ನನ್ನ ಬಗ್ಗೆ

ಸಂಕ್ಷಿಪ್ತ ಪರಿಚಯ: ಓಂಶಿವಪ್ರಕಾಶ್. ಎಚ್. ಎಲ್.

ಮೂಲತಃ ಬೆಂಗಳೂರಿನವರಾದ ನಾನು., ಕಳೆದ ೧೮ ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಿಕ್ಷಕನಾಗಿ, ತಂತ್ರಜ್ಞನಾಗಿ, ತಂತ್ರಜ್ಞಾನ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಸಧ್ಯಕ್ಕೆ ಬೆಂಗಳೂರಿನ ಕಾರ‍್ಮಾಟೆಕ್ ಕಂಪೆನಿಯ ತಂತ್ರಜ್ಞಾನ ಮತ್ತು ವ್ಯಾವಹಾರಿಕ ಅಭಿವೃದ್ಧಿಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ೨೦೦೬ ರಿಂದ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ (Free & Open Source Software) ಬಗ್ಗೆ ಕನ್ನಡದಲ್ಲಿ ಲಿನಕ್ಸಾಯಣ‌.ನೆಟ್‌ನಲ್ಲಿ ಬರೆಯುತ್ತಿದ್ದು - ಇಂದಿಗೂ ಇದರ ಎಲ್ಲ ಲೇಖನಗಳು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿ ಲಭ್ಯವಿವೆ. ಕನ್ನಡ ತಂತ್ರಜ್ಞಾನವನ್ನು ಸರಳವಾಗಿ ತಿಳಿಸುವುದು ಹಾಗೂ ಪ್ರಚುರಪಡಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು. ಬರವಣಿಗೆ ಮುಂದೆ ಸ್ವತಂತ್ರ ತಂತ್ರಾಂಶದ ಸುತ್ತ ಕನ್ನಡವನ್ನು ಚಳುವಳಿಯ ರೂಪದಲ್ಲಿ ಬದಲಿಸಿ - ಗ್ನು/ಲಿನಕ್ಸ್ ಹಬ್ಬ, ವಿಕಿಪೀಡಿಯಾ ಸಂಪಾದನೋತ್ಸವಗಳು ಇತ್ಯಾದಿಗಳನ್ನು ಅನೇಕ ಸಮಾನ ಮನಸ್ಕರೊಂದಿಗೆ ನೆಡೆಸಿಕೊಂಡು ಬರಲು ಪ್ರೇರೇಪಿಸಿತು. ೨೦೧೦ ರಿಂದಸಂಚಯ - ‍ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ ಹಾಗೂ ಅಧ್ಯಯನ ವೇದಿಕೆ ಮೂಲಕ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ವಚನ ಸಂಚಯ, ದಾಸ ಸಂಚಯ, ಸರ್ವಜ್ಞ ಸಂಚಯ, ರನ್ನ ಜನ್ನ ಹೀಗೆ ಹತ್ತು ಹಲವು ಕನ್ನಡ ಸಾಹಿತ್ಯ ಪ್ರಕಾರಗಳನ್ನು ಜನ ಸಾಮಾನ್ಯ ತಾನೇ ಸಂಶೋಧಿಸುವಂತೆ ಸಹಕರಿಸುವ ಪರಿಕರಗಳನ್ನು ಇಂಟರ್ನೆಟ್‌ ಮೂಲಕ ಕನ್ನಡಿಗರಿಗೆ ಲಭ್ಯವಾಗಿಸುತ್ತಿದ್ದೇವೆ. ತಂತ್ರಾಂಶಗಳಲ್ಲಿ ಕನ್ನಡದ ಸುತ್ತ ಬಳಸಬೇಕಿರುವ ಶಿಷ್ಟತೆಗಳನ್ನು ನಾವು ಸೃಷ್ಟಿಸಿದ ತಂತ್ರಾಂಶಗಳಲ್ಲಿ ಬಳಸಿ ತೋರಿಸುವ ಮೂಲಕ ಉದಾಹರಣೆ ಆಗುತ್ತಿರುವುದು ಸಂಚಯದ ವಿಶೇಷ. ಹಳೆಯ ಕನ್ನಡದ ಪುಸ್ತಕಗಳನ್ನು ಡಿಜಿಟಲೀಕರಿಸುವುದು, ಮುಕ್ತವಾಗಿ ಸಮುದಾಯ ಸಹಭಾಗಿತ್ವದ ಕೆಲಸಗಳನ್ನು ನಿರ್ವಹಿಸುವುದು ಸಂಚಯದ ಇತರೆ ವಿಶೇಷತೆಗಳು.

