ಪೋಸ್ಟ್‌ಗಳು

ಮೇ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಂಡೋಸ್ ೧೦ರ ಡೆವಲಪರ್ವೆ ಪ್ರಿವ್ಯೂನಲ್ಲಿ ಕನ್ನಡ

ಇಮೇಜ್
ಮೈಕ್ರೋಸಾಫ್ಟ್ ಇನ್ನೂ ಬಿಡುಗಡೆ ಮಾಡಬೇಕಿರುವ ವಿಂಡೋಸ್ ೧೦ ರಲ್ಲಿ ಕನ್ನಡ ಹೇಗೆ ಕಾಣುತ್ತೆ ನೋಡಲಿಕ್ಕೆ ಸಾಧ್ಯವಾಯ್ತು.  ವಿಂಡೋಸ್ ೧೦ರ ಡೆವಲಪರ್ವೆ ಪ್ರಿವ್ಯೂನಲ್ಲಿ.

ಕ್ರಿಯೇಟೀವ್ ಕಾಮನ್ಸ್, ಸಮೂಹ ಹಾಗೂ ಪುಸ್ತಕ ಸಂಚಯದ ಜೊತೆಗೆ ನಿರಂಜನರ ಪುಸ್ತಕಗಳು

ಇಮೇಜ್
ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ  ಎಂದು ೨೦೧೪ರ ನವೆಂಬರ್‌ನಲ್ಲಿ ತೇಜಸ್ವಿನಿ ನಿರಂಜನರು ೫೫ ಪುಸ್ತಕಗಳನ್ನು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿಯಲ್ಲಿ ಬಿಡುಗಡೆ ಮಾಡುತ್ತಿರುವ ಕಾರ್ಯಕ್ರಮದ ಬಗ್ಗೆ ಬರೆದಿದ್ದೆ. ನಂತರದ ದಿನಗಳಲ್ಲಿ ನಿರಂಜನರ ಕೃತಿಗಳನ್ನು ಹುಡುಕುವ, ಅವನ್ನು ಡಿಜಿಟೈಸ್ ಮಾಡುವ ಅನೇಕ ಇಮೇಲ್‌ಗಳನ್ನು ಕನ್ನಡ ವಿಕಿಪೀಡಿಯ ಸಮುದಾಯದ ಅನೇಕರ ಮಧ್ಯೆ ಹಂಚಿಕೊಳ್ಳಲಾಗಿತ್ತು. ತೇಜಸ್ವಿನಿಯವರೊಡನೆ ಅವರ ಬಳಿಯಿರುವ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕೆಲಸದ ಬಗ್ಗೆಯೂ ಚಿಂತಿಸಲಾಗುತ್ತಿತ್ತು. ಒಂದೆರೆಡು ವಾರಗಳ ಹಿಂದೆ ಚಿರಸ್ಮರಣೆ ಮತ್ತು ಕಲ್ಯಾಣ ಸ್ವಾಮಿ ಪುಸ್ತಕಗಳನ್ನು ಜಯನಗರದ ಸಪ್ನಬುಕ್ಸ್ ಪುಸ್ತಕಮಳಿಗೆಯಿಂದ ಕೊಂಡು ತಂದಿದ್ದೆ ಕೂಡ.  ಕೆಲವರನ್ನು ನಿರಂಜನರ ಪುಸ್ತಕಗಳ ಪ್ರತಿ ಇದ್ದಲ್ಲಿ ತಿಳಿಸಿ ಎಂದೂ ಕೇಳಿದ್ದೆ.  ನಾಲ್ಕು ದಿನಗಳ ಕೆಳಗೆ ಇಮೇಲ್ ಮಾಡಿದ ಶ್ರೀನಿಧಿ ಟಿ.ಜಿ. ನಮ್ಮ ಪುಸ್ತಕ ಸಂಚಯದಲ್ಲೇ  ಲಭ್ಯವಿದ್ಧ ೬ ನಿರಂಜನರ ಪುಸ್ತಕಗಳ ಬಗ್ಗೆ ತಿಳಿಸಿದ್ದರು. ಈ ಇಮೇಲ್ ನೋಡಿದ ತಕ್ಷಣ "ಕಂಕುಳಲ್ಲೇ ಮಗು ಹಿಡಿದು ಊರೆಲ್ಲ ಹುಡುಕಿದರಂತೆ" ಎನ್ನುವ ಮಾತು ತಕ್ಷಣ ನೆನಪಾಯಿತು. ನಿರಂಜನ ಎಂದು ಪುಸ್ತಕಸಂಚಯದಲ್ಲಿ ಹುಡುಕಿದಾಕ್ಷಣ ಸಿಕ್ಕ ಪುಸ್ತಕಗಳ ಪಟ್ಟಿ ಈ ರೀತಿ ಕಂಡು ಬಂದಿತು. ಈ ಎಲ್ಲ ಪುಸ್ತಕಗಳು ಓಸ್ಮಾನಿಯ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿಯಲ್ಲಿ ಇದ್ದದ್ದು

