ಪೋಸ್ಟ್‌ಗಳು

ಫೆಬ್ರವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುಸ್ತಕ: ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ - ವಿಜ್ಞಾನ ತಂತ್ರಜ್ಞಾನ

ಇಮೇಜ್
ಕನ್ನಡ ಸಾಹಿತ್ಯ ಪರಿಷತ್ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಹೊರತರುತ್ತಿರುವ  ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಯ ೧೭ ಸಂಪುಟಗಳಲ್ಲಿ ೧೪ನೆಯದಾದ " ವಿಜ್ಞಾನ ತಂತ್ರಜ್ಞಾನ " ಸಂಪುಟ ಶ್ರವಣ ಬೆಳಗೊಳದಲ್ಲಿ ನೆಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಶ್ರೀ ಟಿ.ಆರ್. ಅನಂತರಾಮು ಸಂಪಾದಕತ್ವದಲ್ಲಿ ಅಚ್ಚುಕಟ್ಟಾಗಿ ಹೊರಬಂದಿರುವ ಈ ಪುಸ್ತಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದು ಈ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುತ್ತಿರುವ ಅನೇಕ ಲೇಖಕರ ಬರಹಗಳನ್ನು ಒಳಗೊಂಡಿದ್ದು, ೭೦೦ ಪುಟಗಳಲ್ಲಿ ೪೦೦ಕ್ಕೂ ಹೆಚ್ಚು ಚಿತ್ರಗಳಿಂದ ಕಣ್ಮನ ಸೆಳೆಯುವಂತಿದೆ. ಚಿತ್ರಗಳು: ಅವಿನಾಶ್ ಬಿ ಬೇಳೂರು ಸುದರ್ಶನ, ಡಾ. ಯು.ಬಿ  ವೈ ಸಿ ಕಮಲ, ಟಿ.ಜಿ ಶ್ರೀನಿಧಿ, ಅವಿನಾಶ್ ಬಿ, ಜಿ.ಎನ್ ನರಸಿಂಹ ಮೂರ್ತಿ ಮುಂತಾದವರ ಲೇಖನಗಳ ಜೊತೆಗೆ, ' ವಿಕಿಪೀಡಿಯ ' ಹಾಗೂ ' ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಚಳುವಳಿ - ಹಿನ್ನೆಲೆ-ಸ್ವರೂಪ-ಪ್ರಸಕ್ತ ಪರಿಸ್ಥಿತಿ ' ಬಗ್ಗೆ ನನದೂ ಎರಡು ಲೇಖನಗಳು ಸ್ವತಂತ್ರ ಸಂಸ್ಕೃತಿಯ (Free Culture) ಇತಿಹಾಸ ಹಾಗೂ ಪ್ರಸಕ್ತ ಪರಿಸ್ಥಿತಿಯ ಮಾಹಿತಿಗಳನ್ನು ಹಂಚಿಕೊಳ್ಳುತ್ತವೆ.  ಚಳುವಳಿಗಳ ಇತಿಹಾಸದ ಜೊತೆಗೆ ಕನ್ನಡ ಮತ್ತು ತಂತ್ರಜ್ಞಾನದ ಅಭಿವೃದ್ದಿಯಲ್ಲಿ ನೆಡೆದಿರುವ ಕೆಲಸಗಳ ಬಗ್ಗೆ ಈ ಲೇಖನಗಳಲ್ಲಿ ಬೆಳಕು ಚೆಲ್ಲಲು ಪ್ರಯತ್ನಿಸಿದ್