ಸಂಚಾಲಕರು & ಸಹ-ಸೃಷ್ಟಿಕರ್ತhttps://sanchaya.orgಸಂಚಯ - ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍
, https://sanchifoundation.org   ‍`ಸಂಚಿ ಫೌಂಡೇಷನ್’ - “ಸಂಚಿಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ದಾಖಲೀಕರಣದ ಕೆಲಸದಲ್ಲಿ ತೊಡಗಿದೆ.

ಸಂಸ್ಥಾಪಿಸಿದ ಕನ್ನಡ ಜಾಲತಾಣಾಗಳು ಮತ್ತು ತಂತ್ರಜ್ಞಾನ ಸಮುದಾಯಗಳು


1. ಮಾಹಿತಿ ತಂತ್ರಜ್ಞಾನಕ್ಕಾಗಿ ಲಿನಕ್ಸಾಯಣ.ನೆಟ್ :  https://www.linuxaayana.net


ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ - ಪ್ರಾಯೋಗಿಕವಾಗಿ ಮುಕ್ತ ತಂತ್ರಾಂಶವನ್ನು ಕನ್ನಡಿಗರಿಗೆ ತಲುಪಿಸುತ್ತಿರುವ ನನ್ನ ಬ್ಲಾಗ್ ೨೦೦೬ ರಿಂದ ಪ್ರಸ್ತುತಿಯಲ್ಲಿದ್ದು ಈಗಲೂ ಮಾಹಿತಿ ತಂತ್ರಜ್ಞಾನದ ಅನೇಕ ಬೆಳವಣಿಗೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದೆ.

2. ಮಕ್ಕಳಿಗಾಗಿ ಕಿಂದರಜೋಗಿ.ಕಾಮ್ : http://kindarijogi.com

ವಿಜ್ಞಾನ, ತಂತ್ರಜ್ಞಾನ, ಕಲೆ ಇತ್ಯಾದಿಗಳನ್ನು ಮಕ್ಕಳ ಇಳಿ ವಯಸ್ಸಿನಿಂದಲೇ ಪ್ರಾಯೋಗಿಕವಾಗಿ ಕಲಿಸಲು ಸಾಧ್ಯ ಮತ್ತು ಅದಕ್ಕೆ ಬೇಕಿರುವ ಅನೇಕ ಸವಲತ್ತುಗಳನ್ನು ಸಮುದಾಯದ ಮೂಲಕ ಕ್ರೂಡೀಕರಿಸಿ ಇಂಟರ್ನೆಟ್ ಮೂಲಕ ತಲುಪಲಾರದ ಪ್ರದೇಶಕ್ಕೂ ತಲುಪಿಸಲು ಬಹುದು. ಈ ಕಾರಣಕ್ಕಾಗಿ ಕಿಂದರಜೋಗಿ.ಕಾಮ್ ಅನ್ನು ಕಿನ್ನರರಿಗಾಗಿ ಪರಿಚಯಿಸಲಾಗಿದೆ. ಇತ್ತೀಚೆಗೆ ಕಿಂದರಜೋಗಿ.ಕಾಮ್ ಅಂಚೆಇಲಾಖೆ ವಿಷಯಾಧಾರಿತ ಚಿತ್ರಕಲಾ ಸ್ವರ್ಧೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ ಮಕ್ಕಳು ಅಂಜೆ ಮೂಲಕ ಭಾಗವಹಿಸಿದ್ದರು.

