ಪೋಸ್ಟ್‌ಗಳು

ಅಕ್ಟೋಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಏರ್ಪೋರ್ಟ್

ನಡುರಾತ್ರಿಯೂ ಸೂರ್ಯನ ನಾಚಿಸುವ ಬೆಳ್ಳಂಬೆಳಕು ಕತ್ತಲೆಯನ್ನೂ ಕತ್ತಲೆಯಲ್ಲಿ ಹಗಲನ್ನೂ ಕಳೆದವರ , ಕಳೆದುಕೊಂಡವರ ತವರಿದು ಗಜಿಬಿಜಿ ಗಜಿಬಿಜಿ ಗೊಣಗುವ ಗೂಡಿದು ಸುಸ್ತಾಗಿ ಬೇಸ್ತು ಬಿದ್ದವಗೆ , ಚಿಂತೆ ಇಲ್ಲದವಗೆ , ಕೊಕ್ಕರಿಸಿ ಕೂರಬಲ್ಲವಗೆ , ಹಕ್ಕಿಯಂತೆ ಹಾರುವ   ಕನಸು ಕಂಡವಗೆ ತಂಗುದಾಣವಿದು ಅದೋ ಹಕ್ಕಿ ಹಾರುತಿದೆ ಎಂದು ಹೇಳುವರಿಲ್ಲ , ಇದು ಶಾಂತ ನಿಲ್ದಾಣ ... ಎಚ್ಚರದಿಂದೇರುವುದು ಉಚಿತ ವ್ಯವಧಾನ   ‍

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍

ಬ್ರಹ್ಮರಾಕ್ಷಸನ ಸಾವಿರ ಕಣ್ಣುಗಳಂತೆ‍ ನ‍ಗರವಿಡೀ ಹರಡಿಹವು‍ ಮತಭೇದವಿಲ್ಲ ಜೋಕೆ,ಎಚ್ಚರ-ತಪ್ಪಿದಿರೋ ‍ ಬಿದ್ದೀರಿ - ಆ ಕಪ್ಪು ರಂಧ್ರಗಳಲ್ಲಿ ದಸರೆಯ ಆನೆಗಳು ಅಲುಗಿದರೂ ‍ಸಹಿಸಬಹುದೇನೋ ‍ಇಲ್ಲಿ ದಿನವೂ ಮೈ ಜುಮ್ಮೆನಿಸುವ ‍‌ಸ್ವರ್ಗ ಅಲ್ಲಲ್ಲ‍... ನರಕದ ಸವಾರಿ ‍ ಆ ಧರ್ಮರಾಯ‍ನ ಸವಾರಿಯಾದರೂ ‍ಸೇರೀತು ದಡವ - (ಸ್ವರ್ಗಕ್ಕೋ - ನರಕಕ್ಕೋ) ತೆರಿಗೆ ಪಾವ‍‌ತಿಸಿದರೂ‍ ಬಡವನಿಗೆಲ್ಲಿದೆ‍ ‍ ರ‍ಹದಾರಿಯ ತೆರವು ‍ ನಮ್ಮ ನಮ್ಮಲ್ಲಿಯೇ ಕೋಪ ತಾಪದ ‍‌ನೆವವು - ಬೈದು‍, ಬೈಸಿಕೊಂಡು ಮೂರನೇ ಕಣ್ಣು ತೆಗೆದು‍ ‍‍ಶಾಪ ಹಾಕಿ ನೆಡೆವುದಷ್ಟೇ.... ಮಳೆರಾಯನೂ ನಗುವನು ಪ್ರತಿವರ್ಷ‍ ‍ಕಪ್ಪು - ಬಿಳುಪು - ಬೂದು ‍ ಮತ್ತೆ ಕಂಡಿದ್ದು, ಮಿಂದದ್ದು ‍ಉಳಿದದ್ದೂ ಮ‍ಣ್ಣು... ಹೇಳ ಬೇಕಷ್ಟೇ.... ‍ನಮ್ಮೂರ ರಸ್ತೆಗಳು ‍ಚಂದ್ರ - ಮಂಗಳ ಮುಂದೆ ಬೇರೆ ಲೋಕಕ್ಕೂ ‍ಪಯಣದ ಪ್ರಾರಂಭ ಇಲ್ಲಿಂದಲೇ...

ಭಾಷೆ ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮಾತನಾಡಲಾಗದ ಎಷ್ಟೋ ವಿಷಯಗಳನ್ನು ತನ್ನದೇ ಅಕ್ಷರಗಳಲ್ಲಿ ಬರೆಯುವ, ಉಸುರುವ ಗಟ್ಟಿಯಾಗಿ ಉಚ್ಚರಿಸುವ ಅನುಭವಿಸುವ ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು ‍ಕಾರ್ಪೋರೇಟ್ ಜಗತ್ತಿನ ಅಂಕುಶಕ್ಕೆ ಬಿದ್ದು ಎತ್ತರದ ದನಿಯಲ್ಲಿ ಮಾತನಾಡಲಾಗದ ಸ್ಥಿತಿ ತಲುಪಿ - ಅದನ್ನೆದಿರಿಸಲು ಉತ್ತರವಾಗಬಲ್ಲದು ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು ಮೂರು ಗೋಡೆಗಳ ಮಧ್ಯದ ಹಾಗೂ ಸ್ವಚ್ಚಂದ ಸ್ವಾತಂತ್ರ್ಯದ ಬದುಕು - ಸಾಮಾಜಿಕವಾಗಿ ಖಾಸಗಿ ಅಲ್ಲವೇ ಅಲ್ಲ - ಅಲ್ಲಿಯೂ ಹಿಂತಿರುಗಿ ಉತ್ತರಿಸಲು ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು ವಿಶ್ವಕ್ಕೆಲ್ಲ ತಿಳಿಯುವಂತೆ ಬೈದರೂ ತಪ್ಪು, ಉಸಿರೆತ್ತದಿದ್ದರೆ ಉದರ ದಹಿಸಿ ಕುಸಿಯುವೆ ಮನದಲ್ಲಿರುವುದನ್ನೆಲ್ಲಾ ಹೊರ ಹಾಕುವ ಕಸುವು ಭಾಷೆ  - ಆ ಸ್ವಾತಂತ್ರ್ಯವನ್ನು ನೀಡಬಲ್ಲದು ನಿರಂಕುಶಮತಿಗಳಿಗೆ, ದಬ್ಬಾಳಿಕೆ, ದೌರ್ಜನ್ಯದ ಪರಮಾವಧಿಗೆ, ತುಳಿಯುವ, ಹಳಿಯುವ, ಬೆಳಕು ಮತ್ತು  ಕಸಿಯುವ ಹುನ್ನಾರಗಳಿಗೆ ಉತ್ತರ ನೀಡಲು ಭಾಷೆ  - ಆ ಸ್ವಾತಂತ್ರ್ಯವನ್ನು ನೀಡಬಲ್ಲದು