ಗುಟ್ಟು - ಗಮ್ಮತ್ತು

ಆರಿಸಿ ತೂರಿಸಿ ಆಯ್ದು
ಹರಡಿ ಜರಡಿಯ ಹಿಡಿದು
ಒಪ್ಪ ಮಾಡಿ ಕಾಸಿ ಕಣಜವ
ತುಂಬಿಸಿ, ಕಾದು ಕೊಪ್ಪರಿಗೆ
ಬರಿದಾಗಿಸದೆ ಹೊಟ್ಟೆ ಬಿರಿವಂತೆ
ತಿಂದು, ಮತ್ತಷ್ಟು ಹಂಚಿ
ಇಹದ ಇರುವನ್ನು ಆಯ್ದು
ಆಸ್ವಾದಿಸಿ ನಿಟ್ಟುಸಿರ ಬಟ್ಟರೆ
ಜೀವ ಜಗಮೆಚ್ಚಿ ಅಹುದಹುದೆನ್ನುವುದು...
ರಟ್ಟೆ ಗಟ್ಟಿಗೊಳಿಸುವ ಕಸರತ್ತು
ಕಲಿತು ತಾಲೀಮು ನೆಡೆಸುವುದೇ
ಗುಟ್ಟು - ಗಮ್ಮತ್ತು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