ರಿಸೈಕಲ್ ಮಂತ್ರ ಮಾಡಿದ ಜಾದೂ


Recycled rejoice with 'New Life'
Uploaded by omshivaprakash

ಹಳೆಯ ವಸ್ತುಗಳು ಅಟ್ಟ ಬಿಟ್ಟು ಇಳಿಯೋದೆ ಕಷ್ಟ ಬಿಡಿ. ಇನ್ನುಈ ರೀಸೈಕಲ್ ವಿಷಯ ಎತ್ತಿದ್ರೆ ಹತ್ತಾರು ಹಳೆಯ ವಿಷಯಗಳ ಬುತ್ತಿ ಬಿಚ್ಚಿಟ್ಟು, ಅಜ್ಜಿ ತಾತ ಮಾಡ್ತಿದ್ದ ರೀಸೈಕ್ಲಿಂ ಗ್ ನ ಪ್ರಚಾರವೇ ಆಗಿಹೋಗುತ್ತೆ .

ಇನ್ನು ಹೊಸ ಸುದ್ದಿ ಕೇಳೋಣ. ನಮ್ಮ ಸುತ್ತಮುತ್ತ ಈಗ ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ರೀಸೈಕ್ಲಿಂಗ್ ನದ್ದೇ ಪಾಠ. ಇದ್ದಕ್ಕಿದ್ದಂತೆ ಎಲ್ಲರೂ ಪರಿಸರ ಸಂರಕ್ಷ ಣೆ ಅಂತ ಮಾತಾಡ್ತಾ, ರೀಸೈಕಲ್ ಮಾಡಿ ಅಂತಿದಾರೆ ಅಲ್ವೇ? ಒಂದೆಡೆ ಬೆಂಗಳೂರು ರೀಸೈಕಲ್ ಹಬ್ಬ ಜೊತೆಗೆ , ಚಿತ್ರಕಲಾ ಪರಿಷತ್ , ನಂ೧ ಶಾಂತಿ ನಗರ್ ಸ್ಟುಡಿಯೋ, ಜಾಗ ಇತ್ತ ಮುಖಮಾಡಿ ನಿಂತರೆ ಕಸವನ್ನು ರಸ ಮಾಡಿ, ಮತ್ತದನ್ನು ನಿಮ್ಮ ಮನೆಯ ಮೂಲೆಯ ಜಾಗವನ್ನು ಅಲಂಕರಿಸಲು ತಮ್ಮ ಕೈಚಳಕ ತೋರಿಸುವ ಕಲೆಗಾರರು. ಪರಿಸರದ ಸ್ವಲ್ಪಕಸವನ್ನು ಖಾಲಿಮಾಡಿದ ಹಾಗೂ ಆಯ್ತು , ಜೊತೆಗೆ ಒಂದು ಬದುಕೂ ಆಯ್ತು. - ಈ ಹೊಸತು‌ ಮತ್ತು ಹಳತರ ನಡುವೆ ಇರುವ ವ್ಯತ್ಯಾಸಗಳೇನು? ಉತ್ತ ರ ನೀವೇ ಹುಡುಕೊಳ್ತೀರ ಅಲ್ವೇ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