ಪೋಸ್ಟ್‌ಗಳು

ಫೆಬ್ರವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಂಗಳೂರಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆ

ಇದೇ ಮಾರ್ಚ್ 1ರ ಶನಿವಾರ ಭಾರತೀಯ ವಿಜ್ಞಾನ ಸಂಸ್ಥೆ (Indian institute of Science / Tata Institute) ಯು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥಾಪಕರ ದಿನಗಳ ಆಚರಣೆಯ ಪ್ರಯುಕ್ತ ಸಾರ್ವಜನಿಕರಿಗೋಸ್ಕರ ವಿಶೇಷವಾಗಿ ಮುಕ್ತವಾಗಿ ತೆರೆದಿರುತ್ತದೆ. ಶಾಲಾ ಕಾಲೇಜುಗಳ ಮಕ್ಕಳಿಗೆಂದು ಬೆಳಿಗ್ಗೆ ಹತ್ತರಿಂದ ಸಂಜೆ ೫ ರ ವರೆಗೆ ಪ್ರತೀ ಡಿಪಾರ್ಟ್ಮೆಂಟಿನಲ್ಲೂ ವಿಶೇಶ ಪ್ರದರ್ಶನ-ವಿವರಣೆ-ಪ್ರಾತಿಕ್ಷಿಕೆ (demos, exhibits, lab tours, live exhibits, popular science lectures etc..) ಗಳಿರುತ್ತವೆ. (ದೊಡ್ಡವರೂ ಬಂದು ನೋಡಲು ಯೋಗ್ಯವಿರುತ್ತದೆ.) This Saturday (1st March 2014), the 104-year-old Indian Institute of Science will open its doors to all for an event that will see research students and faculty of the institution demonstrate the principles of science. The annual event will be held a day before the Founder's Day celebrations at the institution. Last year, a few thousands of people attended the event. ಇವನ್ನೂ ನೋಡಿ (openhoouse'13) : http://timesofindia.indiatimes.com/home/education/news/IISc-to-open-doors-for-students-on-Saturday/articleshow/18721921.cms?  http:

ಗ್ನು/ಲಿನಕ್ಸ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳು ಹಾಗೂ ಕನ್ನಡ

ಹಾವು ಮತ್ತು ಏಣಿ ಆಟ

ಜಯನಗರದ ಸೈಕಲ್ ದಿನದಂದು ಹಾವು ಏಣಿ ಆಡಿದ ಮಕ್ಕಳು:

ಕಂಗ್ಲೀಷ್ ಬರೆಯುವುದನ್ನು ನಿಲ್ಲಿಸಲು ಮತ್ತೊಂದು ಸುಲಭ ಉಪಾಯ

ಇಮೇಜ್
ಸಾಮಾಜಿಕ ಜಾಲತಾಣಗಳಲ್ಲಿ, ಎಸ್.ಎಮ್.ಎಸ್, ಇ-ಮೇಲ್‌ಗಳಲ್ಲಿ ಬರೆಯುವ ಕಂಗ್ಲೀಷ್ (kanglish) ಓದಲು ಹಿಂಸೆಯಾದಾಗ ಅದೆಷ್ಟೇ ಒಳ್ಳೆಯ ಮಾಹಿತಿ ಇದ್ದರೂ, ಅದನ್ನು ಓದದೆ ಮುಂದುವರೆಯುವುದು ನನ್ನ ಅಭ್ಯಾಸ. ಆದರೆ ಇದರಿಂದ ಭಾಷೆಗೆ ಇಂಟರ್‌ನೆಟ್‌ನಲ್ಲಿ ದೊರಕಬೇಕಾದ ಜಾಗವನ್ನೂ ಕಂಗ್ಲೀಷ್ ಬರೆಯುವ ಅನೇಕರು ಕಸಿಯುತ್ತಿರುವುದನ್ನು ಕಂಡಾಗ, ಮತ್ತೆ ಮತ್ತೆ ಕನ್ನಡ ಟೈಪಿಸುವುದು ಹೇಗೆ ಎಂದು ಹೇಳುವುದನ್ನು ಆಗ್ಗಾಗೆ ಮಾಡಿದರೂ, ಅದನ್ನು ಇನ್ನೊಮ್ಮೆ ಬ್ಲಾಗಿಸಲೇ ಬೇಕಿರುವ ಅಗತ್ಯತೆ ಹೆಚ್ಚುತ್ತಿದೆ. ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳು ನೋಡಲು ಸಾಧ್ಯವಾಗದೆ ಇದ್ದಾಗ, ಈ ಕಂಪೆನಿಗಳು ಆಯಾ ಭಾಷೆಗೆ ಬೇಕಿರುವ ಸೌಲಭ್ಯಗಳನ್ನು ತಮ್ಮ ವೆಬ್‌ಸೈಟ್‌ನಿಂದ ಒದಗಿಸಲು ಮುಂದೆ ಬರುವುದಿಲ್ಲ. ಕನ್ನಡದ ಬಳಕೆ ಇಂಟರ್ನೆಟ್ ನಲ್ಲಿ ಹೆಚ್ಚಾಗಲು ನಾವು ಅದನ್ನು ಇಂಗ್ಲೀಷ್‌ನಲ್ಲೇ ಟೈಪಿಸಿದರೆ ಸಾಲದು, ಜೊತೆಗೆ ಎಲ್ಲರು ನೋಡಲು ಇಚ್ಚೆ ಪಡುವ, ನೋಡಲು ಸಾಧ್ಯವಾಗಿಸುವ ಯುನಿಕೋಡ್‌ನಲ್ಲೇ ಟೈಪಿಸಬೇಕು. ಬರಹ, ನುಡಿ ಇತ್ಯಾದಿಗಳ ತಂತ್ರಾಂಶಗಳು ಲಭ್ಯವಿಲ್ಲದ ಪಕ್ಷದಲ್ಲಿ ಗೂಗಲ್ ಕ್ರೋಮ್‌ನ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಎನ್ನುವ ಈ ಕೆಳಗಿನ ಚಿತ್ರದಲ್ಲಿರುವ ಎಕ್ಸ್‌ಟೆನ್ಷನ್ ಬಳಸಿ ಕನ್ನಡ ಅಥವಾ ಇನ್ಯಾವುದೇ ಭಾಷೆಗಳನ್ನು ಟೈಪಿಸಲು ಸಾಧ್ಯವಿದೆ. ಈ ಎಕ್ಸ್‌ಟೆನ್ಷನ್ ವಿಕಿಪೀಡಿಯವನ್ನು ನೆಡೆಸುತ್ತಿರುವ ವಿಕಿಮೀಡಿಯ ಫ

