ಪೋಸ್ಟ್‌ಗಳು

ಸೆಪ್ಟೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಜಿಟಲೀಕರಣ ಮತ್ತು ಓ. ಸಿ. ಆರ್ - ಕನ್ನಡ ವಿಜ್ಞಾನ ಸಾಹಿತ್ಯದ ಸಾಧ್ಯತೆಗಳು

ಇಮೇಜ್
ಸೆಂಪ್ಟೆಂಬರ್ ೧೭ , ೨೦೧೯‍   ಕುತೂಹಲಿ - ಸುದ್ಧಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ‍ (ಸಂಚಿಕೆ ೧ | ಸಂಪುಟ ೧ | ಸೆಪ್ಟೆಂಬರ್ ೨೦೧೯) ಕನ್ನಡದಲ್ಲಿ ಪ್ರಕಟವಾಗಿರುವ ಹಳೆಯ ಪತ್ರಿಕೆಗಳು , ಪುಸ್ತಕಗಳು , ಈಗಾಗಲೇ ಅನ್ಲೈನ್ ಇರುವ ಪುಸ್ತಕಗಳಲ್ಲಿರುವ ಅಮೂಲ್ಯ ಮಾಹಿತಿಗಳನ್ನು ಗೂಗಲ್ ಸರ್ಚ್ ಮಾದರಿಯಲ್ಲೇ ಹುಡುಕಿ ತೆಗೆಯಲು ಸಾಧ್ಯವಾದರೆ ಹೇಗಿರುತ್ತದೆ ಒಮ್ಮೆ ಊಹಿಸಿಕೊಳ್ಳಿ . ಇದನ್ನು ಕೇವಲ ಊಹೆಯಷ್ಟೇ ಆಗಿ ಉಳಿದಿಲ್ಲ.   ಇಂದು ನೀವಿದನ್ನು ತಾಂತ್ರಿಕವಾಗಿ ಬಳಸಿ ನೋಡಬಹುದು ಕೂಡ . ಇದನ್ನು ಸಾಧ್ಯವಾಗಿಸಿರುವುದೇ   ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್ ಅಥವಾ ಓ . ಸಿ . ಆರ್ (‍Optical Character Recognition / OCR) ತಂತ್ರಜ್ಞಾನ .  ಚಿತ್ರರೂಪದಲ್ಲಿರುವ ಅಕ್ಷರಗಳ ಗುಣಲಕ್ಷಣಗಳನ್ನು ‍ ಗುರುತಿಸಿ , ಅವುಗಳನ್ನು ಆಯಾ ಭಾಷೆಯ ಯುನಿಕೋಡ್ ಅಕ್ಷರಗಳಲ್ಲಿ ಮರುರೂಪಿಸುವುದೇ ಈ ತಂತ್ರಜ್ಞಾನದ ಮುಖ್ಯ ಕೆಲಸ . ‍ ಕನ್ನಡಕ್ಕೆ ಈ ತಂತ್ರಜ್ಞಾನವನ್ನು ಒದಗಿಸಿಕೊಡವಲ್ಲಿ ಮುಂಚೂಣಿಯಲ್ಲಿರುವುದು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶವಾಗಿರುವ ಟೆಸೆರಾಕ್ಟ್ (Tesseract).  ಟೆಸೆರಾಕ್ಟ್ ಯೋಜನಾ ಪುಟ ಇಲ್ಲಿದೆ - https://github.com/tesseract-ocr/tesseract ‍. ಭಾರತೀಯ ವಿಜ್ಞಾನ ಸಂಸ್ಥೆ, ಕೇಂದ್ರ ಸರಕಾರದ ಸಿ-ಡ್ಯಾಕ್‌ ಸಂಸ್ಥೆಗಳೂ ಈ ನಿಟ್ಟಿನ