ಪೋಸ್ಟ್‌ಗಳು

ಜನವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿತ್ರ ಸಂತೆ ೨೦೧೩

ಇಮೇಜ್
Chitra Sante 2013 , a set on Flickr. ಚಿತ್ರ ಸಂತೆಯ ಚಿತ್ರ ಪುಟಗಳು: ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಚಿತ್ರ ಕಲಾ ಪರಿಷತ್ ಏರ್ಪಡಿಸುವ ಈ ಸಂತೆ ಲಕ್ಷಾಂತರ ಮಂದಿಯನ್ನು ಪ್ರತಿವರ್ಷ ತನ್ನೆಡೆಗೆ ಸೆಳೆಯುತ್ತಲೇ ಇದೆ. ಹತ್ತಾರು ಸಾವಿರ ಕಲಾವಿದರಿಗೆ ತಮ್ಮ ಕಲೆಯ ಔತಣವನ್ನು ಜನ ಸಾಮಾನ್ಯರಿಗೆ ನೀಡುವ ಕೆಲಸ ಇದರಿಂದ ಸಾಧ್ಯವಾಗಿದೆ. ಇಲ್ಲಿರುವ ಚಿತ್ರಗಳು ಚಿತ್ರ ಸಂತೆಯನ್ನು ನೆನಪು ಮಾಡಿಕೊಳ್ಳಲು ಮಾತ್ರ. ಕಲೆಯನ್ನು ನೇರವಾಗಿಯೇ ನೋಡಿ ಆನಂದಿಸ ಬೇಕು.

ಆಂಡ್ರಾಯ್ಡ್ ನಲ್ಲಿ ಕನ್ನಡ ಬರೆಯಲು ಯುಕೀಬೋರ್ಡ್ (UKeyboard)

ಇಮೇಜ್
ಬರಹ ಮತ್ತು ಗೂಗಲ್ ನ ಜೀಮೇಲ್ನಲ್ಲಿ ಟ್ರಾನ್ಸ್ಲಿಟರೇಶನ್ ಬಳಸಿ ಕನ್ನಡ ಟೈಪಿಸಿದವರು ಆಂಡ್ರಾಯ್ಡ್ನಲ್ ಕನ್ನಡ ಟೈಪಿಸಲು UKeyboard ಬಳಸಬಹುದು. ಈ ಲೇಖನವನ್ನು ಕೂಡ ಗೂಗಲ್ ನೆಕ್ಸಸ್ 7 ಬಳಸಿ ಬರೆಯಲಾಗಿದೆ.

ಕೆ.ಎಸ್.ಆರ್.ಟಿ.ಸಿ ಮೊಬೈಲ್ ಅಪ್ಲಿಕೇಶನ್ ನೋಡಿದಿರಾ?

ಇಮೇಜ್
ಆಂಡ್ರಾಯ್ಡ್ ನಲ್ಲಿ ಬುಕ್ ಟಿಕೆಟ್ ಬುಕ್ ಮಾಡ್ಲಿಕ್ಕ್ ಇನ್ಮುಂದೆ ಅಪ್ಲಿಕೇಶನ್ಗಳನ್ನು ಬಳಸ್ತೀರ. ಅದರಲ್ಲಿ ಕೆ.ಎಸ್.ಆರ್.ಟಿ.ಸಿ ಮೊಬೈಲ್ ಅಪ್ಲಿಕೇಶನ್ ಕೂಡ ಒಂದು.

ಇನ್ನೊಬ್ಬ ದ್ರೋಣಾಚಾರ್ಯ - ರಂಗಾಯಣದ ಚಿತ್ರಗಳು

ಇಮೇಜ್
ಇನ್ನೊಬ್ಬ ದ್ರೋಣಾಚಾರ್ಯ , a photo by omshivaprakash on Flickr. ‘ರಂಗಾಯಣ’ ಮೈಸೂರು ಪ್ರತೀ ವರ್ಷ ಆಯೋಜಿಸುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ, ಈ ಬಾರಿ ಮುಂಬೈನ ಮಾಟುಂಗಾ ಕರ್ನಾಟಕ ಸಂಘದ ‘ಕಲಾಭಾರತಿ’ ತಂಡವು, ‘ವನರಂಗ’ದಲ್ಲಿ, ದಿನಾಂಕ 11-01-2013ರಂದು, ಡಾ. ಭರತ್‍ಕುಮಾರ್ ಪೊಲಿಪು’ ಅವರ ನಿರ್ದೇಶನದಲ್ಲಿ ಅಭಿನಯಿಸಿ ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾದ ನಾಟಕ: ‘ಇನ್ನೊಬ್ಬ ದ್ರೋಣಾಚಾರ್ಯ’. ಮೂಲ ಹಿಂದಿ: ದಿ. ಶಂಕರ್ ಶೇಷ್ ಕನ್ನಡಕ್ಕೆ: ಡಾ. ಆರ್. ಲಕ್ಷ್ಮೀನಾರಾಯಣ ಸಂಗೀತ: ಅವಿನಾಶ್ ಕಾಮತ್ ಬೆಳಕು: ಅರುಣ್ ಮೂರ್ತಿ ರಂಗವಿನ್ಯಾಸ: ವಿಶ್ವೇಶ್ವರ ಪರ್ಕಳ ಪ್ರಸಾದನ: ಮೋಹನ್ ಪಾತ್ರವರ್ಗ: ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್, ಕೆ.ವಿ.ಆರ್.ಐತಾಳ್, ಸುರೇಂದ್ರಕುಮಾರ ಮಾರ್ನಾಡ, ಸುಧಾ ಶೆಟ್ಟಿ, ಪ್ರವೀಣ್ ಸುವರ್ಣ ಬೈಕಂಪಾಡಿ, ನಳಿನಾ ಪ್ರಸಾದ್, ಡಾ. ದೇವಾನಂದ್, ಆನಂದರಾಯ ಕಿಣಿ, ವಾಸುದೇವ ಮಾರ್ನಾಡ್, ಭರತ್ ರಾಜ್ ಜೈನ್, ಚಂದ್ರಾ ಆನಂದ ಮುತಾಲಿಕ ಮತ್ತು ಮಾ.ರೋಹಿತ್ ಚಂದ್ರಕಾಂತ್. ಚಿತ್ರಿತರು - ಅವಿನಾಶ್ ಕಾಮತ್ ಮತ್ತಷ್ಟು ಚಿತ್ರಗಳು ಈ ಕೊಂಡಿಯಲ್ಲಿ ಲಭ್ಯವಿವೆ. 