ವಿಡಿಯೋ: ಕನ್ನಡ ವಿಕಿಪೀಡಿಯ ಎಂದರೇನು?

ಇಮೇಜ್
ಈ ಸರಣಿಯ ಇತರೆ ವಿಡಿಯೋಗಳು ಇಲ್ಲಿವೆ .

ಕೆಲವೇ ವಾರಗಳ ಹಿಂದೆ ಪರಿಚಯಿಸಿದ ವಚನ ಸಂಚಯ ತಲುಪಿದ್ದು ಎಲ್ಲಿಗೆ?

ಇಮೇಜ್
ವಚನ ಸಂಚಯ ಜನರಿಗೆ ಪರಿಚಯವಾಗಿ ಇನ್ನೂ ೧೫ದಿನಗಳಾಗಿವೆ ಆದರೆ ಅದು ತಲುಪಿದ್ದು ಎಲ್ಲೆಲ್ಲಿ ಎಂದು ನೋಡಿದಾಗ ಕಣ್ಮುಂದೆ ಬಂದ ಚಿತ್ರಣ ಇಲ್ಲಿದೆ. ದಿನರಾತ್ರಿ ನಮ್ಮ ವೆಬ್‌ಸೈಟ್‌ಗೆ ಹರಿದು ಬಂದ ಟ್ರಾಫಿಕ್ ಕಾಯ್ದ ಗೂಗಲ್ ಅನಲಿಟಿಕ್ಸ್ ಈ ಮೇಲಿನ ಚಿತ್ರಣ ನಮಗೆ ನೀಡಿದೆ. ಪ್ರಜಾವಾಣಿ, ದಟ್ಸ್ ಕನ್ನಡ, ವಾರ್ತಾಭಾರತಿಯಲ್ಲಿ ಬಂದ ಪ್ರಕಟಣೆಗಳು ವಚನ ಸಂಚಯವನ್ನು ಜನರಿಗೆ ತಲುಪಿಸುವ ಮೊದಲ ಹೆಜ್ಜೆಯಲ್ಲಿ ನಮ್ಮ ಕೈ ಹಿಡಿದವು.  ವಚನ ಸಂಚಯದ ಬೀಟಾ ಆವೃತ್ತಿಗೆ ಈ ವಾರ ವಚನಕಾರರನ್ನು ಮತ್ತು ಅವರ ಅಂಕಿತವನ್ನು ಹುಡುಕುವ ವ್ಯವಸ್ಥೆಗಳು ಸೇರಿಕೊಳ್ಳಲಿವೆ. ಕಠಿಣ ಪದಗಳ ಅರ್ಥಗಳನ್ನು ಸೇರಿಸುವ ಕೆಲಸ ನೆಡೆದಿದೆ.  ನೂರಾರು ಸಲಹೆ ಸೂಚನೆಗಳನ್ನು ನಮ್ಮೆಡೆ ಕಳಿಸಿದ ಎಲ್ಲರಿಗೂ ಧನ್ಯವಾದಗಳು. ಮತ್ತಷ್ಟು ಹೊಸತನ್ನು ನಿರೀಕ್ಷಿಸಿ. 