3. ಸಂಚಯ:  https://sanchaya.org


ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ಸಂಚಯಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ವಚನ ಸಂಚಯ ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದರಲ್ಲಿ ಕಾರ್ಯನಿರತವಾಗಿದೆ.‍

      ಸಂಚಯದ ಭಾಷಾ ಸಂಶೋಧನೆ‍ಯ ಸುತ್ತಲಿನ ಯೋಜನೆಗಳು

1.    ವಚನ ಸಂಚಯ‍ - https://vachana.sanchaya.net
2.    ದಾಸ ಸಂಚಯ - https://daasa.sanchaya.net
3.    ಸರ್ವಜ್ಞ ಸಂಚಯ - https://sarvajna.sanchaya.net
4.    ರನ್ನ ಸಂಚಯhttps://ranna.sanchaya.net
5.     ಜನ್ನ ಸಂಚಯ -https://janna.sanchaya.net

·       ಪದ ಸಂಚಯ https://pada.sanchaya.net -  ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿ ತೋರಿಸಿದ ನಿಘಂಟುಗಳ ಸಂಚಯ (ಇನ್ನೂ ಪ್ರತಿಕ್ರಿಯೆ ಬಂದಿಲ್ಲ)
·      ಪುಸ್ತಕಗಳ ಡಿಜಿಟೈಜೇಷನ್ ಯೋಜನೆ -  ಯೋಜನೆಯ ಕೊಂಡಿhttps://sanchaya.org/project/ಪುಸ್ತಕ-ಡಿಜಿಟೈಜೇಷನ್-ಯೋಜನೆ/

      ಸಮುದಾಯ ಆಧಾರಿತ ಕೆಲಸದ ವೇದಿಕೆಗಳು

      ಸಮೂಹ ಸಂಚಯ - https://samooha.sanchaya.net  - ಕನ್ನಡದಲ್ಲಿ ಸಮುದಾಯದ ಮೂಲಕ ಸಾಧ್ಯವಾಗಿಸಬಲ್ಲ ಯೋಜನೆಗಳ ವೇದಿಕೆ
      ಪುಸ್ತಕ ಸಂಚಯ - https://pustaka.sanchaya.net  - ಡಿಜಿಟಲ್ ಲೈಬ್ರರಿಗಳಲ್ಲಿನ ಕನ್ನಡ ಪುಸ್ತಕಗಳನ್ನು ಕನ್ನಡದಲ್ಲೇ ಹುಡುಕಲು ಸಾಧ್ಯವಾಗಿಸಿದ ಯೋಜನೆ
      FUEL (Frequently Used Entries in Localization) -  ಯೋಜನೆ ಕನ್ನಡ ‍ತಾಂತ್ರಿಕ ಪದಕೋಶಗಳ ‍ಏಕೀಕರಣಕ್ಕೆ ಕಾರ್ಯಾಗಾರಗಳನ್ನು ಇದರ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ತಂತ್ರಜ್ಞಾನದ ಮುಕ್ತ ಮತ್ತು ಸ್ವತಂತ್ರ ಚಳುವಳಿಯ ಸುತ್ತ ಚಳುವಳಿ, ಕಾರ್ಯಕ್ರಮ, ಸಮುದಾಯ ಮತ್ತು ಸಂಸ್ಥೆಗಳು


1. ಕಂಪ್ಯೂಟರಿನಲ್ಲಿ ಕನ್ನಡವನ್ನು ಉಳಿಸಿ:


ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಕನ್ನಡ ಚಳುವಳಿಯ ಸುತ್ತಲಿನ ಮೊಟ್ಟ ಮೊದಲ ಕಾರ್ಯಕ್ರಮ

