ಪೋಸ್ಟ್‌ಗಳು

ನವೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೃತಿ‍ಚೌರ್ಯದ ಭಯ

ಕೃತಿ‍ಚೌರ್ಯದ ಭಯ ಅಂದು ಇರಲಿಲ್ಲ ಗತಕಾಲವ, ಕವಿ ಕೋಗಿಲೆಗಳ‍ ಕಾಡಲಿಲ್ಲ... ಡಿಜಿಟಲ್‍ ‌ಜಗತ್ತಿನಲ್ಲಿ ಡಿಜಿಟೈಸ್ ಮಾಡದೆ ‍ಹೆದರುವರಲ್ಲ... ‍ಡಿಜಿಟಲ್ ಫೂಟ್ ಪ್ರಿಂಟ್, ಅಂದಿನ ‍ತಾಳೆಗರಿ, ‍ಶಾಸನಗಳಿ‍ಗಿಂತ ಕಡಿಮೆ ಏನಲ್ಲ ಬ್ಲಾಕ್ ಚೈನ್ - ಪ್ರತಿ ಅಕ್ಷರಕ್ಕೂ ನಿಮ್ಮ ಹೆಸರಿಗೂ ‍ಕುಣಿಕೆ ಹಾಕಿ ಭದ್ರ ಪಡಿಸಬಲ್ಲದು ‍ಕ್ರಿಯೇ‌ಟೀವ್ ಕಾಮನ್ಸ್ - ಸಾಮಾನ್ಯನ ಕ್ರಿಯಾಶೀಲತೆಗೂ ‍ಉಲ್ಲೇಖದ ಮಹತ್ವ ಕೊ‍ಡಿಸಬಲ್ಲದು ‍ಹೆದರದೇ ಸರಿಬೆಸ ಹೊಂದಿಸಿ ಲೆಕ್ಕ ಹಾಕುವ ‍ಗಣಕದ ಕಿಸೆಗೋ ಮೆದುಳಿಗೋ ಊಡಿಸಿ ‍ಇಪ್ಪತ್ತೊಂದನೆಯ ಶತಮಾನದಲ್ಲಿ ನಿಮ್ಮದೊಂದಿಷ್ಟು ‍ಇತಿಹಾಸ ಉಳಿಸಿ.. ‍ ಫೇಸ್‌ಬುಕ್, ಟ್ವಿಟರ್‌ನಿಂದಾಚೆಗೆ...

‍ವಾಕಿಂಗ್

ಓ‍ಮಿಷ: ಅಪ್ಪಾ, ವಾಕಿಂಗ್... ‍ನಾನು: ಸರಿ, ನೆಡೆಯಮ್ಮ... ‍ಓ‍ಮಿಷ: ಸರಿ, ನನ್ನ ಎತ್ಕೋ... ‍ನಾನು: ವಾಕಿಂಗ್ ಅಲ್ವಾ? ‍ಓ‍ಮಿಷ: ಹೌದು, ಅದಕ್ಕೇ.. ಎತ್ಕೋ ‍ ಉ‍ಷಪ್ಪಾ..‍.

ತಾಸು.. ದಯೆ

ದಿ‍ನಕ್ಕೆ ಇಪ್ಪತ್ತನಾಲ್ಕೇ‍ ತಾಸು‍ ತುಸು ಹೊತ್ತು ನಿದ್ದೆ, ‍ಕಾಫಿ ‍(ಟೀ), ಬೂಸ್ಟು, ಹಾರ್ಲಿಕ್ಸು ‍ಇಲ್ಲವಾದಲ್ಲಿ‍ ಬಾದಾಮಿ ಹಾಲು ‍ದಿನದೂಗಿಸುವ ತಳಮಳದ ಮಧ್ಯೆ ‍ಕೆಲಸ - ಪ್ರಶ್ನೆಗಳು‍ ‍ಓ‍ಮಿಷ: ಅಪ್ಪಾ, ಕೆಲಸಕ್ಕೋದ್ರೆ ಕಾಸು ಕೊಡತಾರಲ್ಲಾ? ಅದರಿಂದ ಮ‍ಮ್ಮಮ್ ತಗೋ ಬಹುದು, ಆಟದ ಸಾಮಾನ್ ತಗೋ‍ಬೋದು ‍ಸುತ್ತಾಡ್ಬೋದು... ನಾನು ಸ್ಕೂಲಿಗೆ ಹೋಗ್ತೀನಿ.. ಅವರಿಗೂ ಕಾಸ್ ಕೊಡ್ಬೇಕು ಅಲ್ವಾ ಅಪ್ಪಾ? ...‍‍ ಹಗಲು‍ ಸಂಜೆ ಎನ್ನದೇ ದೀನ ದೃಷ್ಟಿಯ ಜೊತೆಗೆ ‍ಸಹಾಯ ಕೇಳುವ ಆ ಕೈಗಳು... ಕೆಲವೊ‍ಮ್ಮೆ ಒಂದೇ ಒಂದು ‍ಓ‍ಮಿಷ: ಅಪ್ಪಾ, ಅಜ್ಜಿ ಪಾಪ... ಮಮ್ಮಮ್ ಬೇಕಂತೆ ಕಾಸು ಕೊಡೋಣ್ವಾ? ‍ತಾತ, ಪಾಪ ಏನಾದ್ರೂ ಕೊಡಲಾ? ‍... ಆ ದಯೆ - ಮುಗ್ದತೆಯ ಆಲೋಚನೆಯ ಸುತ್ತ ತಿರುಗಿ ಈ‍ ಕಾರ್ಪೋರೇಟ್ ಜಗತ್ತಿನ ಸಿಮೆಂಟು ಗೋಡೆಗಳ ಮಧ್ಯೆ ‍ಎಲ್ಲವನ್ನೂ ಕೇಳಿಸಿಕೊಳ್ಳುವ ಅದೃಶ್ಯ ಕಿವಿಯಾಯಿತಲ್ಲ... ‍ಕೆಲಸಕ್ಕೆ ಮಾತ್ರ ಬಿಡುವು, ಸಮಯ‍, ಕಡೆಗೆ ಮಾ.. ಮಾ.. ಯಾವುದೂ ಇಲ್ಲ..