ಭಾಷೆ ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮಾತನಾಡಲಾಗದ ಎಷ್ಟೋ ವಿಷಯಗಳನ್ನು
ತನ್ನದೇ ಅಕ್ಷರಗಳಲ್ಲಿ ಬರೆಯುವ, ಉಸುರುವ
ಗಟ್ಟಿಯಾಗಿ ಉಚ್ಚರಿಸುವ ಅನುಭವಿಸುವ
ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು


‍ಕಾರ್ಪೋರೇಟ್ ಜಗತ್ತಿನ ಅಂಕುಶಕ್ಕೆ ಬಿದ್ದು
ಎತ್ತರದ ದನಿಯಲ್ಲಿ ಮಾತನಾಡಲಾಗದ ಸ್ಥಿತಿ
ತಲುಪಿ - ಅದನ್ನೆದಿರಿಸಲು ಉತ್ತರವಾಗಬಲ್ಲದು
ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಮೂರು ಗೋಡೆಗಳ ಮಧ್ಯದ ಹಾಗೂ ಸ್ವಚ್ಚಂದ
ಸ್ವಾತಂತ್ರ್ಯದ ಬದುಕು - ಸಾಮಾಜಿಕವಾಗಿ ಖಾಸಗಿ
ಅಲ್ಲವೇ ಅಲ್ಲ - ಅಲ್ಲಿಯೂ ಹಿಂತಿರುಗಿ ಉತ್ತರಿಸಲು
ಭಾಷೆ - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ವಿಶ್ವಕ್ಕೆಲ್ಲ ತಿಳಿಯುವಂತೆ ಬೈದರೂ ತಪ್ಪು,
ಉಸಿರೆತ್ತದಿದ್ದರೆ ಉದರ ದಹಿಸಿ ಕುಸಿಯುವೆ
ಮನದಲ್ಲಿರುವುದನ್ನೆಲ್ಲಾ ಹೊರ ಹಾಕುವ ಕಸುವು
ಭಾಷೆ  - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ನಿರಂಕುಶಮತಿಗಳಿಗೆ, ದಬ್ಬಾಳಿಕೆ, ದೌರ್ಜನ್ಯದ
ಪರಮಾವಧಿಗೆ, ತುಳಿಯುವ, ಹಳಿಯುವ,
ಬೆಳಕು ಮತ್ತು  ಕಸಿಯುವ ಹುನ್ನಾರಗಳಿಗೆ ಉತ್ತರ ನೀಡಲು
ಭಾಷೆ  - ಆ ಸ್ವಾತಂತ್ರ್ಯವನ್ನು ನೀಡಬಲ್ಲದು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