2. ಗ್ನು/ಲಿನಕ್ಸ್ ಹಬ್ಬ

ಕಳೆದ ಹಲವಾರು ವರ್ಷಗಳಿಂದ ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ (Free and Open Source Software) ಬಗ್ಗೆ ಕನ್ನಡದಲ್ಲಿ ಬ್ಲಾಗ್ ಬರೆಯುವ ಮೂಲಕ ಕನ್ನಡಿಗರೊಂದಿಗೆ ಅವರ ಅರಿವನ್ನು ಹಂಚಿಕೊಂಡಿದ್ದಾರೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಜನಸಾಮಾನ್ಯರಿಗೆ ತಲುಪಿಸ‍ಲು ಕನ್ನಡದಲ್ಲಿ ರೂಪಿಸಿದ ಮೊದಲ ಕಾರ್ಯಕ್ರಮ 'ಗ್ನು/ಲಿನಕ್ಸ್ ಹಬ್ಬ'ವನ್ನು ಹುಟ್ಟುಹಾಕಿದವರಲ್ಲಿ ಇವರೂ ಒಬ್ಬರು.

3. ಹೆಜ್ಜೆ : 

ಭಾಷೆ ಮತ್ತು ತಂತ್ರಜ್ಞಾನದ ಸುತ್ತ ಸಮುದಾಯ ಸಂಚಲನೆಗೆ ರೂಪಿಸಿದ ಕಾರ್ಯಕ್ರಮ

4. ಅರಿವಿನ ಅಲೆಗಳು: 


ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಲೇಖನಗಳನ್ನು ಯುವಕರು ಬರೆಯಲು ಪ್ರೇರೇಪಿಸಲು ೨೦೧೧ರ ಸ್ವಾತಂತ್ರೋತ್ಸವ ಸಂದರ್ಭದಲಿ ಸಂಚಯ ತಂಡ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಮೊದಲ ಕನ್ನಡ ಇ-ಪುಸ್ತಕ 'ಅರಿವಿನ ಅಲೆಗಳು' ಅನ್ನು ಹೊರತಂದಿತು., ನಾನು ಇದರ ಸಂಪಾದಕನಾಗಿದ್ದರು. ತಾಂತ್ರಿಕ ಪರಿಣಿತಿ ಹೊಂದಿದ ೧೪ ಕನ್ನಡಿಗರ ಲೇಖನಗಳು ಈ ಪುಸ್ತಕಗಳ ಮೂಲಕ ಸಾಮಾನ್ಯರಿಗೆ ತಂತ್ರಜ್ಞಾನ ಪರಿಚಯ ಮಾಡಿಕೊಡುತ್ತವೆ. ಮೂರು ವರ್ಷಗಳ ಕಾಲ ಇದರ ಕೆಲಸಗಳು ನೆಡೆದವು. ಈ ಲೇಖನಗಳು ಸಂಯುಕ್ತ ಕರ್ನಾಟಕದಲ್ಲೂ ಪ್ರಕಟಗೊಂಡಿವೆ.

5. ಸಂಚಿ ಫೌಂಡೇಷನ್:


