ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಇಮೇಜ್
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸುತ್ತಿರುವ ‍ಕನ್ನಡ ಜಾಗೃತಿ ಪತ್ರಿಕೆಗೆ ನವೆಂಬರ್ ೨೦೨೦ ರಲ್ಲಿ ಬರೆದ ಲೇಖನ: ‍ ಡಿಜಿಟಲ್ ಪ್ರತಿ ಇಲ್ಲಿದೆ. ಕನ್ನಡ ಭಾಷೆಯ ಸುತ್ತಲಿನ ಪ್ರೀತಿಯ ಅಭಿವ್ಯಕ್ತಿಗೆ ಮೊದಲ ಕೊಂಡಿ ಪುಸ್ತಕ. ಅವುಗಳಲ್ಲಿ ಅಡಗಿರುವ ಸಾಹಿತ್ಯ, ಅದನ್ನು ಸೃಷ್ಟಿಸಿದ ಕನ್ನಡದ ಲೇಖಕ/ಲೇಖಕಿಯರು ಮತ್ತು ಅವರನ್ನು ಕನ್ನಡ ಓದುಗರಿಗೆ ಪರಿಚಯಿಸಿದ ಪ್ರಕಾಶಕರಿಂದ ಮೊದಲುಗೊಂಡು, ಅದರಲ್ಲಿನ ಚಿತ್ರಕಲೆ, ಮುಖಪುಟ, ಅದರ ಸಂಪಾದನೆ, ಮುದ್ರಣ ಹೀಗೆ ಹತ್ತು ಹಲವು ಪ್ರಯೋಗಗಳನ್ನು ನಮ್ಮ ಭಾಷೆಯ ಬೆಳವಣಿಗೆಯ ಭಾಗವಾಗಿ ನಾವು ನೋಡಬಹುದು, ಅಭ್ಯಸಿಸಬಹುದು.  ‍ಕಾಲಕ್ಕೆ ತಕ್ಕಂತೆ ಭಾಷೆಯ ಉಳಿವಿಗೆ ಆಯಾ ಕಾಲದ ವಿಜ್ಞಾನ, ತಂತ್ರಜ್ಞಾನದ ಲಭ್ಯತೆಗಳನ್ನು ಭಾಷಾ ತಂತ್ರಜ್ಞಾನದ ಬೆಳೆವಣಿಗೆಯ ಆಯಾಮದ ಮೂಲಕ ಒಗ್ಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಕನ್ನಡದ ಭಾಷೆ ಕಂಪ್ಯೂಟರಿನ ಪರದೆಯ ಜೊತೆಗೆ ಇತರೆ ಬಹುಮಾಧ್ಯಮಗಳಲ್ಲೂ, ತಂತ್ರಜ್ಞಾನ ಪ್ರೇರಿತ ಅನ್ವಯಗಳಲ್ಲೂ ಸಿಗುವಂತಾಗಿರುವುದು ಈ ಬೆಳವಣಿಗೆಯ ಭಾಗವೇ ಆಗಿದೆ. ಇಂಟರ್ನೆಟ್ ಲಭ್ಯತೆ ಹಾಗೂ ಯುನಿಕೋಡ್ ಶಿಷ್ಟತೆಗಳ ಬಳಕೆ ಹೆಚ್ಚುತ್ತಿದ್ದಂತೆ ಇಂಗ್ಲೀಷ್ ಜೊತೆಗೆ ಜನ ತಮ್ಮ ಭಾಷೆಗಳಲ್ಲೇ ಮಾಹಿತಿ ಸಂವಹನಕ್ಕೆ ಮುಂದಾದರು. ಜ್ಞಾನ ಪ್ರಸರಣೆ ಹಾಗೂ ಮಾಹಿತಿಯ ಆಗರ ಕೈಬೆರಳಿನ ಅಂಚಿಗೆ ಸರಿದಾಗ, ಪುಸ್ತಕಗಳಿಗೂ ಇದರ ಡಿಜಿಟಲ್ ಟಚ್ ಒದಗಿಬಂತು. ಕಿಂಡಲ್, ಆಪಲ್ ಬುಕ್, ಲುಲು, ಗೂಗಲ್ ಪ್ಲೇ ಬುಕ್ ಹೀಗೆ ಹತ್ತು ಹಲವ