ಹೊಸ ವರ್ಷ 'ವರ್ಣಮಯ'ವಾಗಲಿ

ಇಮೇಜ್
ವರ್ಣಮಯ     ಲೇಖಕ ವಸುಧೇಂದ್ರ ಚಿತ್ರಕಾರ ಪ ಸ ಕುಮಾರ್ ಮುಖಪುಟ ಚಿತ್ರಕಾರ ಶ್ವೇತಾ ಅಡುಕಳ ಶೈಲಿ (ಗಳು) ಸುಲಲಿತ ಪ್ರಬಂಧಗಳು ಪ್ರಕಾಶಕ ಛಂದ ಪುಸ್ತಕ ಪ್ರಕಾಶನ ದಿನಾಂಕ ಡಿಸೆಂಬರ್ ೧೬, ೨೦೧೨ ಪುಟಗಳು ೨೨೬ ಐ ಎಸ್ ಬಿ ಎನ್ ISBN819261132-9 ಹೊಸ ವರ್ಷ ಪುಸ್ತಕವೊಂದನ್ನು ಓದಿ ಮುಗಿಸುವುದರಿಂದಾಗಿ ಪ್ರಾರಂಭವಾಗಿದೆ.ದಿನನಿತ್ಯದ ನಮ್ಮ ಬದುಕಿನ ವರ್ಣಮಯ ಕ್ಷಣಗಳನ್ನು ಪದಗಳಲ್ಲಿ ಕಟ್ಟುತ್ತಾ, ನಮ್ಮದೇ ಪ್ರಪಂಚದ ೭೦ ಎಮ್.ಎಮ್ ಚಿತ್ರವನ್ನು ವಸುಧೇಂದ್ರ ವರ್ಣಮಯದ ಮೂಲಕ ಮಾಡಿಕೊಡುತ್ತಾರೆ. ಹೆಸರಿನ ಮೂಲಕವೇ ತನ್ನ ಇರುವನ್ನು ಸಾರುವ 'ಬಣ್ಣ'ದ ಮೂಲಕ ಪ್ರಾರಂಭವಾಗುವ ಪ್ರಬಂಧಗಳ ಸಾಲುಗಳು, ಇಂಗ್ಲೆಂಡಿನ   ರೈಲಿನ ಒಂದು ಚಿತ್ರಣವನ್ನು ನಮ್ಮ ಮುಂದಿಡುತ್ತವೆ. ವರ್ಣಭೇದದ ಕಹಿಘಟನೆಗಳನ್ನು, ಮುಲಾಜಿಲ್ಲದೆ ನಾವೂ ಅದರಲ್ಲಿ ಭಾಗವಹಿಸುವ ಪರಿಯನ್ನು ಇಲ್ಲಿ ನೋಡಬಹುದು. ಕಾರು ಕೊಂಡ ಒಡೆಯನೊಬ್ಬ ಬೆಂಗಳೂರಿನ ದಟ್ಟ ಟ್ರಾಫಿಕ್ ಅರಣ್ಯದಲ್ಲಿ ದಿನದ ದಣಿವಿನಿಂದ ತಪ್ಪಿಸಿಕೊಳ್ಳಲು ನೇಮಿಸಿಕೊಳ್ಳುವ ನಂಜುಂಡಿಯ ಪ್ರಸಂಗಗಳು, ಕಾರ್‌ಡೆಂಟ್ ಮಾಡಿಕೊಂಡ, ಮೊದಮೊದಲಿಗೆ ಕಾರ್‌ನಿಂದಿಳಿದು ಗುದ್ದಿದವನಿಗೆ ಬಯ್ಯಲೂ ಬಾರದೆ, ಸುಮ್ಮನೆ ಇರಲೂ ಮನಸಾಗದೆ ತಡವರಿಸಿದ, ನಂತರದ ದಿನಗಳಿಗೆ ಒಂದಲ್ಲಾ ಒಂದು ರೀತಿಯಿಂದಾದ ಕಾರ್‌ ಮೇಲಿನ  ಗೆರೆಗಳನ್ನೂ ನೋಡಿದರೂ ನೋಡದಂತೆ ನೆಡೆಯುವ ನನ್ನ ಬದಲಾದ attitude ನೆನೆಯುವಂತೆ ಮಾಡಿದವು. ಜೊತೆಗೆ, ನಮ್ಮದ