ಪೋಸ್ಟ್‌ಗಳು

ಡಿಸೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುಸ್ತಕಗಳ ನಡುವಲ್ಲಿ

ಬಹಳಷ್ಟು ಪುಸ್ತಕಗಳು ಕಪಾಟು ಸೇರಿವೆ ಅವುಗಳಲ್ಲಿ ಕೆಲವು ಪುಸ್ತಕಗಳ ಮೈದಡವಿದ್ದೇನೆ ಮುನ್ನುಡಿ, ಹಿನ್ನುಡಿ, ಮಧ್ಯದ ಇನ್ಯಾವುದೋ ಪುಟದ ನೆನಪ ಸರಿಸಿದ್ದೇನೆ. ಓದಲಿಕ್ಕೆ ಸಮಯವಿಲ್ಲ ಎನ್ನುವ ಮಾತಿಲ್ಲ... ಆಡಿದರೆ ಅದು ತಪ್ಪಾಗುತ್ತದೆ ನನ್ನ ತಲೆದಿಂಬಿನ ಪಕ್ಕದಲ್ಲಿರುವ ಆ ಪುಸ್ತಕಕ್ಕೂ ನನ್ನ ತಲೆಬಿಸಿಯ ಸ್ವಲ್ಪ ಅಂದಾಜಾದರೂ ಇದ್ದೀತು ಮನಸ್ಸನ್ನು ಗಟ್ಟಿ ಮಾಡಿಕೊಂಡು, ನನ್ನಿಷ್ಟದ ಪುಸ್ತಕಗಳನ್ನು ಓದಿಯೇ ತೀರಬೇಕು ನನ್ನ ಮನದ ಮಾತುಗಳನ್ನು ಹರಿಯಬಿಡಬೇಕು ನೀರಾಳವಾಗಬೇಕು, ಹೊಸತು ಅರಿವನ್ನು ಸವಿಯಬೇಕು ಹಳೆಯ ದಿನಗಳನ್ನೆಲ್ಲಾ ನೆನಪಿಗೆ ತರುತ್ತಾ, ದಿನಗಳೆದಂತೆ ಬೆಳೆವ ಮೆದುಳಿನ ಹರಿತಕ್ಕೆ ತಪ್ಪು ಒಪ್ಪುಗಳ ತಿಳಿಯ ಹೇಳುವ ಪುಸ್ತಕಗಳ ಓದಿಯೇ ಬಿಡಬೇಕು... ಮನಕ್ಕೆ, ಮೈಗೆ ಅಂಟಿದ ಜಡತ್ವವ , ಕೆಲಸವೆನ್ನುವ ಮುಗಿಯದ ಸೋಮಾರಿತನದ ಕಾರಣವ ದೂರ ಒಗೆಯಬೇಕು, ನನ್ನ ನೆಚ್ಚಿನ ಪುಸ್ತಕಗಳ ಮಡಿಲ ಸೇರಬೇಕು...

ಲೈವ್‌ಸ್ಟ್ರೀಮ್ ಮಾಡುವ ಗುಂಗಿನಲ್ಲಿ...