ಇತಿಹಾಸವನ್ನು ಆಯಾ ಕಾಲದಲ್ಲಿ ಲಭ್ಯವಿರುವ ಜ್ಞಾನ ಮೂಲಗಳ ಆಧಾರದಿಂದ ಬರೆಯಲಾಗುತ್ತದೆ. ಇಂದು ಜಗತ್ತಿನ ವಿವಿಧ ಮೂಲೆಗಳಿಂದ ಆ ರೀತಿಯ ಇತಿಹಾಸದ ಬರವಣಿಗೆಯಾಗುತ್ತಿರುವುದು, ದಾಖಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೂ, ಕನ್ನಡದಲ್ಲಿ, ಈ ಕೆಲಸ ಅಷ್ಟಾಗಿ ಆಗಿಲ್ಲ. ಆಗಿರುವ ಸ್ವಲ್ಪ ಕೆಲಸವೂ, ದುರ್ಲಭವಾಗಿದ್ದು, ಸಾಮಾನ್ಯರಿಗೆ ಅವುಗಳನ್ನು ಪಡೆಯುವುದೂ, ಬಳಸುವುದೂ ಸಾಕಷ್ಟು ಕಷ್ಟವೇ ಆಗಿದೆ. ಇದಲ್ಲದೆ, ಇನ್ನೊಂದು ತೊಂದರೆಯೆಂದರೆ, ಆ ಜ್ಞಾನ ಮೂಲಗಳೆಲ್ಲವೂ, ಒಂದೆಡೆ ಲಭ್ಯವಾಗುತ್ತಿಲ್ಲ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ಕೆಲವು ಗೆಳೆಯರ ಜೊತೆಯಾಗಿ ಕೇಂದ್ರೀಕೃತವಾಗಿ ಜ್ಞಾನ ಭಂಡಾರದ ಲಭ್ಯತೆಯನ್ನು ಸೃಷ್ಟಿಸಲು, ದಾಖಲಾತಿಗಳನ್ನು ಮಾಡಲು, ಈ ಕುರಿತು ಅರಿವು ಮೂಡಿಸಲು `ಸಂಚಿ ಫೌಂಡೇಷನ್ಸ್ಥಾಪಿಸಿದ್ದಾರೆ.

ವಿಕಿಪೀಡಿಯ ಸಮುದಾಯಗಳು: 


೨೦೦೭ರಿಂದ ಕನ್ನಡ ಹಾಗೂ ಇಂಗ್ಲೀಷ್ ವಿಕಿಪೀಡಿಯ ಮತ್ತು ಇತರೆ ವಿಕಿಮೀಡಿಯ ಸಮುದಾಯಗಳಲ್ಲಿ ಸಕ್ರಿಯನಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ತಂತ್ರಜ್ಞಾನ ಸಂಬಂಧದ ಕೆಲಸಗಳನ್ನು ಹೆಚ್ಚಾಗಿ ಮಾಡಿದ್ದು, ಸಮುದಾಯವನ್ನು ಸೋಶಿಯಲ್ ಮೀಡಿಯದ ಮೂಲಕ, ಕಮ್ಮಟಗಳ ಮೂಲಕ ಜನರ ಬಳಿ ತರಲು ಕೆಲಸ ಮಾಡಿರುತ್ತಾರೆ. ಕನ್ನಡ ವಿಕಿಪೀಡಿಯದ ಮೇಲ್ವಿಚಾರಕರಲ್ಲಿ ಇವರೂ ಒಬ್ಬರು. ಕನ್ನಡ ವಿಕಿಸೋರ್ಸ್, ವಿಕಿ ಕಾಮನ್ಸ್ ಯೋಜನೆಗಳಲ್ಲಿಯೂ ತಮ್ಮ ಕಾಣಿಕೆಯನ್ನು ನೀಡಿರುತ್ತಾರೆ.

ಮೋಝಿಲ್ಲಾ ಫೌಂಡೇಷನ್:

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳಲ್ಲಿನ ಅತಿ ಮುಖ್ಯ ಯೋಜನೆಯಾದ ಮೋಝಿಲ್ಲಾ ಫೌಂಡೇಷನ್ ನಲ್ಲಿ ಸಮುದಾಯದ ಕೆಲಸಗಳನ್ನು ಪ್ರತಿನಿಧಿಸುವ ಬೆಂಗಳೂರಿನ ಪ್ರತಿನಿಧಿಗಳಲ್ಲಿ ಇವರೂ ಒಬ್ಬರು.

