ಪೋಸ್ಟ್‌ಗಳು

ಡಿಸೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡದ ಡಿಜಿಟಲ್ ಜಗತ್ತು - ವಿಜಯ ಕರ್ನಾಟಕದ ಕನ್ನಡ ಹಬ್ಬದಲ್ಲಿ ನನ್ನ ಪ್ರಾಸ್ತಾವಿಕ ಭಾಷಣ

ಇಮೇಜ್
‍ ಓಂಶಿವಪ್ರಕಾಶ್ | ೭ ಡಿಸೆಂಬರ್ ೨೦೧೯‍ | ವಿಕ ಕನ್ನಡ ಹಬ್ಬ ಡಿಜಿಟಲ್ ಜಗತ್ತು - ಭಾಷೆ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುವನ್ನು ವೇಗ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ‍ಕನ್ನಡವೂ ಈ ವಿಚಾರದಲ್ಲಿ ಹೊಸ ಧನಾತ್ಮಕ ಬೆಳವಣಿಗೆಗಳನ್ನು ಇತ್ತೀಚಿನ ಕಾಣುತ್ತಿರುವುದನ್ನು ನೀವೆಲ್ಲಾ ಗಮನಿಸುತ್ತಿದ್ದೀರಿ.  ಕನ್ನಡ ಡಿಜಿಟಲೀಕರಣದ ಕ್ರಾಂತಿಗೆ ಹೊಸ ಪ್ರಯೋಗಗಳನ್ನು, ವಿಚಾರಗಳನ್ನು, ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ.  ಕನ್ನಡದ ಡಿಜಿಟಲ್ ಜಗತ್ತು ಇಂಟರ್ನೆಟ್ ವ್ಯಾಪ್ತಿಗೆ ಒಳಪಡುವ ಹಳ್ಳಿಗರ, ನಗರವಾಸಿಗಳ, ‍ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹೊರನಾಡ ಕನ್ನಡಿಗರ ಕಲರವ - ೧೪೦ ಪದಗಳ ಟ್ವಿಟರ್ನಿಂದ, ಫೇಸ್‌ಬುಕ್ ಸಾಹಿತ್ಯ, ಸಾಹಿತ್ಯ ಪ್ರಕಟಣೆ, ಕಲೆ, ಇತಿಹಾಸ, ಸಂಸ್ಕೃತಿಯ ಜಾಗತಿಕ ಅನಾವರಣಕ್ಕೆ, ಸಾಮಾಜಿಕ ಚಳುವಳಿಗೆ, ಮುಕ್ತ ಜ್ಞಾನ, ಡಿಜಿಟಲ್ ಉಳಿವಿಗೆ ಹೊಸ ಡಿಜಿಟಲ್ ಹೆಜ್ಜೆಗುರುತನ್ನು (ಡಿಜಿಟಲ್ ಫುಟ್‌ಪ್ರಿಂಟ್) ಮೂಡಿಸುತ್ತಿವೆ. ಈ ಹೆಜ್ಜೆ ಗುರುತಿನ ಜೊತೆಗೆ, ಅದನ್ನು ಆವರಿಸುವ ಡಿಜಿಟಲ್ ಕರಿನೆರಳಿನ ಇರುವು ಕೂಡ ಸಾಮಾನ್ಯವೇ ಎಂಬಂತೆ ಜೊತೆಗಿದೆ.  ಕನ್ನಡವನ್ನು ಕನ್ನಡದಲ್ಲೇ ಟೈಪಿಸುವ, ಡಿಟಿಪಿ, ಸ್ಕ್ಯಾನ್ ಮಾಡಿ ಪುಸ್ತಕಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವುದು, ಜಾಲತಾಣಗಳನ್ನು (ವೆಬ್‌ಸೈಟ್‌ಗಳನ್ನು) ಕನ್ನಡದಲ್ಲಿ ಸಿಗುವಂತೆ ಮಾಡುವುದು ಇಂದು ಸಾಮಾನ್ಯ. ಆದರೆ ಇಷ್ಟೇ  ಡಿಜಿಟಲೀಕರಣವೇ ಎಂದರೆ, ಇದು ಪ್ರಾರ