ಇಮೇಜ್
ಕ್ಯಾಮೆರಾಗಳ ಸುತ್ತ... ಇತ್ತೀಚೆಗೆ ಕಾರ್ಯಕ್ರಮಗಳನ್ನು ಲೈವ್‌ಸ್ಟ್ರೀಮ್ ಮಾಡುವುದು ಸಾಮಾನ್ಯವಾಗಿದೆ. ದೊಡ್ಡದೊಡ್ಡ ಕ್ಯಾಮೆರಾಗಳನ್ನು ಹಿಡಿದು, ವಿಡಿಯೋ ಮಾಡಿ, ಅದನ್ನು ಪ್ರಾಸೆಸ್ ಮಾಡಿ ನಂತರ ಅವುಗಳನ್ನು ಸಿ.ಡಿ ಇತ್ಯಾದಿಗಳಲ್ಲಿ ಬರೆದು ಬೇರೊಬ್ಬರಿಗೆ ನೀಡುತ್ತಿದ್ದ ದಿನಗಳು ಇನ್ನೇನು ಮುಗಿದೇ ಹೋದವು ಎನ್ನಬಹುದು. ಈಗ ಲೈವ್ ಸ್ಟ್ರೀಮ್ ಕಾಲ. ಕೈಯಲ್ಲಿ ಹಿಡಿದ ಮೊಬೈಲ್, ಡಿಜಿಟಲ್ ಕ್ಯಾಮೆರಾ, ಟ್ಯಾಬ್ಲೆಟ್ ಪಿ.ಸಿ ಇವೆಲ್ಲವೂ ಇಂಟರ್ನೆಟ್‌ಮಯ. ಅವುಗಳಲ್ಲಿ ಕ್ಯಾಮೆರಾ ಬಳಸಿ ಇಂಟರ್ನೆಟ್‌ಗೆ ನೇರವಾಗಿ ನಿಮ್ಮ ಮುಂದೆ ನೆಡೆಯುತ್ತಿರುವ ಕಾರ್ಯಕ್ರಮಗಳನ್ನು ಸುಯ್ಯನೆ ಮನೆಯಲ್ಲೋ, ಇನ್ಯಾವುದೋ ದೇಶದಲ್ಲಿ ಕುಳಿತಿರುವ ಗೆಳೆಯರಿಗೆ ಸೇರಿಸಲು ಅಪ್ಲೋಡ್ ಮಾಡಬಹುದು. ಈ ಕಾರ್ಯಕ್ಕೆ ಮೇಲೆ ಹೇಳಿದ ಯಾವುದಾದರೂ ಒಂದು ಉಪಕರಣ (ಡಿಜಿಟಲ್ ಕ್ಯಾಮೆರಾ ಹೊಸ ಸೇರ್ಪಡೆ - ಆಂಡ್ರಾಯ್ಡ್ ಇರುವ ಕ್ಯಾಮೆರಾಗಳು ಈಗ ಮಾರುಕಟ್ಟೆಗೆ ಒಂದೊಂದಾಗಿ ಬರುತ್ತಿವೆ), ಜೊತೆಗೆ 3G ಇಂಟರ್ನೆಟ್ ಕನೆಕ್ಷನ್ ಅಥವಾ ಹತ್ತಿರದ ವೈಫೈ ಬಳಸುವ ಸೌಲಭ್ಯ ನಿಮ್ಮಲ್ಲಿರಬೇಕು. ಆಂಡ್ರಾಯ್ಡ್,  ಐಫೋನ್ ಇತ್ಯಾದಿ ಫೋನ್‌ಗಳನ್ನು ಬಳಸಿ ಗೂಗಲ್ ಹ್ಯಾಂಗ್‌ಔಟ್, ಲೈವ್‌ಸ್ಟ್ರೀಮ್, ಯುಸ್ಟ್ರೀಮ್, ಜಸ್ಟ್‌ಇನ್ ಟೀವಿ ಇತ್ಯಾದಿಗಳ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಲೈವ್‌ಸ್ಟ್ರೀಮ್ ಕ್ಷಣಾರ್ಧದಲ್ಲಿ ಸಾಧ್ಯ. ಇತ್ತೀಚಿನ ವಿಕಿಪೀಡಿಯ ಕಾರ್ಯಾಗಾರಗಳು, ಸಂವಾದಗಳು, ಹಾಗೂ ಛಂದ ಪುಸ್ತಕದ '

ಕನ್ನಡ ವಿಕಿಪೀಡಿಯ ಸಂಪಾದನೆ - ಶುರು ಮಾಡುವುದು ಎಲ್ಲಿಂದ?