ಕನ್ನಡ ಲೋಕಲೈಸೇಷನ್

ಈ ಕೆಳಗಿನ ಯೋಜನೆಗಳಲ್ಲಿ ಕನ್ನಡ ಲೋಕಲೈಸೇಷನ್ ಕೆಲಸದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿರುತ್ತಾರೆ.
ಉಬುಂಟು
ವರ್ಡ್‍ಪ್ರಸ್
ಫ಼ೈರ್‍ಫ಼ಾಕ್ಸ್
ಲಿಬೆರೆ ಆಫ಼ಿಸ್
ಮೀಡೀಯಾವಿಕಿ
FUEL

ಇವರುವ ಭಾಗವಹಿಸಿರುವ ಪ್ರಮುಖ ಕನ್ನಡ ಕಾರ್ಯಕ್ರಮಗಳು/ಕಮ್ಮಟಗಳು

   ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ -೨೦೧೨ಗಂಗಾವತಿ, ಕೊಪ್ಪಳ ಜಿಲ್ಲೆ
      ಗೋಷ್ಠಿ - ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

   ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ೨೦೧೫, ಶ್ರವಣಬೆಳಗೊಳ, ಹಾಸನ ಜಿಲ್ಲೆ
      ಗೋಷ್ಠಿ - ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ
ವಿಷಯ - ಭಾಷೆಯ ಉಳಿವಿಗೆ ಸಾಹಿತ್ಯ ಸಂಶೋಧನೆಯ ಸಾಧ್ಯತೆಗಳು - ವಚನ ಸಂಚಯ ಮತ್ತು ಇತರೆ ಯೋಜನೆಗಳು
   ಮಾತೃಭಾಷಾ - ಒಂದು ದಿನದ ರಾಷ್ಟೀಯ ವಿಚಾರ ಸಂಕಿರಣ - ೨೦೧೬ - ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
   ವಚನ ವಿಜಯೋತ್ಸವ - ೨೦೧೪ - ಬೀದರ
   ಬೀದರ್ ಕೋಟೆಯ ಬಳಿ - ಕ್ಯೂಆರ್ ಪೀಡಿಯ ಮಾಹಿತಿ ಫಲಕ ಸ್ಥಾಪನೆ
   ಕಂಪ್ಯೂಟರ್ ಮತ್ತು ಕನ್ನಡ - ಸುರಾನಾ ಕಾಲೇಜಿನ ವಾರ್ಷಿಕ ತರಗತಿಗಳಲ್ಲಿ ಸ್ವತಂತ್ರ ತಂತ್ರಾಂಶ ಮತ್ತು ಸಮುದಾಯಗಳ ಬಗ್ಗೆ ವಿಚಾರವಿನಿಮಯ
   ಸ್ವತಂತ್ರಮ್ ೨೦೧೪ - ಐದನೇ ಅಂತರರಾಷ್ಟ್ರೀಯ ಸ್ವತಂತ್ರ ತಂತ್ರಾಂಶ ಸಮ್ಮೇಳನ, ಕೇರಳ

ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಮುಖ್ಯ ಲೇಖನಗಳು

1. ಪ್ರಜಾವಾಣಿ

      ಮಾರುಕಟ್ಟೆ- ಸ್ವಾತಂತ್ರ್ಯ ಮತ್ತು ನಾವು - ನೆಟ್ ನ್ಯೂಟ್ರಾಲಿಟಿ
      ಇದು ಸೋಷಿಯಲ್ ಮೀಡಿಯಾ ಕಾಲ
      ಎರಡು ಚಕ್ರಗಳ ಪ್ರೀತಿ
     ವಿಕಿಪೀಡಿಯ ಬ್ಲಾಕ್‌ಔಟ್ - ಮಾಹಿತಿ ಇಲ್ಲದ ಬದುಕು - ಕತ್ತಲೆ ಜಗತ್ತು
     ಸೋಶಿಯಲ್ ಮೀಡಿಯಾ ಎಂಬ ಎಲೆಕ್ಟ್ರಾನಿಕ್ ಮಾಧ್ಯಮ ಸಾಂಗತ್ಯ
     ಇಂಟರ್ನೆಟ್‌ನಲ್ಲೊಂದು ಲೋಕ - ಪೈರಸಿ ಶಾಪ - ಮತ್ತಷ್ಟು ವಿಕೃತ ರೂಪಗಳು

