ಪೋಸ್ಟ್‌ಗಳು

ಜುಲೈ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು - ನೆಟ್ ನ್ಯೂಟ್ರಾಲಿಟಿ

ಇಮೇಜ್
7/25/2015 ರಂದು ಪ್ರಜಾವಾಣಿಯಲ್ಲಿ ನೆಟ್ ನ್ಯೂಟ್ರಾಲಿಟಿ ಬಗ್ಗೆ ಪ್ರಕಟವಾದ ನನ್ನ ಲೇಖನ ವರ್ಷದ ಮೊದಲ ಭಾಗದಿಂದಲೂ ಭಾರತದ ಇಂಟರ್ನೆಟ್ ಹಾಗೂ ಟೆಲಿಕಾಂ ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ವಿಷಯ ‘ ನೆಟ್ ನ್ಯೂಟ್ರಾಲಿಟಿ ’. ಸಾಮಾಜಿಕ ಜಾಲತಾಣಗಳು ನಮ್ಮ ದಿನನಿತ್ಯದ ಬದುಕಿನ ಅದೆಷ್ಟೋ ಹೋರಾಟಗಳನ್ನು ವಾಸ್ತವಿಕ ಜಗತ್ತಿಗೆ ಕೊಂಡೊಯ್ದು ಹೊಸ ಆಯಾಮಗಳನ್ನು ಸೃಷ್ಟಿಸುತ್ತಿರುವಾಗ, ನೆಟ್ ನ್ಯೂಟ್ರಾಲಿಟಿ ಎಂಬ ಇಂಟರ್ನೆಟ್ ಜಗತ್ತಿನ ಬಳಕೆದಾರನ ಸ್ವಾತಂತ್ರ್ಯ ಮಹತ್ವ ಪಡೆದದ್ದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಈ ಹೋರಾಟ ಸಾಮಾನ್ಯನಿಗೆ ಅರ್ಥವಾಗಲು ಬಹಳ ಸಮಯವೇ ಹಿಡಿಯಿತು. ಅದನ್ನು ಅರ್ಥ ಮಾಡಿಸುವುದರಲ್ಲಿ ತಂತ್ರಜ್ಞಾನ ಪರಿಣತರಿಂದ ಹಿಡಿದು, ಜಾಗೃತ ನೆಟ್ಟಿಜನ್‌ಗಳು ಇಂಟರ್ನೆಟ್‌ನಲ್ಲಿ ಸಾಧ್ಯವಿರುವ ಎಲ್ಲ ಆಯಾಮಗಳನ್ನೂ ಬಳಸಿಕೊಂಡರು. ಚಿತ್ರ ಕೃಪೆ: ಪ್ರಜಾವಾಣಿ ನೆಟ್ ನ್ಯೂಟ್ರಾಲಿಟಿಯ ಬಗ್ಗೆ ತಿಳಿಯಲು ನಾವು, ಮುಕ್ತ ಮಾಹಿತಿ ವಿನಿಮಯಕ್ಕೆ ಮತ್ತು ಸಂವಹನಕ್ಕೆ ಇಂಟರ್ನೆಟ್ ದಾರಿಯಾಗಿರುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಜಗತ್ತಿನ ಯಾವುದೇ ಒಂದು ಗಣಕಯಂತ್ರದಿಂದ ಮತ್ತೊಂದು ಗಣಕಯಂತ್ರಕ್ಕೆ ಮುಕ್ತ ಮಾಹಿತಿ ರವಾನೆಗೆಂದೇ ಪ್ರಾರಂಭವಾದ ಇಂಟರ್ನೆಟ್ ಬಳಕೆದಾರನನ್ನು ತಲುಪುವುದು ಅದರ ಸೇವೆಯನ್ನು ದೊರಕಿಸಿಕೊಡುವ ಸೇವಾದಾತರ ಮೂಲಕ. ಮಾಸಿಕ ಅಥವಾ ಇಂತಿಷ್ಟು ಡೇಟಾ ಸೇವೆಗೆ ನಿಗದಿತ ದರವನ್ನು ಪಾವತಿ ಮಾಡಿ ಇಂಟರ್ನೆಟ್ ಪಡೆಯ