ಇಮೇಜ್
ವಿಕಿಪೀಡಿಯ ನೀವೂ ಎಡಿಟ್ ಮಾಡಬಹುದು ಎಂದು, ಅದು ಹೇಗೆ ಎಂದು ತೋರಿಸಿದ ನಂತರದ ಪ್ರಶ್ನೆ - ನಾನು ಸಂಪಾದನೆ ಶುರು ಮಾಡುವುದಾದರೂ ಎಲ್ಲಿಂದ ಎಂಬುದು. ಫೇಸ್‌ಬುಕ್‌ನ ಕನ್ನಡ ವಿಕಿಪೀಡಿಯ ಗುಂಪು, ಸಮ್ಮಿಲನಗಳು ಹಾಗೂ ಇತ್ತೀಚಿಗಿನ ಗೂಗಲ್ ಹ್ಯಾಂಗ್‌ಔಟ್ ಸಂವಾದದಲ್ಲೂ ಇದೇ ಪ್ರಶ್ನೆ. ಇವುಗಳನ್ನು ಉತ್ತರಿಸಲು ಈ ಕೆಳಗೆ ಪ್ರಯತ್ನಿಸಿದ್ದೇನೆ. ಇವು ನಿಮ್ಮ ಸಹಾಯಕ್ಕೆ ಬರಬಲ್ಲವು. ವಿಕಿಪೀಡಿಯ ಸಂಪಾದನೆ/ಎಡಿಟ್ ಪ್ರಾರಂಭಿಸಲು: ಕನ್ನಡ ವಿಕಿಪೀಡಿಯದ ಜಾಲತಾಣದಲ್ಲಿ (http://kn.wikipedia.org) ನಿಮ್ಮದೊಂದು ಬಳಕೆದಾರನ ಖಾತೆ(User Account) ಒಂದನ್ನು ತೆರೆಯಿರಿ. ಖಾತೆ ಇಲ್ಲದೆಯೂ ವಿಕಿಪೀಡಿಯ ಎಡಿಟ್ ಮಾಡಬಹುದು, ಆದರೆ ಖಾತೆಯೊಂದರ ಮೂಲಕ ನೀವು ಸಂಪಾದಿಸುವ ಲೇಖನ, ವಿಕಿಪೀಡಿಯಕ್ಕೆ ನಿಮ್ಮ ಕೊಡುಗೆ ಇತ್ಯಾದಿಗಳನ್ನು ಮುಂದೊಂದು ದಿನ ಪರಿಶೀಲಿಸಲು ಸಹಾಯಕವಾಗುತ್ತದೆ. ಈಗಾಗಲೇ ವಿಕಿಪೀಡಿಯದಲ್ಲಿ ಖಾತೆ ಹೊಂದಿದ್ದಲ್ಲಿ, ನಿಮ್ಮ ಇಷ್ಟದ ವಸು, ವಿಚಾರ, ವಿಷಯ ಇತ್ಯಾದಿಗಳನ್ನು ವಿಕಿಯಲ್ಲಿ ಹುಡುಕಲು ಮೊದಲು ಮಾಡಿ. ನೀವು ಹುಡುಕುತ್ತಿರುವ ವಿಷಯ ವಿಕಿಪೀಡಿಯದಲ್ಲಿ ಈಗಾಗಲೇ ಇದ್ದರೆ, ನಿಮಗೆ ಆ ಪುಟದ ನಿಮ್ಮ ಬ್ರೌಸರ್ ಪರದೆಯ ಮೇಲಿರುವುದು. ಈಗ ನಿಮ್ಮ ಮುಂದಿರುವ ಪುಟದ ಮಾಹಿತಿ ಸರಿ ಇದೆಯೇ, ಅಥವಾ ಇದಕ್ಕಿಂತ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದಲ್ಲಿ ಅದನ್ನು ಸೇರಿಸಲು ಪ್ರಯತ್ನಿಸಬಹುದು. 'ಸಂಪಾದಿಸಿ' ಅಥವಾ 'ಬದಲಾಯಿಸಿ' ಎಂಬ ಕೊ