ಕನ್ನಡ ರಾಜ್ಯೋತ್ಸವದೊಂದಿಗೆ ಒದಗಿ ಬಂದ ಸೌಭಾಗ್ಯ

ಇಮೇಜ್
  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)ಮತ್ತು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3190 Rotary International District 3190  ಜಂಟಿಯಾಗಿ ಆಯೋಜಿಸಿದ್ದ ‍ ಕನ್ನಡ ರಾಜ್ಯೋತ್ಸವದಲ್ಲಿ ‍ ನಮ್ಮೆಲ್ಲರ ಹೆಮ್ಮೆಯ Padmanbha Rao   ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ ನೆಡೆದ ಈ ಕಾರ್ಯಕ್ರಮದಲ್ಲಿ ಅವರು ನೇರವಾಗಿ ಭಾಗವಹಿಸಲು ಸಾಧ್ಯವಾಗದಿದ್ದರಿಂದ ‍ , ಅವರನ್ನು ‍ ಅವರ ಸ್ವಗೃಹದಲ್ಲಿ ಸನ್ಮಾನಿಸಿದ ವಿಡಿಯೋವನ್ನು ಕಾರ್ಯಕ್ರಮದ ‍ ಲ್ಲಿ ಬಿತ್ತರಿಸಲಾಯಿತು. ಡಿಜಿಟ ‍ ಲ್ ಕನ್ನಡದ ಕನಸುಗಳನ್ನು ಕಟ್ಟುವವರಿಗೆಲ್ಲರಿಗೂ ನಗುನಗುತ್ತಾ ಬೆಂಬಲ ನೀಡುವ ‍ , ಸಲಹೆ ಸೂಚನೆಗಳನ್ನು ನೀಡುವ ಶ್ರೀ ಕೆ. ಪಿ ರಾವ್ ಅವರ ಜೊತೆಗೆ ನನಗೂ ವೇದಿಕೆ ಹಂಚಿಕೊಳ್ಳುವ ಭಾಗ್ಯ ‍ ಒದಗಿ ಬಂತು. ಇದು ನನ್ನ ಪುಣ್ಯವೇ ಸರಿ ‍ ಕನ್ನಡ ಡಿಜಿಟಲೀಕರಣಕ್ಕೆ ‍ ಸಮುದಾಯದ ಸುತ್ತಲಿನ ಕೆಲಸಗಳನ್ನು ಗುರುತಿಸಿ ‍ ಪ್ರಶಸ್ತಿ ನೀಡಿದ ರೋಟರಿ ಹಾಗೂ ಎಫ್‌ಕೆಸಿಸಿಐ ಸಂಸ್ಥೆಗಳಿಗೆ ಮತ್ತು ಇದಕ್ಕೆ ಕಾರಣಕ ‍ ರ್ತರಾದ ಎಲ್ಲರಿಗೂ ‍ ಧನ್ಯವಾದಗಳು ‍ . ಕನ್ನಡದ ಕೆಲಸಗಳನ್ನು ಪರದೆಯ ಹಿಂದೆ ನಿಂತು ಮುಗಿಸ ‍ ಲು ಇಚ್ಚಿಸುವ ಕೆಲಸಗಳಿಗೆ ಪರ ‍ ದೆ ಆಚೆಗಿನ ಕನ್ನಡಿಗರು ಶಕ್ತಿ ತುಂಬಿದರೆ ‍ , ಮತ್ತಷ್ಟು ಕನ್ನಡದ ಕಾಯಕಗಳಿಗೆ ಪ್ರೇರಣೆ ‍ ಸಿಗುತ್ತದೆ ಎಂದು ನಂಬಿದ್ದೇನೆ. Like Comment Share

ಡಿಜಿಟಲ್ ಅಂಗಳಕ್ಕೆ ಕನ್ನಡ

ಇಮೇಜ್
