ಪೋಸ್ಟ್‌ಗಳು

ಡಿಸೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೀದರ್ ಫೋಟೋಗ್ರಫಿ ಸೊಸೈಟಿಯ ಜೊತೆ ವಿಕಿಪೀಡಿಯ ಸುತ್ತ

ಇಮೇಜ್
ವಾರಾಂತ್ಯದಲ್ಲಿ ಬೀದರ್‌ನಲ್ಲಿದ್ದಾಗ ಅಲ್ಲಿನ ಯುವ ಫೋಟೋಗ್ರಫಿ ಸೊಸೈಟಿಯ ಸದಸ್ಯರೊಡನೆ ಮಾತನಾಡುವ ಅವಕಾಶ ಸಿಕ್ಕಿತು. ಅವರಲ್ಲಿ ಕೆಲವರು ಈಗಾಗಲೇ ವಿಕಿಪೀಡಿಯ, ವಿಕಿಮೀಡಿಯ ಕಾಮನ್ಸ್‌ಗೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವುದನ್ನು ಕೇಳಿ ಖುಷಿಯೂ ಆಯಿತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಬೀದರ್ ವಿಕಿಪೀಡಿಯ ಗುಂಪಿನಲ್ಲಿ ಒಂದಾಗುವಂತೆ ಹೇಳುತ್ತಿದ್ದಾಗ ರಿಷಿಕೇಷ್ ಬಹಾದ್ದೂರ್ ದೇಸಾಯಿ ಅವರು ತೆಗೆದ ಚಿತ್ರ. ಬೀದರ್ ಇತಿಹಾಸ, ಕಲೆ, ಪರಿಸರ ಇತ್ಯಾದಿಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ವಿಕಿ ಕಾಮನ್ಸ್‌ನಲ್ಲಿ ಈ ತಂಡ ಇನ್ಮುಂದೆ ತಮ್ಮ ಕೊಡುಗೆಗಳನ್ನು ನೀಡಲಿದೆ. ಪ್ರಜಾವಾಣಿಯಲ್ಲಿ ಭಾನುವಾರ ೬, ಡಿಸೆಂಬರ್ ೨೦೧೫ ರಂದು ಪ್ರಕಟಗೊಂಡ ಲೇಖನ ‘ಕನ್ನಡದಲ್ಲೇ ಮಾಹಿತಿ ಹಂಚಿಕೊಳ್ಳಿ’ Sun, 12/06/2015 - 15:29 ಬೀದರ್: ಪ್ರತಿಯೊಬ್ಬರು ಇಂದು ತುರ್ತು ಹಾಗೂ ಅಗತ್ಯ ಮಾಹಿತಿಗೆ ವಿಕಿಪಿಡಿಯಾದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭಿಸುವಂತಾಗಲು ಸ್ಥಳೀಯರು ವಿಕಿಪಿಡಿಯಾದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ವಿಕಿಪಿಡಿಯಾದ ಸಂಚಾಲಕ ಓಂಶಿವಪ್ರಕಾಶ ಹೇಳಿದರು. ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹಿಂದಿ ಹಾಗೂ ಮಳಿಯಾಳಿಯಲ್ಲಿ ಮಾತ್ರ ಹೆಚ್ಚು ಮಾಹಿತಿ ಲಭ್ಯ ಇದೆ. ಕನ್ನಡದ