ಪೋಸ್ಟ್‌ಗಳು

ಜನವರಿ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ

ಇಮೇಜ್
FUEL Initiative for Kannada , a set on Flickr. Press Release ಕನ್ನಡ ಕಂಪ್ಯೂಟರ್ ಪದಕೋಶ ಅವಲೋಕನ ಕಾರ್ಯಗಾರ ಕನ್ನಡ ತಂತ್ರಾಂಶಗಳ ಅನುವಾದದಲ್ಲಿ ಬಳಸಬೇಕಿರುವ ಪದಗಳಲ್ಲಿ ಏಕರೂಪತೆ ಕಾಯ್ದುಕೊಳ್ಳಲು ಉದ್ಧೇಶಿಸಲಾದಂತಹ ಅವಲೋಕನ ಕಾರ್ಯಗಾರವನ್ನು ಜನವರಿ ೨೮ ಹಾಗು ೨೯ ರಂದು FUEL ಪರಿಯೋಜನೆಯ ಅಡಿಯಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯಲ್ಲಿ (ಸಿಐಎಸ್) ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಗಣಕದಲ್ಲಿ ಹೆಚ್ಚಾಗಿ ಬಳಸಲಾಗುವ ಪರ್ಯಾಯ ಕನ್ನಡ ಪದಗಳ ಅವಲೋಕಿಸುವ ಸಲುವಾಗಿ ಕನ್ನಡ ಸಮುದಾಯದ ಮೂಲಕ ಅವಲೋಕನ ನಡೆಸಲಾಯಿತು. ಕಂಪ್ಯೂಟರ್ ತಂತ್ರಾಂಶಗಳ ಕನ್ನಡ ಅನುವಾದದಲ್ಲಿನ ಗೊಂದಲ ಹಾಗು ಏಕರೂಪತೆಯ ಕೊರತೆಯನ್ನು ನೀಗಿಸುವ ಉದ್ಧೇಶದಿಂದ ಸಂಚಯ (sanchaya.net) ತಂಡವು ಈ FUEL ಕನ್ನಡ ಕಾರ್ಯಗಾರವನ್ನು ರೆಡ್‌ ಹ್ಯಾಟ್‌ನ ನೆರವಿನಿಂದ ಹಮ್ಮಿಕೊಂಡಿತ್ತು. ಭಾಷಾಶಾಸ್ತ್ರಜ್ಞರು, ಅನುವಾದಕರು ಹಾಗು ಬಳಕೆದಾರರು ಮುಂತಾಗಿ ಸುಮಾರು ೧೫ ಜನರು ಪಾಲ್ಗೊಂಡ ಎರಡು ದಿನಗಳ ಈ ಕಾರ್ಯಗಾರದಲ್ಲಿ ಸುಮಾರು ೫೭೮ ಪದ/ಪದಗುಚ್ಛಗಳ ಪ್ರಸ್ತುತ ಅನುವಾದವನ್ನು ಅವಲೋಕಿಸಿ, ಅದರಲ್ಲಿನ ತಪ್ಪುಗಳನ್ನು ತಿದ್ದಿ ಒಂದು ಶಿಷ್ಟ ಗಣಕ ಪದಕೋಶವನ್ನು ಸಿದ್ಧಗೊಳಿಸಲಾಯಿತು. ರೆಡ್‌ ಹ್ಯಾಟ್‌ನ ಶಂಕರ ಪ್ರಸಾದ್ ಎಲ್ಲರನ್ನೂ ಸ್ವಾಗತಿಸಿ, ಕಂಪ್ಯೂಟರ್ ಪದಕೋಶದಲ್ಲಿ ಶಿಷ್ಟತೆಯ ಅಗತ್ಯಗಳನ್ನು ವಿವರಿಸಿದರು. ನಂತರ ಮಾತನಾಡಿದ ಕನ್ನಡ ಗಣಕ ಪರಿಷತ್ತಿನ ಕಾರ್ಯದರ್