2. ಸುಧಾ

      ಮೊಬೈಲ್ ಎಂಬ 'ಎಂ' ಮಂತ್ರದೊಡನೆ - ನಮ್ಮ ಭವಿಷ್ಯ

3. ಉದಯವಾಣಿ

      ಅಂತರ್ಜಾಲದಲ್ಲಿ ಕೋಲಾಹಲ
     ಮಿಥ್ಯಾ ವಾಸ್ತವ

4. ಸಂಯುಕ್ತ ಕರ್ನಾಟಕ

      ಟೆಕ್ ಕನ್ನಡ - ಸಂಯುಕ್ತ ಕರ್ನಾಟಕ ಅಂಕಣ - ಫೆಬ್ರವರಿ ೧೦, ೨೦೧೨ ರಿಂದ

5. ಅವಧಿ

      ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು?

ಪುಸ್ತಕಗಳಲ್ಲಿ

      ವಿಜ್ಞಾನ ಸಾಹಿತ್ಯ 2012 ಮತ್ತು 2013 , ಸಂಪಾದಕರು - ಅಖಿಲೇಶ್ ಚಿಪ್ಪಳಿ, ಕರ್ನಾಟಕ ಸಾಹಿತ್ಯ ಅಕಾಡೆಮಿ
      ಚಲುವ ಕನ್ನಡ, , ಸಂಪಾದಕರು - ಪ್ರೊ. ಸಿ.ವಿ. ಕೆರಿಮನಿ
      ಕಂಪ್ಯೂಟರ್ ಮತ್ತು ಕನ್ನಡ - ಮಿತ್ರ ಮಾಧ್ಯಮ

ಆನ್ಲೈನ್ ಬರಹಗಳು
೧. ಕನ್ನಡ ಬ್ಲಾಗ್: ನನ್ ಮನ --ಏನೋ ಹಾಡುವಾಸೆ... ಕೇಳ್ತೀರಲ್ಲಾ??? http://blog.shivu.in
೨. ಇಂಗ್ಲೀಷ್ ಬ್ಲಾಗ್:    https://platonic.techfiz.info 


ಕಾಮೆಂಟ್‌ಗಳು

 1. maanyare
  nanna bali ondhu Docomo photon plus idhe.
  aadare iga adhu disconnected aagidhe. ega naanu
  keluthiruvudu enendare aa photon + ge
  naavu bere docomo (cell phone sim) balasi
  Internet annu padeyalu saadyave ? ello odhidanenepu
  aarithi maadalu khanditha saadyavendu.
  saadhya vaadare adhu hege maadabekendu
  dayavittu thiilisi.
  inthi nimma blog odhuga Arjun G.Gatti

  ಪ್ರತ್ಯುತ್ತರಅಳಿಸಿ
 2. Namaste,

  ಫೋಟಾನ್+ ನಲ್ಲಿ ಬೇರೆ ಸಿಮ್ ಹಾಕಿಸಬಹುದೇ ಎಂಬುದಕ್ಕೆ ಸಧ್ಯ ನನ್ನ ಬಳಿ ಉತ್ತರ ಇಲ್ಲ. ಹಲವಾರು ವರ್ಷಗಳ ಹಿಂದೆ ಅದಕ್ಕೆ ರಿಲಯನ್ಸ್ ಆಗಲಿ, ಅಥವಾ ಟಾಟಾ ಇಬ್ಬರೂ ಒಪ್ಪಿಗೆ ಕೊಡುತ್ತಿರಲಿಲ್ಲ.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ - ಇಂದು ಮತ್ತು ಮುಂದು

‍ಕನ್ನಡ ಪುಸ್ತಕಗಳು, ಪ್ರಕಾಶನ ಹಾಗೂ ಡಿಜಿಟಲೀಕರಣ

ಚ. ವಾಸುದೇವಯ್ಯ ಮತ್ತು ಕನ್ನಡ ಬಾಲಭೋದೆ