ಪೋಸ್ಟ್‌ಗಳು

ಜುಲೈ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರುಪಿನ್ ಪಾಸ್‌ನ ಒಂದು ದೃಶ್ಯ

ಇಮೇಜ್
Yellow Blend , a photo by omshivaprakash on Flickr. ಹಿಮಾಲಯದ ತಪ್ಪಲಿನಲ್ಲಿ ನೆಡೆಯುವಾಗ ಕಣ್ಣಿಗೆ ಕಾಣುವ ಪ್ರತಿಯೊಂದೂ ದೃಶ್ಯ ನಮ್ಮ ಕ್ಯಾಮೆರಾ ಅವನ್ನು ಸೆರೆಹಿಡಿಯುವುದಕ್ಕೆ ಮುಂಚೆ ನಮ್ಮನ್ನೇ ಸೆರೆ ಹಿಡಿದಿರುತ್ತದೆ. ಉತ್ತರಖಂಡ್‌ನ ದೌಲಾದಿಂದ ಝಾಖಾಗೆ ನೆಡೆದು ಬಂದ ದಾರಿಯಲ್ಲಿ ನದಿಯ ಆಚೆಬದಿ ಇದ್ದ ಮನೆಯ ರಮಣೀಯ ದೃಶ್ಯ.

ಅರಿವಿನ ಅಲೆಗಳು - ೨೦೧೨

ಇಮೇಜ್
ಪ್ರಕಟಣೆ: ಸಂಚಯ ಆತ್ಮೀಯ ಕನ್ನಡಿಗರೆ , ಸಾಮಾನ್ಯನೂ ,  ದಿನನಿತ್ಯದ ಬಳಕೆದಾರನೂ ಆದ ಗೆಳೆಯನಿಂದ ಹಿಡಿದು ,  ಈಗಾಗಲೇ ತಂತ್ರಾಂಶ ಮತ್ತು ತಂತ್ರಜ್ಞಾನದ ಅಭಿವೃದ್ದಿ , ಅನುಸ್ಥಾಪನೆ ,  ಸಂಶೋಧನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲ ಸಮಾನ ಮನಸ್ಕ ಗೆಳೆಯರ ಅನುಭವಗಳನ್ನು ಒಳಗೊಂಡಂತೆ ಕನ್ನಡಕ್ಕೆ ಒಂದಿಷ್ಟು ತಂತ್ರಜ್ಞಾನ ಸಂಬಂಧಿತ ಲೇಖನಗಳನ್ನು ಸೇರಿಸುವುದು  ‘ ಅರಿವಿನ ಅಲೆಗಳು ‘ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿ ೨೦೧೧ ರ ಆಗಸ್ಟ್ ೧೫ ರಂದು ಮೊದಲ ಪ್ರಕಟಣೆ ಕಂಡಿತು . ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಳಕೆಯನ್ನು ಪ್ರಚುರಪಡಿಸುವುದು ,  ಅದನ್ನು ಉಪಯೋಗಿಸಲು ,  ಅಭಿವೃದ್ದಿಪಡಿಸಲು , ಅಭ್ಯಸಿಸಲು ,  ಇತರರೊಡನೆ ಹಂಚಿಕೊಳ್ಳಲು ಇಚ್ಚಿಸುವ ಹೊಸ ಬಳಕೆದಾರರಿಗೆ ಸಹಾಯವಾಗುವಂತೆ ,  ಕನ್ನಡದಲ್ಲಿ ಲೇಖನಗಳನ್ನು ಹೊರತರುವಲ್ಲಿ  ‘ ಸಂಚಯ ‘ ದ ಈ ಕಾರ್ಯಕ್ರಮದ ಫಲವಾಗಿ ಹೊರಬಂದ ಮೊದಲ ಆವೃತ್ತಿಯನ್ನು ನೀವು http://arivu.sanchaya.net   ನಲ್ಲಿ ಕಾಣಬಹುದು . ೧೪ ಜನ ಕನ್ನಡಿಗರು ತಮ್ಮ ಅರಿವನ್ನು ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದಾರೆ .  ತಂತ್ರಜ್ಞಾನ ಅಥವಾ ತಂತ್ರಾಂಶಗಳನ್ನು ಬಳಸಲು ಹಿಂಜರಿಯುವ ಸಾಮಾನ್ಯನ ಅಂಜಿಕೆಯನ್ನು ದೂರಪಡಿಸಲು ಆಗಸ್ಟ್ ೧ ರಿಂದ ಆಗಸ್ಟ್ ೧೪ ರ ವರೆಗೆ ಪ್ರತಿದಿನ ಪ್ರಕಟಿಸಿದ ಅಲೆಗಳನ್ನು ನೀವು ಓದಬಹುದು . ಈ ಕಾರ್ಯವನ್ನು ಮತ್ತೆ ಈ ವರ್ಷವೂ ಕೈಗೆತ್ತಿಕೊಂಡಿದ್ದು ,  ಹೊಸ ಲೇಖಕರನ್ನು ,  ಲೇಖನ