ಅಂತರ್ಜಾಲದಲ್ಲಿ ಕೋಲಾಹಲ

ಇಮೇಜ್
೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ: ವ್ಯಂಗ್ಯಚಿತ್ರ ಕೃಪೆ: ಉದಯವಾಣಿ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ . ಮುಕ್ತವಾಗಿ , ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್ , ಕಂಪ್ಯೂಟರ್ , ಲ್ಯಾಪ್‌ಟಾಪ್ , ಟ್ಯಾಬ್ಲೆಟ್ ಇತ್ಯಾದಿಗಳ ಮುಖೇನ ಕೈಬೆರಳಿನ ಕೆಲವೇ ಕ್ಲಿಕ್‌ಗಳಲ್ಲೇ ಜಗತ್ತಿನ ಎಲ್ಲರ ಕಂಪ್ಯೂಟರ್ ಪರದೆಗಳ ಮೇಲೆ ಮೂಡಿಸಬಹುದು . ಪಠ್ಯ , ಬ್ಲಾಗ್ , ಸುದ್ದಿ , ದೃಶ್ಯ , ಶ್ರಾವ್ಯ , ಚಿತ್ರ ಹೀಗೆ ಹತ್ತು ಹಲವು ಮಾದರಿಯಲ್ಲಿ ಇಂಟರ್‌ನೆಟ್‌ನ ಮಾಹಿತಿ ನಮಗೆ ಲಭ್ಯ . ಈ ಮಾಹಿತಿ ಬಂದದ್ದಾದರೂ ಎಲ್ಲಿಂದ ? - ನಾವು ದಿನನಿತ್ಯ ಇಂಟರ್‌ನೆಟ್‌ನಲ್ಲಿ ಕಾಣುವ ಎಲ್ಲ ವಿಷಯಗಳು ಆಯಾ ವೆಬ್‌ಸೈಟ್ನದ್ದೇ ಅಥವಾ ‘ಪೈರಸಿ’ಯೋ ? ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇಂಟರ್‌ನೆಟ್ ಅನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ . ಮಿಲಿಟರಿ ಸಂಬಂಧಿತ ವಿಷಯಗಳನ್ನು ಒಂದು ಪ್ರದೇಶದಿಂಡ ಮತ್ತೊಂದು ಪ್ರದೇಶಕ್ಕೆ ರವಾನಿಸುವಾಗ ತಗುಲುತ್ತಿದ್ದ ಸಮಯವನ್ನು ಕಡಿಮೆ ಮಾಡಲು ಅಮೇರಿಕಾದಲ್ಲಿ ಹುಟ್ಟಿದ ‘ಆರ್ಪಾನೆಟ್ ' (ARPANET) ಎಂಬ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಸಂಪರ್ಕದಲ್ಲಿರುವಂತೆ ಮಾಡುವ ತಂತ್ರಜ್ಞಾನ , ಇಂದು ಬೃಹದಾಕಾರದಲ್ಲಿ ಬೆಳೆದು ನಮಗೆಲ್ಲ ‘ಇಂಟರ್‌ನೆಟ್’ ಅಥವ ‘ಅಂತರ್ಜಾಲ ' ಎಂದೇ ಚಿರಪರಿಚಿತವಾಗಿ