ವಚನ ಸಂಚಯ ನೋಡಿದಿರಾ?

ಇಮೇಜ್
೧೧ ಮತ್ತು ೧೨ನೇ ಶತಮಾನದ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ ಯ ರೂಪ 'ವಚನ ಸಾಹಿತ್ಯದ' ಎಲ್ಲ ವಚನಗಳನ್ನು ಆಸಕ್ತರು, ವಿದ್ಯಾರ್ಥಿಗಳು, ಸಾಹಿತಿಗಳು, ಭಾಷಾತಜ್ಞರು, ಸಂಶೋಧಕರು, ತಂತ್ರಜ್ಞರು ಬಳಸಲು ನೆರವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಮತ್ತು ತಂತ್ರಜ್ಞಾನಗಳ ನೆರವಿನಿಂದ ನಿರ್ಮಿಸಿರುವ   "ವಚನ ಸಂಚಯ"   ತಾಣ ಈಗ ನಿಮ್ಮ ಮುಂದಿದೆ. ಇದನ್ನು ಬಳಸಿ, ಇತರರೊಡನೆ ಹಂಚಿಕೊಳ್ಳಿ. ನಿಮ್ಮೆಲ್ಲ ಪ್ರತಿಕ್ರಿಯೆಗಳಿಗೆ, ಸಲಹೆ ಸೂಚನೆಗಳಿಗೆ ನಾವು ಕಾತುರದಿಂದ ಕಾಯುತ್ತಿದ್ದೇವೆ. ಇದು ಪರೀಕ್ಷಾರ್ಥ (beta) ಆವೃತ್ತಿಯಾಗಿದ್ದು, ಇದರಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು.   ಪ್ರಜಾವಾಣಿಯಲ್ಲಿ ನಮ್ಮ ಈ ಯೋಜನೆ ಮತ್ತು ತಂಡದ ಪರಿಚಯ ಇಲ್ಲಿ ಪ್ರಕಟವಾಗಿದೆ. 

ಅಪರಿವರ್ತನೀಯ ಪರಿವರ್ತಕ!

ಇಮೇಜ್
ಫೆಬ್ರವರಿ ೧, ೨೦೧೪ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಲೇಖನ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪರಿವರ್ತಕ ಅಥವಾ ಕನ್ವರ್ಟರ್ ತಂತ್ರಾಂಶಗಳು ವಿಂಡೋಸ್ ಬಳಕೆದಾರರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವಂತಿದೆ.  ಕನ್ನಡವನ್ನು ಲಿನಕ್ಸ್ ಮತ್ತು ಐ–ಓಎಸ್‌ನಲ್ಲಿ ಬಳಸುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ. ಇದನ್ನೆಲ್ಲಾ ಮರೆತು ಇದನ್ನು ವಿಂಡೋಸ್‌ನಲ್ಲಿಯೇ ಬಳಸಲು ಹೊರಟರೂ ಈ ತಂತ್ರಾಂಶದ ಜೊತೆಗಿರುವ ಸಹಾಯ ಕಡತಗಳು ಯಾವ ಸಹಾಯವನ್ನೂ ಮಾಡುವುದಿಲ್ಲ. ದತ್ತ ನಿರ್ಮಾಣ ಎಂಬ ಆಯ್ಕೆ ಮೊದಲಿಗೆ ಈ ತಂತ್ರಾಂಶ ನೋಡುವವರನ್ನು ತಬ್ಬಿಬ್ಬುಗೊಳಿಸುತ್ತದೆ. GOK (Kuvempu NUDI Baraha) ಎಂಬ ಆಯ್ಕೆ ಬಳಸಿ, ನುಡಿ ಅಥವಾ ‘ಆಸ್ಕಿ’ಯಲ್ಲಿರುವ ಕಡತವನ್ನು ಯೂನಿಕೋಡ್‌ಗೆ ಪರಿವರ್ತಿಸಿ ಕೊಳ್ಳಬಹುದು ಎಂಬುದನ್ನು ಅರಿಯುವಲ್ಲಿ ಸುಸ್ತಾದರೂ, ಅದರ ಫಲಿತಾಂಶ ಮೊದಲ ಟೆಸ್ಟ್‌ನಲ್ಲಿ ಪಾಸ್ ಆಗಿದೆ. ಬ್ರೈಲ್ ಕನ್ವರ್ಟರ್ ಬಳಕೆ, ಅದನ್ನು ಬಳಸುವ ತಂತ್ರಾಂಶ ಇತ್ಯಾದಿಗಳ ಬಗ್ಗೆ ಉಲ್ಲೇಖಗಳಿಲ್ಲ, ಇವನ್ನು ಟೆಸ್ಟ್ ಮಾಡುವ ಅವಕಾಶ ಕೂಡ ಇಲ್ಲ.  ಪರೀಕ್ಷೆಗಾಗಿ ಕೊಟ್ಟಿರುವ ಮಾದರಿಗಳಲ್ಲಿ ಇಂಗ್ಲಿಷ್ ಅಕ್ಷರಗಳು, ಸಂಖ್ಯೆಗಳು ಇತ್ಯಾದಿಗಳನ್ನು ಬಳಸಿಲ್ಲವಾದ್ದರಿಂದ ಅವನ್ನು  ಪರೀಕ್ಷಿಸುವ ಸಾಧ್ಯತೆಗಳೇ ಇಲ್ಲ. ಇನ್ನು ಈ ಎಲ್ಲ ಸಾಫ್ಟ್‌ವೇರ್‌ಗಳನ್ನು ಹುಡುಕಿ ತಂದು ಇನ್‌ಸ್ಟಾಲ್ ಮಾಡಿಕೊಂಡು ಪರೀಕ್ಷೆ ಮಾಡಲು ಯಾರು ಸಿದ್ಧರಿರುತ್ತಾರೆ? ಸಂರಕ್ಷಣ ಕಡತ (

ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು

ಇಮೇಜ್
ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ...  ಜನವರಿ ೨೩, ೨೦೧೪ರಂದು ಅವಧಿಯಲ್ಲಿ ಪ್ರಕಟವಾದ ಲೇಖನ ಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿ‌ಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಸಿ ಬರೆಯುತ್ತಿರುವ ಕನ್ನಡದ ಈ ಲೇಖನವನ್ನು ನಿಮ್ಮಂತೆಯೇ ಯಾರು ಬೇಕಾದರೂ, ವಿಶ್ವದ ಯಾವುದೇ ಮೂಲೆ ಇಂದ, ಯಾವುದೇ ಗಣಕಯಂತ್ರವನ್ನು ಬಳಸಿ ಓದಲು ಸಾಧ್ಯವಿದೆ ಎಂದರ್ಥ ಅಲ್ಲವೇ? ಒಮ್ಮೆ ಕರ್ನಾಟಕ ಸರ್ಕಾರದ ಕೆಲವು ವೆಬ್‌ಸೈಟ್‌ಗಳನ್ನು ತೆರೆದು ನೋಡಿ. ಉದಾ: ಕನ್ನಡ ಸಂಸ್ಕೃತಿ ಇಲಾಖೆಯ ಈ ಒಂದು ಪುಟ http://samskruthi.kar.nic.in/Homepage/Kale-Samskruthi/Kale-Samskruthi.htm . ನನ್ನ ಕಂಪ್ಯೂಟರಿನಲ್ಲಿ ಇದು ಈ ಕೆಳಕಂಡಂತೆ ಕಾಣುತ್ತದೆ. ... ನಿಮ್ಮ ಕಂಪ್ಯೂಟರಿನಲ್ಲೂ ಜಾಲತಾಣ ಚಿತ್ರದಲ್ಲಿರುವಂತೆಯೇ ಕಂಡಿತೆ? ಇಲ್ಲವಾದಲ್ಲಿ ನೀವು ಕನ್ನಡ ಗಣಕ ಪರಿಷತ್ತಿನ ನುಡಿ ತಂತ್ರಾಂಶ ಬಳಸುತ್ತಿದ್ದು, ಅದರ ಜೊತೆಗೆ ಬರುವ ನುಡಿ ಫಾಂಟುಗಳು ನಿಮ್ಮ ಗಣಕದಲ್ಲಿ ಸ್ಥಾಪಿತವಾಗಿದ್ದಲ್ಲಿ, ಮೇಲಿನ ಜಾಲತಾಣದ ಕೊಂಡಿ ತೆರೆದಾಗ ಚಿತ್ರದಲ್ಲಿ ತೋರುವ ಅರ್ಥವಾಗದ ಭಾಷೆ ನಿಮ್ಮ ಪರದೆಯಲ್ಲಿ ಕನ್ನಡವಾಗಿ ಕಂಡಿರಬಹುದು. ಈ ಮೇಲಿನ ಸಾಲುಗಳಲ್ಲಿ ಕನ್ನಡ ಕಂಪ್ಯೂಟರಿನಲ್ಲಿ ಮೂಡಲು ಸಾಧ್ಯವಾಗುತ್ತಿದ್ದ ಕಾಲಕ್ಕೂ,