅಂತ ಮಳೆ. ಚಳಿ ಚಳಿ ಅಂತ ನಡುಗ್ತಾ ಕುಂತ್ರೆ, ಸೀಟ್ ಬೆಲ್ಟ್ ಸಿಗದೆ ಹೋಯ್ತ್. ಉಫ್ ಅಲ್ಲೇ ಗೊತ್ತಾಯ್ತು, ಹೊಟ್ಟೆ ಹಸಿದಿದೆ ತಿನ್ಬೇಕು, ಇಲ್ಲಾಂದ್ರೆ ಇನ್ನೂ ಬುದ್ದಿ ಕೆಡುತ್ತೆ ಅಂತ... ಸರಿ ಗಣೇಶ್ ದರ್ಶನ್ ಕಡೆ ಮುಖ ಮಾಡಿದ್ರೆ, ಎನೂ ಕಾಣ್ತಿಲ್ಲಾ... ಕಣ್ಮುಂದೆ ಬರೀ ನೀರು. ಛೇ! ವೈಪರ್ ಹಾಕೋದಲ್ವಾ ಅಂದ್ರೆ... ಇದ್ದಕ್ಕಿದ್ದಂಗೆ ನಾಲ್ಕು ಚಕ್ರದ್ ಗಾಡಿ ಬಿಟ್ ಎರಡ್ ಚಕ್ರದ್ ಬಂಡಿ ಹತ್ತಿದ್ ನೆನಪ್ ಬಂದ್ ತಲೆ ಮೇಲ್ ಒಂದು ಕುಟ್ಕೊಂಡಿದ್ದಾಯ್ತು. ವಾರದ್ ಕೊನೆ ಮರೆವಿನ ಮನೆ.

ರಿಸೈಕಲ್ ಮಂತ್ರ ಮಾಡಿದ ಜಾದೂ

ಇಮೇಜ್
Recycled rejoice with 'New Life' Uploaded by omshivaprakash ಹಳೆಯ ವಸ್ತುಗಳು ಅಟ್ಟ ಬಿಟ್ಟು ಇಳಿಯೋದೆ ಕಷ್ಟ ಬಿಡಿ. ಇನ್ನುಈ ರೀಸೈಕಲ್ ವಿಷಯ ಎತ್ತಿದ್ರೆ ಹತ್ತಾರು ಹಳೆಯ ವಿಷಯಗಳ ಬುತ್ತಿ ಬಿಚ್ಚಿಟ್ಟು, ಅಜ್ಜಿ ತಾತ ಮಾಡ್ತಿದ್ದ ರೀಸೈಕ್ಲಿಂ ಗ್ ನ ಪ್ರಚಾರವೇ ಆಗಿಹೋಗುತ್ತೆ . ಇನ್ನು ಹೊಸ ಸುದ್ದಿ ಕೇಳೋಣ. ನಮ್ಮ ಸುತ್ತಮುತ್ತ ಈಗ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ರೀಸೈಕ್ಲಿಂಗ್ ನದ್ದೇ ಪಾಠ. ಇದ್ದಕ್ಕಿದ್ದಂತೆ ಎಲ್ಲರೂ ಪರಿಸರ ಸಂರಕ್ಷ ಣೆ ಅಂತ ಮಾತಾಡ್ತಾ, ರೀಸೈಕಲ್ ಮಾಡಿ ಅಂತಿದಾರೆ ಅಲ್ವೇ? ಒಂದೆಡೆ ಬೆಂಗಳೂರು ರೀಸೈಕಲ್ ಹಬ್ಬ ಜೊತೆಗೆ , ಚಿತ್ರಕಲಾ ಪರಿಷತ್ , ನಂ೧ ಶಾಂತಿ ನಗರ್ ಸ್ಟುಡಿಯೋ, ಜಾಗ ಇತ್ತ ಮುಖಮಾಡಿ ನಿಂತರೆ ಕಸವನ್ನು ರಸ ಮಾಡಿ, ಮತ್ತದನ್ನು ನಿಮ್ಮ ಮನೆಯ ಮೂಲೆಯ ಜಾಗವನ್ನು ಅಲಂಕರಿಸಲು ತಮ್ಮ ಕೈಚಳಕ ತೋರಿಸುವ ಕಲೆಗಾರರು. ಪರಿಸರದ ಸ್ವಲ್ಪಕಸವನ್ನು ಖಾಲಿಮಾಡಿದ ಹಾಗೂ ಆಯ್ತು , ಜೊತೆಗೆ ಒಂದು ಬದುಕೂ ಆಯ್ತು. - ಈ ಹೊಸತು‌ ಮತ್ತು ಹಳತರ ನಡುವೆ ಇರುವ ವ್ಯತ್ಯಾಸಗಳೇನು? ಉತ್ತ ರ ನೀವೇ ಹುಡುಕೊಳ್ತೀರ ಅಲ್ವೇ?

ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಹ್ಯಾಕ್ ಆದದ್ದಾದರೂ ಹೇಗೆ?

ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಲ್ಲೊಂದು ದೊಡ್ಡ ಸುದ್ದಿ. ೨ಮಿಲಿಯನ್ ಸಿಟಿಬ್ಯಾಂಕ್ ಗ್ರಾಹಕರ ಅಕೌಂಟುಗಳು, ಹೆಸರು, ಕ್ರೆಡಿಟ್ ಕಾರ್ಡುಗಳ ಸಂಖ್ಯೆ, ವಿಳಾಸ ಜೊತೆಗೆ ಇ-ಮೈಲ್ ಎಲ್ಲವೂ ಹ್ಯಾಕರ್‌ಗಳ ಕೈಗೆ ಸಿಕ್ಕಿವೆ ಎಂದು. ಇದು ಸಾಧ್ಯವಾದದ್ದಾದರೂ ಹೇಗೆ? ಇಲ್ಲಿದೆ ಒಂದು ಸಣ್ಣ ಇಣುಕು ನೋಟ. ಸಿಟಿಬ್ಯಾಂಕ್ ಆನೈಲ್ ಖಾತೆಗೆ ಲಾಗಿನ ಆಗಿ ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಬರುವ ವಿಳಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಿಮ್ಮ ಅಕೌಂಟ್ ನಂಬರ್ ಅದರಲ್ಲಿ ಸುಲಭವಾಗಿ ಕಾಣಿಸುತ್ತದೆ. ಉದಾಹರಣೆಗೆ   citibank.com/user/ 12345  . ಇಲ್ಲಿ ಕಂಡುಬರುವ ಸಂಖ್ಯೆಯನ್ನು ಮತ್ತೊಂದು ಸಂಖ್ಯೆಗೆ   citibank.com/user/ 123456  ಬದಲಿಸಿದರೆ ನೀವು ಮತ್ತಾವುದೋ ಗ್ರಾಹಕನ ಖಾತೆಯನ್ನು ಹೊಕ್ಕಲು ಸಾದ್ಯ ಎಂಬ ಅಂಶವನ್ನು ಅರಿತ ತಂಡವೊಂದು ಸುಲಭವಾಗಿ ಮಿಲಿಯನ್ ಗಟ್ಟಲೆ ಗ್ರಾಹಕರ ಜೇಬನ್ನು ಹೊಕ್ಕಲು ಅಣಿಯಾಗಿವೆ.  ಮೇಲೆ ತಿಳಿದಷ್ಟು ವಿಷಯವಷ್ಟೇ ಗೊತ್ತಿದ್ದರೆ ಸಾಕು ಒಂದು ವೆಬ್‌ಸೈಟ್‌ನಿಂದ ತಮಗೆ ಬೇಕಿರುವ ಮಾಹಿತಿಗಳನ್ನು ಸುಲಭವಾಗಿ ಇಳಿಸಿಕೊಳ್ಳಲು ಸಣ್ಣ ಸ್ಕ್ರಿಪ್ಟ್ ಒಂದನ್ನು ಬರೆದು ಕೆಲಸವನ್ನು ಸರಾಗಗೊಳಿಸಿಕೊಳ್ಳಬಹುದು. ಕೆಲವು ವರ್ಷ ಇಂಟರ್ನೆಟ್ ನಲ್ಲಿ ಸುತ್ತಾಡಿರುವವನಿಗೆ ಇಂತದ್ದೊಂದು ಕೆಲಸ ನೀರು ಕುಡಿದಷ್ಟೇ ಸುಲಭ. ಮಕ್ಕಳು ಕೂಡಾ ಹ್ಯಾಕ್ ಮಾಡಬಲ್ಲಂತಹ ದೋಷವೊಂದನ್ನು, ಜಗತ್ತಿಗೇ ೨೪ ತಾಸು ಹಣಕಾಸು ವ್ಯವಸ್ಥೆ ನೀಡುವ ಬ್ಯಾಕಿಂಗ

ನೆನಪಿನ ಹಾಳೆಗಳಿಂದ

ಇಮೇಜ್
ಛಾಯಾಗ್ರಹಣ - ಪವಿತ್ರ