FUEL - ಕನ್ನಡ ತಾಂತ್ರಿಕ ಪದಕೋಶದ ಏಕೀಕರಣಕ್ಕೊಂದು ಕಾರ್ಯಾಗಾರ

ಇಮೇಜ್
ಈಗ್ಗೆ ಸುಮಾರು ೮-೧೦ ವರ್ಷಗಳ ಹಿಂದೆ ಆರಂಭಗೊಂಡ ಉಚಿತ ಹಾಗು ಮುಕ್ತ ತಂತ್ರಾಂಶಗಳ ಕನ್ನಡ ಅನುವಾದವು ಈಗ ಒಂದು ಗಮನಾರ್ಹ ಹಂತಕ್ಕೆ ತಲುಪಿದೆ ಎಂದೇ ಹೇಳಬಹುದು. ಇದರಲ್ಲಿ ತೊಡಗಿಕೊಂಡಿರುವ ಕನ್ನಡ ಸಮುದಾಯದ ಗಾತ್ರ ಬಹಳ ದೊಡ್ಡದಾಗಿರದಿದ್ದರೂ ಸಹ, ತಂತ್ರಾಂಶಗಳ ನಿರ್ದಿಷ್ಟ ಆವೃತ್ತಿಯ ಬಿಡುಗಡೆಯ ಪೂರ್ವದಲ್ಲಿ ಈ ಸಮುದಾಯದಲ್ಲಿ  ಕೊಂಚ ಮಟ್ಟಿನ ಚಟುವಟಿಕೆಯನ್ನು ಕಾಣಬಹುದಾಗಿರುತ್ತದೆ. ಹೀಗೆ ಉತ್ಸುಕರಾಗಿರುವವರಲ್ಲಿ ಹೆಚ್ಚಿನವರು ಮೊದಲ ಬಾರಿಗೆ ತಂತ್ರಾಂಶ ಸಂಬಂಧಿ ಅನುವಾದ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ ಎದುರಾಗುವ ಪ್ರಮುಖ ಸಮಸ್ಯೆಯೆಂದರೆ ಕೆಲವು ಇಂಗ್ಲೀಷ್ ಪದ ಅಥವ ಪದಗುಚ್ಛಗಳಿಗೆ ಸನ್ನಿವೇಶಕ್ಕೆ ಅನುಗುಣವಾದ ಸೂಕ್ತವಾದ ಪರ್ಯಾಯ ಕನ್ನಡ ಪದ ದೊರೆಯದೆ ಇರುವುದು. ಇಂತಹ ಸಂದರ್ಭಗಳಲ್ಲಿ ಇವರು ತಮಗೆ ತೋಚಿದ ಯಾವುದೊ ಒಂದು ಪದವನ್ನು ಬಳಸಿದಾಗ ಆ ತಂತ್ರಾಂಶವನ್ನು ಬಳಸುವ ಬಳಕೆದಾರರಿಗೆ ಸಹ ಗೊಂದಲ ಉಂಟಾಗಿ, ಅದರ ಇಂಗ್ಲೀಷ್‌ನ ಆವೃತ್ತಿಗೆ ಮರಳುವ ಸಾಧ್ಯತೆ ಇರುತ್ತದೆ.  ಇದನ್ನು ಪರಿಹರಿಸಲು, ಇಂತಹ ಅನುವಾದ ಕಾರ್ಯಗಳಲ್ಲಿ ಬಳಸಬಹುದಾದ ಒಂದು ಶಿಷ್ಟ ಪದಕೋಶವು ಲಭ್ಯವಿರಬೇಕಾಗುತ್ತದೆ. ಎಲ್ಲಾ ಅನ್ವಯಿಕಗಳಲ್ಲಿ ಏಕಪ್ರಕಾರದ ಪರ್ಯಾಯ ಕನ್ನಡ ಪದ/ಪದಗುಚ್ಛವನ್ನು ಬಳಸುವುದಲ್ಲಿ, ಸಾಮಾನ್ಯ ಜನರಿಗೆ ಅಂತಹ ಅನ್ವಯಿಕ ತಂತ್ರಾಂಶವು ಬಳಕೆಗೆ ಸುಲಭವಾಗುತ್ತದೆ. ಇದರಿಂದಾಗ ಅನುವಾದದ ಉದ್ಧೇಶವು ನೆರವೇರುವುದರ ಜೊತೆಗೆ ಉಚಿತ ಹಾಗು ಮುಕ್ತ ತಂತ

ಸಂಕ್ರಾಂತಿ ಸಂಭ್ರಮ

ಇಮೇಜ್
(Click on the image to read it easily | ಓದಲು ಸುಲಭವಾಗುವಂತಾಗಲು ಚಿತ್ರದ ಮೇಲೆ ಕ್ಲಿಕ್ ಮಾಡಿ) Sankranti Wishes 2012 , a photo by omshivaprakash on Flickr. ಛಾಯಾಗ್ರಹಣ - ಪವಿತ್ರ ಎಚ್ .(http://phjot.com) Via Flickr: Makara Sankranti - Festival of harvesting - en.wikipedia.org/wiki/Makar_Sankranti Image for this greeting in Kannada is contributed my wife @pavithra.chihan ;) thanks dear... After all that hardwork, now we see the grain in storage and it gives us enough food to lead life for next year - hence we rejoice Its a day to take rest for those who sweat in fields taking care of each and every seed they sow - hence we rejoice The sun laughs at us and takes a turn to bring a new start after bringing extreme changes in climates such as heat and rain - hence we rejoice Lots of sweets called huggi and its a festival / Suggi , we decorate animals who worked hard in fields, we spend the day playing day and night - hence we rejoice...