ನವೆಂಬರ್ ೮, ೨೦೨೦ರಂದು ವಿಜಯ ಕರ್ನಾಟಕದ ‍ ಭವಿಷ್ಯಕ್ಕಾಗಿ ಕನ್ನಡ ಕಹಳೆ ಭಾಗ -8 ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಡಿಜಿಟಲ್ ಅಂಗಳಕ್ಕೆ ಕನ್ನಡ ವಿಷಯದ ವಿಷಯ ಹಾಗೂ ವಿಡಿಯೋ ಇಲ್ಲಿದೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಮತ್ತಷ್ಟು ಕನ್ನಡದ ಕೆಲಸಗಳಿಗೆ ಜೊತೆಯಾಗಿ.   ೨೧ನೆಯ ಶತಮಾನ, ಸಧ್ಯಕ್ಕೆ ಕರೋನಾದ ನಡುವೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಕನ್ನಡ ಹಬ್ಬಕ್ಕೆ ನಮ್ಮೆಲ್ಲರ ಸಮಾಗಮ ಡಿಜಿಟಲ್ ಮಾಧ್ಯಮದ ಮೂಲಕ ಆಗುತ್ತಿದೆ. ಈ ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಎಲ್ಲಿ ಮನೆ ಮಾಡಿದೆ ಎಂದು ಕೇಳುವುದ‍ರಿಂದ ಮುಂದುವರೆದು, ಜಗತ್ತಿನಾದ್ಯಂತ ಇಂದು ಕನ್ನಡ ಡಿಜಿಟಲ್ ಅಂಗಳದಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ ಎಂದು ಬೀಗುವ ಕಾಲ ಬಂದಿದೆ. ಇದೆಲ್ಲದರ ನಡುವೆ ಜಾಗತಿಕ ಮಟ್ಟದಲ್ಲಿ ಕನ್ನಡದ ಸ್ಥಿತಿಗತಿಗಳನ್ನು ವಿವಿಧ ಅಯಾಮದಿಂದ ‌ನೋಡುವ ತುರ್ತು ಅವಶ್ಯಕತೆ ಇದೆ.   ಕನ್ನಡ ಭಾಷೆ ಎಂದರೆ ಅದು ಅನ್ನದ ಭಾಷೆ ಆಗಬೇಕು, ಬದುಕಿನ ಭಾಷೆ ಆಗಬೇಕು - ಇದು ಘೋಷ ವಾಕ್ಯ. ಹೇಗೆ, ಇದುವರೆಗೆ ಅನ್ನದ ಭಾಷೆ ಆಗಿರಲಿಲ್ಲವೇ ನಮ್ಮ ಕನ್ನಡ? ‍ಇದಕ್ಕೆ ಹೊಸ ಪರಿಭಾಷೆ ಬರೆಯಬೇಕೆ? ಎಂಬ ಪ್ರಶ್ನೆಗಳು ಹಲವರಿಗೆ ಬಂದಿರಲೂಬಹುದು.  ಡಿಜಿಟಲ್ ಅಂಗಳದಲ್ಲಿ ಇದು ಒಂದುಮಟ್ಟಕ್ಕೆ ನಿಜ. ಕನ್ನಡಿಗರು ತಂತ್ರಜ್ಞಾನದ ಮಟ್ಟಿಗೆ ಬಳಕೆದಾರರು. ಕನ್ನಡಿಗನಿಗೆ ಕಂಪ್ಯೂಟರ್, ಮೊಬೈಲ್, ಟ್ಯಾಬ್ ಹೀಗೆ ಎಲ್ಲ ಡಿಜಿಟಲ್ ಪರದೆಗಳ ಮೇಲೆ ಇಂದು ಕನ್ನಡ ಮೂಡುತ್ತಿದ್ದು, ತನ್