ಕನ್ನಡ ವಿಕಿಪೀಡಿಯದ ಸಿನೆಮಾ/ಚಲನಚಿತ್ರದ ಇನ್ಫೋಬಾಕ್ಸ್‌ಗೊಂದು ಹೊಸ ನೋಟ

ಇಮೇಜ್
ಕನ್ನಡ ವಿಕಿಪೀಡಿಯದಲ್ಲಿ ಸಿನೆಮಾ/ಚಲನಚಿತ್ರಕ್ಕೆ ಸಂಬಂಧಿಸಿದಂತೆ ಒಟ್ಟಾರೆ ೧೭೦೦ಕ್ಕೂ ಹೆಚ್ಚು ಪುಟಗಳಿವೆ.  ಇದುವರೆಗೆ ಈ ಪುಟಗಳಲ್ಲಿ ಬಳಸುತ್ತಿದ್ದ ಇನ್ಫೋಬಾಕ್ಸ್ ಸಾಮಾನ್ಯ ಟೇಬಲ್/ಕೋಷ್ಠಕದ ಮಾದರಿ ಇದ್ದು, ಮಾಹಿತಿ ಇಲ್ಲದ ಸಾಲುಗಳೂ ಕಾಣಿಸಿಕೊಳ್ಳುತ್ತಿದ್ದವು. ಅದರ ಒಂದು ನೋಟ ನಿಮಗೆ ಹೀಗೆ ಕಂಡಿದ್ದಿರಬಹುದು. ಇನ್ಫೋಬಾಕ್ಸ್‌ಗೊಂದು ಹೊಸ ನೋಟ ಕೊಡುವ ನಿಟ್ಟಿನಲ್ಲಿ ನಾನು Infobox_ಚಲನಚಿತ್ರ ಟೆಂಪ್ಲೇಟನ್ನು ತೆರೆದು ನೋಡಿದಾಗ ಇದಾಗಲೇ ೧೭೦೦ ಕ್ಕೂ ಹೆಚ್ಚು ಪುಟದಲ್ಲಿ ಬಳಸುತ್ತಿರುವುದು ಗಮನಕ್ಕೆ ಬಂತು. ನಾನು ಇಂಗ್ಲೀಷ್ ವಿಕಿಯಿಂದ ಆಮದು ಮಾಡಿದ್ದ Infobox_film ಟೆಂಪ್ಲೇಟನ್ನು ಕನ್ನಡೀಕರಿಸಿದರೂ, ಅದನ್ನು ಮತ್ತೆ ಈ ಎಲ್ಲ ಪುಟಗಳಲ್ಲಿ ಸೇರಿಸಲು ಕೂತಿದ್ದರೆ, ಅದೇ ತಿಂಗಳುಗಟ್ಟಲೆ ಕೆಲಸವಾಗುತ್ತಿತ್ತು. ನೆನ್ನೆ ಹೊಳೆದ ಯೋಚನೆ ಇಂದಾಗಿ, ಹೊಸ ಟೆಂಪ್ಲೇಟನ್ನು ಹಳೆಯ ಟೆಂಪ್ಲೇಟಿನ ಸ್ಥಳದಲ್ಲಿ ಬರುವಂತೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಹ್ಯಾಕ್ ಸಕ್ಷಮವಾಗಿ ಕೆಲಸ ಮಾಡಲು ಆರಂಭಿಸಿತು. ಈಗ ಸಿನೆಮಾದ ಎಲ್ಲ ಪುಟಗಳಲ್ಲಿನ ಇನ್ಪ್ಗೋಬಾಕ್ಸ್‌ಗಳು ಈಗ ಈ ಕೆಳಕಂಡಂತೆ ಕಾಣುತ್ತವೆ.  ಅವಶ್ಯವಿಲ್ಲದ/ಮಾಹಿತಿ ಇಲ್ಲದ ಸಾಲುಗಳು ಕಂಡುಬರುವುದಿಲ್ಲ. ಈ ಹಿಂದಿನಂತೆ ಟೆಂಪ್ಲೇಟನ್ನು ಪುಟಕ್ಕೆ ಸೇರಿಸಿದರೂ, ಟೆಂಪ್ಲೇಟು ಕೆಲಸ ಮಾಡುತ್ತದೆ. ಅಥವಾ ಈ ಕೆಳಕಂಡಂತೆ ಇಂಗ್ಲೀಷ್ ಟೆಂಪ್ಲೇಟು ( Template:Infobox_film ) ಮಾದರಿಯಲ್ಲೇ ಇನ್ಫೋಬಾಕ