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

ಇಮೇಜ್
ಎಲ್ಲರಿಗೂ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಆದರೆ ನಮ್ಮಲ್ಲನೇಕರಿಗೆ ನಾನೇನು ಮಾಡಬಲ್ಲೆ ಎಂಬ ಪ್ರಶ್ನೆ ಕಾಡಿದರೆ,  ಮತ್ತಿನ್ನಿತರರಿಗೆ ಎಲ್ಲಿಂದ ಕೆಲಸ ಶುರುಮಾಡಲಿ ಎಂಬ ಪ್ರಶ್ನೆ. ಅದನ್ನೂ ಮೀರಿದರೆ ನನಗೆ ಕಂಪ್ಯೂಟರ್ ಅಷ್ಟುಗೊತ್ತಿಲ್ಲ ನಾನು ಇದರಲ್ಲಿ ಕೆಲಸ ಮಾಡ್ಲಿಕ್ಕೆ ಸಾಧ್ಯ ಇಲ್ಲ ಎಂದು ಕೈಕಟ್ಟಿ ಕೂರುತ್ತೇವೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ತಮ್ಮ ಹವ್ಯಾಸ, ಉದ್ಯೋಗ ಇತ್ಯಾದಿಗಳ ಸುತ್ತಲೇ ಹತ್ತಾರು ವಿಷಯಗಳ ಮೂಲಕ ಭಾಷೆ ಹಾಗೂ ತಂತ್ರಜ್ಞಾನದ ಅಭಿವೃದ್ದಿಯ ನೆರವಿಗೆ ನಿಲ್ಲಬಹುದು. ಸಾಧ್ಯಾಸಾಧ್ಯತೆಗಳ ಇಂತಹ ಹತ್ತಾರು ವಿಷಯಗಳನ್ನು, ಪ್ರಾಯೋಗಿಕವಾಗಿ ಇಂತಹ  ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಅನುಭವಿ ತಂತ್ರಜ್ಞರು ಅನುಭವಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತ ನೀವೂ ಅವರೊಂದಿಗೆ ಹೆಜ್ಜೆಯಿಡಲು ೨೨ನೇ ಜನವ ರಿ ೨೦೧೨ ರಂದು ' ಹೆಜ್ಜೆ ' ವೇದಿಕೆ ಸಿದ್ದವಾಗುತ್ತಿದೆ. ಇದು ಬರೀ ಮಾಹಿತಿತಂತ್ರಜ್ಞಾನ ಅಥವ ಐ.ಟಿ ಮಂದಿಗಲ್ಲ... ಯಾರುಬೇಕಾದರೂ ಭಾಗವಹಿಸಬಹುದು. ವಿಶೇಷವಾಗಿ ಮಹಿಳೆಯರು ಕೂಡ ತಂತ್ರಜ್ಞಾನದ ವಿಷಯದಲ್ಲಿ ಕೆಲಸ ಹೇಗೆ ಮಾಡಬಲ್ಲರು, ಸಹಾಯ ದೊರೆಯುತ್ತದೆಯೇ, ಅವರೂ ಸಮುದಾಯ ಕಟ್ಟುವ ನಿಟ್ಟಿನಲ್ಲಿ ಹೇಗೆ ಎಲ್ಲರೊಂದಿಗೆ ಹೆಜ್ಜೆ ಇಡಬಲ್ಲರು ಎಂಬುದನ್ನೂ ತಿಳಿಯಬಹುದು. ನಮ್ಮೆಲ್ಲರ ನೆಚ್ಚಿನ ವಿಜ್ಞಾನ ಲೇಖಕ ಶ್ರೀ ನಾಗೇಶ್ ಹೆಗಡೆ, ವಸುದೇಂದ್ರ ಮುಂತಾ